ಮಂಡ್ಯ: ಕೊನೆಗೂ ಎಸ್‍ಪಿ ನೇಮಕ ಗೊಂದಲಕ್ಕೆ ತೆರೆಬಿದ್ದಿದ್ದು, ಇಂದು ಎನ್.ಯತೀಶ್ ಮಂಡ್ಯದಲ್ಲಿ ವಿನೂತನ ಎಸ್‍ಪಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಸಕ್ಕರೆ ನಾಡಿಗೆ ನೂತನ ಎಸ್‍ಪಿ ಯಾರೆಂದು ಎಲ್ಲರಲ್ಲಿಯೂ ಗೊಂದಲ ಮೂಡಿದ್ದು, ಕಳೆದ ಹತ್ತು ದಿನದಿಂದ ಎಸ್‍ಪಿ ಹುದ್ದೆ ಖಾಲಿಯಾಗಿತ್ತು. ಆದರೆ ಕೊನೆಗೂ ಎಸ್‍ಪಿ ನೇಮಕ ಗೊಂದಲಕ್ಕೆ ತೆರೆ ಬಿದ್ದಿದ್ದು, ಗದಗ ಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಎನ್.ಯತೀಶ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತೆ: ರಾಕೇಶ್ ಟಿಕಾಯತ್
Advertisement
ಈ ಹಿಂದೆ ಎಸ್‍ಪಿಯಾಗಿ ನೇಮಕಗೊಂಡಿದ್ದ ಸುಮನ್ ಡಿ.ಪನ್ನೇಕರ್ ಅವರಿಗೆ ಚಾರ್ಜ್ ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಆದರೆ ಈಗ ಯತೀಶ್ ಅವರು ಹೊಸದಾಗಿ ಅಧಿಕಾರಕ್ಕೆ ಬಂದಿದ್ದಾರೆ. ಈ ವೇಳೆ ಯತೀಶ್ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ, ರಾಷ್ಟ್ರೀಯ ಏಕತಾ ದಿನ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ತಿಂಗಳ 20 ರಂದು ನೇಮಕವಾಗಿದ್ದ ಸುಮನ್ ಡಿ ಪನ್ನೇಕರ್ ಉತ್ತರಕನ್ನಡ ಎಸ್‍ಪಿಯಾಗಿ ನೇಮಕಗೊಂಡಿದ್ದಾರೆ.