Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಿಜಬ್ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿರುವಾಗ ಅನುಮತಿ ಕೊಡೋದು ಎಷ್ಟು ಸರಿ?: ರವಿಕುಮಾರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಹಿಜಬ್ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿರುವಾಗ ಅನುಮತಿ ಕೊಡೋದು ಎಷ್ಟು ಸರಿ?: ರವಿಕುಮಾರ್

Bengaluru City

ಹಿಜಬ್ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿರುವಾಗ ಅನುಮತಿ ಕೊಡೋದು ಎಷ್ಟು ಸರಿ?: ರವಿಕುಮಾರ್

Public TV
Last updated: December 23, 2023 4:18 pm
Public TV
Share
3 Min Read
N RAVI KUMAR 1
SHARE

ಬೆಂಗಳೂರು: ಬ್ರಿಟೀಷರು ದೇಶ, ರಾಜ್ಯವನ್ನು ವಿಭಜಿಸಿ ಆಳಿದ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ (N Ravi Kumar) ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಜಬ್ (Hijab) ವಿಷಯ ಇದೀಗ ಸುಪ್ರೀಂ ಕೋರ್ಟಿನಲ್ಲಿದೆ. ಇಂತಹ ಸಂದರ್ಭದಲ್ಲಿ ಹಿಜಬ್‍ಗೆ ಅನುಮತಿ ಕೊಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಈ ವಿಷಯ ಹಿಂದೆ ಬಿಜೆಪಿ (BJP) ಆಡಳಿತದ ಸಂದರ್ಭದಲ್ಲಿ ಹೈಕೋರ್ಟಿಗೆ ಹೋಗಿ, ಹಿಜಬ್ ಬೇಕೇ ಬೇಡವೇ ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಹಿಜಬ್ ಧರಿಸಬಾರದು, ಸಮವಸ್ತ್ರ ಧರಿಸಿ ಹೋಗಬೇಕೆಂದು ಹೈಕೋರ್ಟಿನಿಂದ ತೀರ್ಪು ಬಂದಿತ್ತು ಎಂದು ತಿಳಿಸಿದರು. ಆದರೆ ಶುಕ್ರವಾರ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಹಿಜಬ್ ಧರಿಸಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ ಎಂದು ಟೀಕಿಸಿದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲಾ, ಕಾಲೇಜು, ವಿಶ್ವವಿದ್ಯಾಲಯದಲ್ಲಿ ಮತ, ಧರ್ಮ, ಜಾತಿ, ಪಂಥದ ಆಧಾರದಲ್ಲಿ ವಿದ್ಯಾರ್ಥಿಗಳು ವಿಭಜನೆ ಆಗಬಾರದು, ವಿದ್ಯಾರ್ಥಿಗಳಲ್ಲಿ ಸಾಮರಸ್ಯ, ಸಮಭಾವ, ನಾವು ನಮ್ಮವರು, ಭಾರತೀಯರು ಎಂಬ ಭಾವನೆ ಇರಬೇಕೆಂಬ ಕಾರಣಕ್ಕಾಗಿ ಸಮವಸ್ತ್ರವನ್ನು ಜಾರಿಗೊಳಿಸಿದ್ದರು ಎಂದು ವಿವರಿಸಿದರು.

iran hijab

ಕರ್ನಾಟಕದಲ್ಲಿ 125 ವರ್ಷಗಳಲ್ಲಿ ಕಂಡರಿಯದ ಕಿತ್ತು ತಿನ್ನುವ ಬರಗಾಲದ ಪರಿಸ್ಥಿತಿ ಇದೆ. ಕುಡಿಯಲು ನೀರಿಲ್ಲ; ದನಕರುಗಳಿಗೆ ನೀರಿಲ್ಲ. ಕೆರೆಕಟ್ಟೆಗಳಲ್ಲಿ ನೀರಿಲ್ಲ. ವಿಪರೀತ ಮಳೆ ಕಡಿಮೆ ಆಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಒಂದು ಪೈಸೆಯೂ ಪರಿಹಾರ ಕೊಡದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುವುದಾಗಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುವಾಗ ಹುಬ್ಬಳ್ಳಿಯ ಮೌಲ್ವಿಗಳ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಪ್ರಕಟಿಸಿದ್ದಾರೆ. ಆದರೆ ಹಿಂದೂ ದೇವಾಲಯಗಳಿಗೆ ಒಂದು ಪೈಸೆಯೂ ಇಲ್ಲ ಎಂದು ಆಕ್ಷೇಪ ಸೂಚಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ ಆಗ್ತಿದ್ದಾರೆ: ಯತ್ನಾಳ್ ಕಿಡಿ

ಎಸ್‍ಸಿ, ಎಸ್‍ಟಿಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿಯನ್ನು ತೆಗೆದಿದ್ದಾರೆ. ಇನ್ನೊಂದೆಡೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿದ್ದಾರೆ. ಇದೆಷ್ಟು ಸರಿ ಎಂದು ಕೇಳಿದರು. ರೈತರ ಬೆನ್ನುಮೂಳೆ ಮುರಿಯುವ ಸರ್ಕಾರ ಇದೆಯೆಂದು ಟೀಕಿಸಿದರು. `ಬಹುಸಂಖ್ಯಾತ ಹಿಂದೂಗಳಿಗೆ ಶೂನ್ಯ; ಬಹುಸಂಖ್ಯಾತರಿಗೆ ಬಂಪರ್’ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಎಸ್‍ಸಿ, ಎಸ್‍ಟಿಗಳಿಗೆ ಶೂನ್ಯ, ರಾಜ್ಯದ ಹಿಂದೂ ದೇವಾಲಯಗಳಿಗೆ ಶೂನ್ಯ, ರಾಜ್ಯದ ರೈತರಿಗೆ ಶೂನ್ಯ ಎಂದ ಅವರು, ಇನ್ನೊಂದೆಡೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಟ್ಟಿದ್ದಾರೆ. ಶಾಲಾ ಕಾಲೇಜಿನಲ್ಲಿ ಟಿಪ್ಪು ಜಯಂತಿ ಆಚರಣೆ, ಹಿಜಾಬ್ ಧರಿಸಲು ಅವಕಾಶ, ಪಿಎಫ್‍ಐ ಭಯೋತ್ಪಾದಕರ 175 ಕೇಸ್ ವಾಪಸ್ ಪಡೆದಿದ್ದಾರೆ ಎಂದು ಖಂಡಿಸಿದರು.

N RAVI KUMAR

ರಾಜ್ಯದಲ್ಲಿ ಸಿದ್ದರಾಮಯ್ಯರ ಆಡಳಿತ ಇದೆಯೇ ಅಥವಾ ಟಿಪ್ಪು ಸುಲ್ತಾನ್ ಆಡಳಿತ ಇದೆಯೇ ಎಂದು ಅವರು ಪ್ರಶ್ನಿಸಿದರು. ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಇವರು ಎರಡನೇ ಟಿಪ್ಪುಸುಲ್ತಾನನ ಆಡಳಿತ ಕೊಡುತ್ತಿದ್ದಾರೆ ಎಂದು ದೂರಿದರು. ಇದನ್ನು ಬಿಜೆಪಿ ಖಂಡಿಸುತ್ತದೆ. ಇದರ ವಿರುದ್ಧ ದೊಡ್ಡ ಹೋರಾಟ ಮಾಡಲಿದ್ದೇವೆ ಎಂದರು.

ಪಿಡಿಒಗಳ ವರ್ಗಾವಣೆ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಯವರು ದಂಧೆ ಮಾಡುತ್ತಿದ್ದಾರೆ. ಕಿತ್ತು ತಿನ್ನುವ ಬರದ ಪರಿಸ್ಥಿತಿಯಲ್ಲಿ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ, ಸಚಿವ ಕೃಷ್ಣಬೈರೇಗೌಡರ ಜೊತೆ ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗಿ ಮನವಿಪತ್ರ ಕೊಡುತ್ತಾರೆ. ರಾಜ್ಯದಲ್ಲಿ ದುರಾಡಳಿತ, ಭ್ರಷ್ಟ ಆಡಳಿತ, ಬೆಲೆ ಏರಿಕೆ, ವರ್ಗಾವಣೆ ದಂಧೆ, ಶಾಲೆ, ಕಾಲೇಜುಗಳಲ್ಲಿ ವಿಷಬೀಜ ಬಿತ್ತುವ ಆಡಳಿತ ಇದೆ ಎಂದು ಅವರು ಟೀಕಿಸಿದರು.

ಕಾನೂನು- ಸುವ್ಯವಸ್ಥೆ ಹಾಳಾಗಿದೆ. ವಿದ್ಯಾರ್ಥಿಗಳನ್ನು ಶೌಚಗುಂಡಿಗೆ ಇಳಿಸಿ ಸ್ವಚ್ಛಗೊಳಿಸುವಂತೆ ಮಾಡುತ್ತಿದ್ದಾರೆ. ಇದು ಟಿಪ್ಪುಸುಲ್ತಾನ್ ಹೇಳಿದ ಆಡಳಿತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ನೀತಿಗಳನ್ನು ವಾಪಸ್ ಪಡೆಯದೆ ಇದ್ದಲ್ಲಿ ದೊಡ್ಡ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

TAGGED:bengaluruHijabn ravi kumarsiddaramaiahಬೆಂಗಳೂರುಸಿದ್ದರಾಮಯ್ಯಹಿಜಬ್
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

dubai airport 1
Latest

ದುಬೈ ಏರ್‌ಪೋರ್ಟ್‌ ಬಳಿ ಇರಾನ್ ಡ್ರೋನ್‌ ದಾಳಿ – ವಿಮಾನಗಳ ಹಾರಾಟ ಸ್ಥಗಿತ

Public TV
By Public TV
2 hours ago
Vijayanagara Brother Murder
Bellary

ಆಸ್ತಿ ಕಲಹ – ಸಂಬಂಧಿ ಜೊತೆ ಸೇರಿ ಅಣ್ಣನನ್ನೇ ಕೊಂದ ತಮ್ಮ

Public TV
By Public TV
2 hours ago
Odishas Cuttack Hospital Fire
Latest

ಒಡಿಶಾದ ಕಟಕ್‌ನ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; 10 ರೋಗಿಗಳು ಸಾವು

Public TV
By Public TV
3 hours ago
Hotel Association Meeting With Govt
Bengaluru City

20% ಗ್ಯಾಸ್ ವಿತರಣೆಗೆ ಕೇಂದ್ರ ಗ್ರೀನ್ ಸಿಗ್ನಲ್ – ಇಂದು ಹೋಟೆಲ್ ಸಂಘದಿಂದ ಸರ್ಕಾರದ ಭೇಟಿ

Public TV
By Public TV
3 hours ago
UAE attack
Latest

ಇರಾನ್‌ ಯುದ್ಧದ ಬಗ್ಗೆ ಸುಳ್ಳು ಸುದ್ದಿ, ವೀಡಿಯೋ ಪೋಸ್ಟ್‌ – 19 ಭಾರತೀಯರ ಬಂಧನಕ್ಕೆ UAE ಆದೇಶ

Public TV
By Public TV
3 hours ago
Benjamin Netanyahu
Latest

7,656 ಕೋಟಿ ರೂ. ತುರ್ತು ಮಿಲಿಟರಿ ಬಜೆಟ್‌ಗೆ ಇಸ್ರೇಲ್ ಅನುಮೋದನೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?