ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ (Directors Association) ನೂತನ ಅಧ್ಯಕ್ಷರಾಗಿ ಮಂಗಳೂರು ಮೂಲದ ಎನ್ನಾರೆ.ಕೆ. ವಿಶ್ವನಾಥ್ (NRK Vishwanath) ಆಯ್ಕೆಯಾಗಿದ್ದಾರೆ. ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವ ಎನ್ನಾರ್ ಕೆ. ವಿಶ್ವನಾಥ್ ಹಲವು ದಶಕಗಳಿಂದ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಲ್ಲದ ಕಾರಣಗಳಿಂದಾಗಿ ನಿರ್ದೇಶಕರ ಸುದ್ದಿಯಲ್ಲಿರುತ್ತಿತ್ತು. ಪದಾಧಿಕಾರಿಗಳ ಆಯ್ಕೆಯಲ್ಲಿ ಗೊಂದಲವಿತ್ತು. ಕೆಲ ಅಧ್ಯಕ್ಷರ (President) ವಿರುದ್ಧ ಅಧಿಕಾರ ದುರುಪಯೋಗದ ಆರೋಪವೂ ಕೇಳಿ ಬಂದಿತ್ತು. ನಿರ್ದೇಶಕರ ಸಂಘದಲ್ಲಿನ ಗೊಂದಲಗಳಿಂದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್.ಆರ್. ನಂಜುಂಡೇಗೌಡ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ:ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ
ರಾಜೀನಾಮೆ ನೀಡಿದ ಸ್ಥಾನಕ್ಕೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ವಿಜೇತರಾಗಿದ್ದ ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಾಗೇಂದ್ರ ಅರಸ್ ಮತ್ತು ಜಗದೀಶ್ ಕೊಪ್ಪ ಉಪಾಧ್ಯಕ್ಷರಾಗಿ, ವಿಶಾಲ್ ಧೀರಜ್ ಕಾರ್ಯದರ್ಶಿಯಾಗಿ, ಮಳವಳ್ಳಿ ಸಾಯಿಕೃಷ್ಣ ಜಂಟಿ ಕಾರ್ಯದರ್ಶಿಯಾಗಿ ಸಮಿತಿಯಲ್ಲಿದ್ದಾರೆ.