ಮಂಡ್ಯ: ಒಂದು ಕಡೆ ರಾಹುಲ್ ಗಾಂಧಿಯ (Rahul Gandhi) ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಮಂಡ್ಯ (Mandya) ಜಿಲ್ಲಾ ಕಾಂಗ್ರೆಸ್‍ಗೆ (Congress) ಹೊಸ ಹುಮ್ಮಸ್ಸು ಮೂಡಿದ್ದು, ಒಕ್ಕಲಿಗ ಮತ ಬ್ಯಾಂಕ್ ಅನ್ನು ತನ್ನತ್ತ ಸೆಳೆದು ಜೆಡಿಎಸ್ (JDS) ಕೋಟೆಯನ್ನು ಛಿದ್ರ ಮಾಡುವ ತಂತ್ರವನ್ನು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ (N. Chaluvaraya Swamy) ಹೆಣೆಯಲು ಮುಂದಾಗಿದ್ದಾರೆ.
Advertisement
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಕ್ಕರೆ ನಾಡಿನಲ್ಲಿ ಮೂರು ದಿನ ಸಂಚರಿಸಿದ್ದು, ಹೋದ ಕಡೆಯಲೆಲ್ಲ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಯಾತ್ರೆಯಲ್ಲಿ ಜನಸಾಗರಕ್ಕೆ ರಾಹುಲ್ ಸೇರಿದಂತೆ ರಾಜ್ಯ ನಾಯಕರ ದಂಗಾಗಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲಾ ಕಾಂಗ್ರೆಸ್ ಹೊಸ ಹುಮ್ಮಸ್ಸು ಮೂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್‍ಗೆ ಮತ್ತೆ ಪುಟಿದೇಳುವ ಆತ್ಮವಿಶ್ವಾಸ ಮೂಡಿದೆ. ಇದನ್ನೂ ಓದಿ: ನಾನು ನಿಷ್ಠಾವಂತ ಭಕ್ತ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಕೇಜ್ರಿವಾಲ್
Advertisement
Advertisement
ಈ ಯಾತ್ರೆಯಿಂದ ಒಂದು ರೀತಿ ಕಾಂಗ್ರೆಸ್‍ಗೆ ಬೂಸ್ಟರ್ ಡೋಸ್ ಲಸಿಕೆ ಸಿಕ್ಕಂತಾಗಿದ್ದು, ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕೈದು ಸ್ಥಾನ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ. ಇದರ ಪ್ಲಾನ್ ವರ್ಕೌಟ್ ಆಗಬೇಕು ಅಂದ್ರೆ ಒಕ್ಕಲಿಗರ ಮತಗಳನ್ನು ತನ್ನತ್ತ ಸೆಳೆಯಲೇ ಬೇಕಿರುವ ಅನಿವಾರ್ಯತೆ ಕೂಡ ಕಾಂಗ್ರೆಸ್‍ಗೆ ಇದೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು
Advertisement
ಹಾಗಾಗಿ ಚೆಲುವರಾಯಸ್ವಾಮಿ ಸದಾ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ (DeveGowda) ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ಮೇಲೆ ಫುಲ್ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಮಂಡ್ಯದಲ್ಲಿ ಒಕ್ಕಲಿಗರು ದೇವೇಗೌಡರನ್ನು ಮರೆಯಲ್ಲ ಎಂಬ ಮಾಜಿ ಸಿಎಂ ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೆಲುವರಾಯಸ್ವಾಮಿ, ದೇವೇಗೌಡರು ನಮ್ಮ ನಾಯಕರೇ, ನಾನು ಅವರ ಬಗ್ಗೆ ಲಘುವಾಗಿ ಮಾತನಾಡಲ್ಲ. ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿಗಳು. ಅವರು ಕೂಡ ದೊಡ್ಡವರು. ಅವರ ಬಗ್ಗೆ ಮಾತಾಡೋದು ಬೇಡ ಎನ್ನುವ ಜೆಡಿಎಸ್ ನಾಯಕರ ವಿರುದ್ಧ ಮಾತನಾಡಲು ಹಿಂದೇಟು ಹಾಕ್ತಿದ್ದಾರೆ. ಅಲ್ಲದೇ ನಮ್ಮ ಜಿಲ್ಲೆಯ ಜನರ ಮೇಲೆ ನಂಬಿಕೆ ಇದೆ. ತಮ್ಮ ಮಕ್ಕಳನ್ನು ಜಿಲ್ಲೆಯ ಜನರು ಪ್ರೀತಿಸುತ್ತಾರೆ ಎನ್ನುವ ಮೂಲಕ ಜಿಲ್ಲೆಯ ಒಕ್ಕಲಿಗರು ನನ್ನ ನಾಯಕತ್ವದ ಪಕ್ಷವನ್ನು ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಾಫ್ಟ್ ಮಾತುಗಳಿಂದ ಇದ್ದರಷ್ಟೇ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಸೂಕ್ಷ್ಮತೆ ಅರಿತಿದ್ದಾರೆ ಎನ್ನಲಾಗುತ್ತಿದೆ.