ಮೈಸೂರು: ಸುತ್ತೂರು ಜಾತ್ರೆಯ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಭಾರೀ ಅವಘಡದಿಂದ ಸುತ್ತೂರು ಶ್ರೀಗಳು ಪಾರಾಗಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವದ ನಿಮಿತ್ತ ಇಂದು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯನ್ನು ನೈಟ್ರೋಜನ್ ತುಂಬಿದ್ದ ಬಲೂನ್ ಹಾರಿಬಿಡುವ ಮೂಲಕ ಸುತ್ತೂರು ಶ್ರೀಗಳು ಉದ್ಘಾಟನೆ ಮಾಡುತ್ತಿದ್ದರು. ಈ ವೇಳೆ ಬಲೂನ್‍ಗೆ ಬೆಂಕಿ ತಗುಲಿದ ಪರಿಣಾಮ ಬಲೂನ್‍ಗಳ ಸ್ಫೋಟಗೊಂಡು ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಸ್ಥಳದಲ್ಲಿ ಕುಸ್ತಿಪಟುಗಳು ಹಾಗೂ ಸುತ್ತೂರು ಶ್ರೀಗಳು ಕೂಡ ಇದ್ದರು. ಅದೃಷ್ಟವಶಾತ್ ಶ್ರೀಗಳು ಪಾರಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಲ್ಲಿ ಒಬ್ಬರ ಮುಖದ ಮೇಲೆ ಸುಟ್ಟ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv