ಮೈಸೂರು: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಾಗರಹಾವು ರಕ್ಷಿಸುವ ಮೂಲಕ ಸ್ನೇಕ್ ಶ್ಯಾಮ್ ಬರೋಬ್ಬರಿ 33 ಸಾವಿರ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ನಗರದ ಚಾಮುಂಡೇಶ್ವರಿ ಬಡಾವಣೆಯ ನಿವಾಸಿ ಜಯಭಾಯಿ ಎಂಬವರ ಮನೆಯಲ್ಲಿ ಸಿಲಿಂಡರ್ ಕೆಳಗೆ ನಾಗರ ಹಾವೊಂದು ಸೇರಿಕೊಂಡಿತ್ತು. ಕೂಡಲೇ ಜಯಭಾಯಿ ಅವರು ಸ್ನೇಕ್ ಶ್ಯಾಮ್ ಅವರನ್ನು ಕರೆಸಿದ್ದಾರೆ. ಈ ನಾಗರ ಹಾವನ್ನು ಹಿಡಿದು, ತಮ್ಮ ರಿಜಿಸ್ಟರ್ ನ 33000 ನಂಬರ್ ನಲ್ಲಿ ದಾಖಲಿಸಿಕೊಂಡಿದ್ದಾರೆ.
Advertisement
ಮೈಸೂರು ಮಹಾನಗರ ಪಾಲಿಕೆಯ ಸದಸ್ಯರು ಆಗಿರುವ ಸ್ನೇಕ್ ಶ್ಯಾಮ್ 1997ರಿಂದ ರಿಜಿಸ್ಟರ್ ಮೂಲಕ ಹಾವುಗಳ ರಕ್ಷಣೆಯ ಲೆಕ್ಕೆ ಹಾಕುತ್ತಿದ್ದಾರೆ. 1997ಕ್ಕಿಂತ ಮುಂಚೆ ಅನೇಕ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
Advertisement
ಬಿಜೆಪಿಯಿಂದ ಸ್ಪರ್ಧಿಸಿ ಪಾಲಿಕೆಗೆ ಆಯ್ಕೆಯಾಗಿರುವ ಉರಗ ತಜ್ಞ ಶ್ಯಾಮ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
Advertisement
Advertisement