ಮೈಸೂರು: ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಓರ್ವ ಆರೋಪಿ ಜೇಬಿನಲ್ಲೇ ಕಾಂಡೋಮ್ ಇಟ್ಟುಕೊಂಡು ತಿರುಗಾಡುತ್ತಿದ್ದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಹೌದು. ಬಂಧನಕ್ಕೆ ಒಳಗಾದ ಕಾಮುಕರ ಓರ್ವ ನಟೋರಿಯಸ್ ಕಾಮುಕನಿದ್ದಾನೆ. ಈತ ಯಾವಾಗಲೂ ಜೇಬಿನಲ್ಲಿ ಕಾಂಡೊಂಮ್ ಇಟ್ಟುಕೊಂಡೆ ತಿರುಗಾಡುತ್ತಿದ್ದ. ಇದನ್ನೂ ಓದಿ:ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!
ಗ್ಯಾಂಗ್‍ನ ಉಳಿದ ಸದಸ್ಯರು ಹಣಕ್ಕೆ ಬೇಡಿಕೆ ಇಟ್ಟರೆ ಈ ಕಾಮುಕನಿಗೆ ಸೆಕ್ಸ್ ಮುಖ್ಯವಾಗಿತ್ತು. ತಿಂಗಳಿಗೊಮ್ಮೆ ಮೈಸೂರಿಗೆ ಟ್ರಿಪ್ ರೀತಿ ಈ ಕಾಮುಕ ಬರುತ್ತಿದ್ದ. ಗ್ಯಾಂಗ್ ರೇಪ್ ಸ್ಥಳದಲ್ಲಿ ಸಿಕ್ಕಿದ್ದು ಈತನೇ ಬಳಸಿದ ಕಾಂಡೋಮ್ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಆರೋಪಿಗಳು ನಿರ್ಜನ ಪ್ರದೇಶವನ್ನೇ ಇವರು ಅಪರಾಧ ಕೇಂದ್ರವನ್ನಾಗಿ ಮಾಡುತ್ತಿದ್ದರು. ಈ ಹಿಂದೆಯೂ ಈ ಗ್ಯಾಂಗ್ ಹಲವು ಮಂದಿಗೆ ಬೆದರಿಸಿ ಹಣವನ್ನು ದೋಚಿದ್ದರು. ಆದರೆ ಅವರು ಯಾರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಹೀಗಾಗಿ ಮತ್ತಷ್ಟು ಧೈರ್ಯಗೊಂಡು ನೀಚ ಕೃತ್ಯಕ್ಕೆ ಇಳಿದಿದ್ದರು. ಇದನ್ನೂ ಓದಿ : ಜನರ ಮರ್ಯಾದೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ಯಾಂಗ್ ರೇಪ್ ಕಿರಾತಕರು

