ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಮಾವೋವಾದಿ ನಕ್ಸಲರಿಂದ ಸಂಚು ರೂಪಿಸಲಾಗಿದೆ. ಈ ಮೂಲಕ ಕಮ್ಯೂನಿಷ್ಟರು ರಾಷ್ಟ್ರಪ್ರೇಮದಲ್ಲೂ ಕಮ್ಮಿನಿಷ್ಠರು ಆಗಿದ್ದಾರೆ ಅಂತ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಜೊತೆಯೂ ಸ್ವಾತಂತ್ರ್ಯಾನಂತರ ಚೀನಾ ಜೊತೆಯೂ ಕಮ್ಯೂನಿಷ್ಟರು ಕೈಜೋಡಿಸಿದ್ದವರು. ಇಂಥ ಕಮ್ಮಿನಿಷ್ಟರಿಂದ ಪ್ರಧಾನಿ ಹತ್ಯೆಗೆ ಸಂಚು ರೂಪಿಸುವುದು ಬಿಟ್ಟು ಮತ್ತಿನ್ನೆಂತಹ ರಾಷ್ಟ್ರಪ್ರೇಮ ನಿರೀಕ್ಷೆ ಮಾಡಲು ಸಾಧ್ಯ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ನಕ್ಸಲರ ಸಂಚು!
Advertisement
Advertisement
ಮೋದಿ ಹತ್ಯೆ ಸಂಚು ಬೆಳಕಿಗೆ:
ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವ ಸಂಚನ್ನು ನಕ್ಸಲರು ರೂಪಿಸಿದ್ದರು ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿತ್ತು. ಡಿಸೆಂಬರ್ ನಲ್ಲಿ ನಡೆದ ಭೀಮ-ಕೋರೆಗಾನ್ ಹಿಂಸಾಚಾರ ಹಾಗೂ ನಕ್ಸಲರ ಜೊತೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಒಟ್ಟು ಐದು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದರು. ಇದರಲ್ಲಿ ದಲಿತ ಮುಖಂಡನಾದ ಸುಧೀರ್ ಧಾವಲೆ, ವಕೀಲ ಸುರೇಂದ್ರ ಗಾದ್ಲಿಂಗ್, ಮಹೇಶ್ ಶಾವತ್, ಸೋಮಸೇನ ಮತ್ತು ರೋನ ವಿಲ್ಸನ್ ಇವರನ್ನು ಮುಂಬೈ, ನಾಗ್ಪುರ ದೆಹಲಿಯ ನಿವಾಸದಲ್ಲಿ ಬಂಧಿಸಿದ್ದರು. ದೆಹಲಿಯಲ್ಲಿ ಬಂಧನಕ್ಕೆ ಒಳಗಾದ ರೋನ್ ವಿಲ್ಸನ್ ನ ಮನೆಯನ್ನು ಪರಿಶೀಲಿಸಿದಾಗ ನಕ್ಸಲರಿಗೆ ಸೇರಿದ ಪತ್ರವೊಂದು ಸಿಕ್ಕಿತ್ತು. ಈ ಪತ್ರದಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿ ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವ ಕುರಿತು ಬರೆಯಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮೋದಿ ಕೊಂದು ಭಾರತದ ವಿಭಜನೆ: ಉಗ್ರರಿಗೆ ಹಫೀಜ್ ಸಯೀದ್ ಕರೆ
Advertisement
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಯುವಮೋರ್ಚಾ ಕರ್ನಾಟಕದ ವಿಶೇಷ ಸಭೆಯಲ್ಲಿ pic.twitter.com/UluJzoGbPd
— Pratap Simha (@mepratap) June 9, 2018
Advertisement