ಮೈಸೂರು: ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗುತ್ತಾ ಎಂದು ಪ್ರಶ್ನಿಸಿರುವ ಶಾಸಕ ಸಾ.ರಾ ಮೇಶ್ ಅವರು ನೀವೇ ಸರ್ವೆಗೆ ಬನ್ನಿ ಎಂದು ಸ್ವಾಗತಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ವೆಗೆ ನನ್ನ ಸ್ವಾಗತವಿದೆ. ಸರ್ವೆಗೆ ಆಯುಕ್ತರೇ ಬರಲಿ. ಚೌಟ್ರಿಯನ್ನು ನಾನೇ ಟ್ರ್ಯಾಲಿ ಹಾಕಿ ಹಿಂದೆ ಮುಂದೆ ಸರಿಸೋಕೆ ಆಗಲ್ಲ. ಹೀಗಾಗಿ ಸರ್ವೆಗೆ ನೀವೇ ಬನ್ನಿ ಎಂದು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ.
ರಾಜಕಾಲುವೆ, ಗೋಮಾಳದ ಒಂದೇ ಒಂದು ಗುಂಟೆ ಒತ್ತುವರಿ ಆಗಿದ್ದರೆ ಚೆಕ್ ಮಾಡಿ ಬನ್ನಿ. ನಾನೇ ನಿಮಗೆ ಬೊಕ್ಕೆ ನೀಡಿ ಸರ್ವೆಗೆ ಸ್ವಾಗತಿಸುತ್ತೇನೆ. ನಿಮ್ಮ ಶಿಷ್ಯೆನೋ, ಜ್ಯೂನಿಯರ್ ಇದ್ದಾರಲ್ಲ ಅವರು ಆಸ್ತಿ ಘೋಷಣೆ ಮಾಡಿದ್ದಾರಾ ಮನೀಷ್ ಮುದ್ಗಲ್ ಅವರೇ? ಕಾನೂನಿನಲ್ಲಿ ಅವಕಾಶ ಇದ್ದರೂ ಶಿಷ್ಯೆಗಾಗಿ ಸರ್ವೆಗೆ ಆದೇಶ ಮಾಡಿದ್ದೀರಿ. ನಿಮ್ಮ ಕುಚುಕು ಶಿಷ್ಯೆಗಾಗಿ ಆದೇಶ ಮಾಡಿದ್ದೀರಿ ಎಂದು ಶಾಸಕರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾರಾ ಚೌಟ್ರಿ ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ: ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗ
ಸಾರಾಗೆ ಭೂ ಕಂಟಕ:
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್‍ಬ್ಯಾಕ್ ಆರೋಪ ಮಾಡಿದ್ದ ಶಾಸಕ ಸಾ.ರಾ ಮಹೇಶ್‍ಗೆ ಮತ್ತೆ ಭೂಕಂಟಕ ಎದುರಾದಂತೆ ಇದೆ. ಮೈಸೂರು-ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತನಿಖೆಗೆ ಹೊಸ ತಂಡ ರಚಿಸಿ ಭೂಕಂದಾಯ ಇಲಾಖೆ ಆಯುಕ್ತ ಮನಿಷ್ ಮೌದ್ಗಿಲ್ ಆದೇಶ ಹೊರಡಿಸಿದ್ದರು.
ಕೇರಗಳ್ಳಿಯ ಸರ್ವೇ ನಂಬರ್ 115, ಯಡಹಳ್ಳಿಯ ಸರ್ವೇ ನಂಬರ್ 69,72, ದಟ್ಟಗಳ್ಳಿಯ ಸರ್ವೇ ನಂಬರ್ 130/3, ಲಿಂಗಾಬುದಿ ಸರ್ವೇ ನಂಬರ್ 10ರಲ್ಲಿ ನಡೆದ ಭೂಒತ್ತುವರಿಗಳ ತನಿಖೆ ನಡೆಸಿ 10 ದಿನದಲ್ಲಿ ವರದಿ ನೀಡಲು ಸೂಚಿಸಿದ್ದಾರೆ. ದಟ್ಟಗಳ್ಳಿ ಮತ್ತು ಲಿಂಗಾಬುದಿ ಸರ್ವೇ ನಂಬರ್ ಗಳಲ್ಲಿ ಸಾರಾ ಮಹೇಶ್ ಒಡೆತನದ ತೋಟ, ಕಲ್ಯಾಣ ಮಂಟಪ ಇದೆ. ಹೀಗಾಗಿ ಸಹಜವಾಗಿಯೇ ಇವುಗಳ ಸರ್ವೇ ಕೂಡ ನಡೆಯಲಿದೆ.