Districts

ಸಾರಾ ಚೌಟ್ರಿ ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ: ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗ

Published

on

Share this

ಮೈಸೂರು : ಸಾರಾ ಚೌಟ್ರಿಯನ್ನು ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ ಎಂದು ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗವಾಗಿದೆ.

ನಿರ್ಗಮಿತ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್ ವಿರುದ್ದ ಸಾರಾ ಚೌಟ್ರಿ ವಿಚಾರದಲ್ಲಿ ಮಾಡಿದ್ದ ಆರೋಪ ಬಗ್ಗೆ ಶಾಸಕ ಸಾರಾ ಮಹೇಶ್ ತನಿಖೆಗೆ ಆಗ್ರಹಿಸಿದ್ದರು. ಪ್ರಾದೇಶಿಕ ಆಯುಕ್ತರು ಕಂದಾಯ ಅಧಿಕಾರಿಗಳು ಸಮಿತಿ ರಚಿಸಿ ಸಾರಾ ಚೌಟ್ರಿ ಸರ್ವೆಗೆ ಕಳಿಸಿದ್ದರು. ಇಂದು ಸರ್ವೆ ವರದಿ ಬಹಿರಂಗಗೊಂಡಿದೆ.

ಈ ಹಿನ್ನೆಲೆ ಇಂದು ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ರೋಹಿಣಿ ಸಿಂಧೂರಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ರಾಜಕಾಲುವೆ ಇಲ್ಲ. ಪೂರ್ಣಯ ನಾಲೆ ಮಾತ್ರ ಇರೋದು. ರಾಜಕಾಲುವೆ ಇಲ್ಲದ ಮೇಲೆ ರಾಜಕಾಲುವೆ ಮೇಲೆ ಎಲ್ಲಿಂದ ಚೌಟ್ರಿ ಕಟ್ಟೋದು? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ

ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯವರು ಕೋರ್ಟ್‍ನಲ್ಲಿ ಚೌಟ್ರಿ ಬಗ್ಗೆ ಆದೇಶ ಮಾಡಿದ್ದರೆ ಕೋರ್ಟ್‍ನಲ್ಲಿ ಅದನ್ನು ಪ್ರಶ್ನೆ ಮಾಡುತ್ತಿದೆ. ಆದರೆ ಮಾಧ್ಯಮಗಳಲ್ಲಿ ಈ ಆರೋಪ ಮಾಡಿದರು. ಹೀಗಾಗಿ ಪ್ರಾದೇಶಿಕ ಆಯುಕ್ತರ ಬಳಿ ನ್ಯಾಯ ಕೇಳಿದ್ದೆ. ಚೌಟ್ರಿ ನಿರ್ಮಾಣದ ಜಾಗವನ್ನು 20 ವರ್ಷಗಳ ಹಿಂದೆ ಖರೀದಿಸಿದ್ದೆ. ಚೌಟ್ರಿಯ ಜಾಗದ 6 ಸಾವಿರ ಅಡಿ ರಿಂಗ್ ರಸ್ತೆಗೆ ಹೋಗಿದೆ. ನಾನು ಅದಕ್ಕೆ ಪರಿಹಾರ ಪಡೆದಿಲ್ಲ. ಚೌಟ್ರಿಯನ್ನು ಯಾವುದೇ ಭೂಮಿ ಒತ್ತುವರಿ ಮಾಡಿ ನಿರ್ಮಿಸಿಲ್ಲ. ಹಳ್ಳದ ಭೂಮಿಯ ಮೇಲೂ ಚೌಟ್ರಿ ನಿರ್ಮಾಣವಾಗಿಲ್ಲ. ರಾಜಕಾಲುವೆಯ ಮೇಲೂ ನಿರ್ಮಾಣವಾಗಿಲ್ಲ. ಹಳ್ಳದ ಭೂಮಿಯಿಂದ 70 – 75 ಮೀಟರ್ ದೂರದಲ್ಲಿ ಚೌಟ್ರಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ನಮೂದಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

ರೋಹಿಣಿ ಸಿಂಧೂರಿ ತಮ್ಮ ಪತಿಯ ಆಸ್ತಿ ವಿವರವನ್ನೆ ಸರ್ಕಾರಕ್ಕೆ ಕೊಟ್ಟಿಲ್ಲ. ತಾನು ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ನಿಮಗೆ ಮನಃಸಾಕ್ಷಿ ಇದ್ದರೆ ಆತ್ಮಸಾಕ್ಷಿ ಇದ್ದರೆ ತಾಯಿ ಹೃದಯವಿದ್ದರೆ, ಆತ್ಮಸಾಕ್ಷಿ ಜೊತೆ ಮಾತಾಡಿ ನೀವು ಮಾಡಿದ್ದು ಸರಿನಾ ಕೇಳಿಕೊಳ್ಳಿ. ನನ್ನ ಜೀವನದಲ್ಲೇ ಇಂತಹ ಅಧಿಕಾರಿ ನೋಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ:  ಸಾರಾ ಮಹೇಶ್ ಕಲ್ಯಾಣಮಂಟಪ ವಿವಾದ – ಸರ್ವೇ ಕಾರ್ಯ ಆರಂಭ

Click to comment

Leave a Reply

Your email address will not be published. Required fields are marked *

Advertisement
Advertisement