ವೇಲ್ ನಲ್ಲಿ ಮುಖ ಮುಚ್ಕೊಂಡು ಬೆಂಕಿ ಹಾಕ್ತಾನೆ- ಮೈಸೂರಿನಲ್ಲೊಬ್ಬ ವಿಚಿತ್ರ ವ್ಯಕ್ತಿ

Public TV
1 Min Read
MYS Fire

ಮೈಸೂರು: ನಗರದಲ್ಲೊಬ್ಬ ಆಗುಂತಕನೊಬ್ಬ ತನ್ನ ಮುಖವನ್ನು ವೇಲ್‍ನಲ್ಲಿ ಮುಚ್ಚಿಕೊಂಡು ಬಂದು ಅದ್ವಾಯ ಫಿಲ್ಮ್ ಇನ್ಸಿಟ್ಯೂಟ್ ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿರುವ ಅದ್ವಾಯ ಇನ್ಸಿಟ್ಯೂಟ್ ಕಚೇರಿಯ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆಗುಂತಕ ಬೆಂಕಿ ಹಚ್ಚಿದ್ದರಿಂದ ಕಚೇರಿ ಮುಂಭಾಗದಲ್ಲಿನ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬೆಳಗಿನ ಜಾವ ಗಸ್ತಿನಲ್ಲಿದ್ದ ಪೊಲೀಸರು ಬೆಂಕಿ ಗಮನಿಸಿ ಚಿತ್ರಸಂಸ್ಥೆಯವರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಗರದ ವಿವಿಧೆಡೆ 8ಕ್ಕೂ ಅಧಿಕ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

Mys Fire 1

ನಗರದಲ್ಲಿ ಆರು ತಿಂಗಳ ಹಿಂದೆ ಅದ್ವಾಯ ಚಿತ್ರಸಂಸ್ಥೆ ಪ್ರಾರಂಭವಾಗಿದೆ. ಚಿತ್ರಸಂಸ್ಥೆಯನ್ನು ಅಭಿವೃದ್ಧಿ ಮಾಡಲು ನಾವುಗಳು ಕಷ್ಟಪಡುತ್ತಿದ್ದು, ಇತ್ತಿಚೆಗೆ ನಗರದಲ್ಲಿ ‘ಅಪರ್ಣಾ’ ಎಂಬ ಹೋಟೆಲ್ ಆರಂಭಿಸಿದ್ದೇವೆ. ಈ ಹೋಟೆಲ್‍ನಲ್ಲಿ ಕೇವಲ 10 ರೂ.ಗೆ ಊಟವನ್ನು ನೀಡಲಾಗುತ್ತಿದೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಏನಾದರು ಸಾಧನೆ ಮಾಡಬೇಕೆಂದು ಅದ್ವಾಯ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳು ಬಂಧಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಸಂಸ್ಥೆಯ ಕಲಾವಿದ ಚಂದ್ರು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಾಡಹಗಲೇ ಕಾರ್ ಗಳಿಗೆ ಬೆಂಕಿ- ಕಲಬುರಗಿಯಲ್ಲಿ ಮುಂದುವರೆದ ದುಷ್ಕೃತ್ಯ

https://www.youtube.com/watch?v=BjwvJA_9LMU

Mys Fire 2

Mys Fire 3

Mys Fire 4

Mys Fire 5

Mys Fire 6

Mys Fire 7

Mys Fire 8

Mys Fire 9

Share This Article
Leave a Comment

Leave a Reply

Your email address will not be published. Required fields are marked *