– ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಕಾಮಗಾರಿಗೆ ಚಾಲನೆ
– ಬೆಂಗಳೂರಿನಿಂದ ಕುಶಾಲನಗರಕ್ಕೆ ಎರಡೂವರೆ ಗಂಟೆ ಸಂಚಾರ
ಬೆಂಗಳೂರು: ಮೈಸೂರು-ಕುಶಾಲನಗರ (Mysuru-Kushalanagara Four Lane Highway) ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಬೆಂಗಳೂರು-ಮಂಗಳೂರು (Bengaluru-Mangaluru) ರಸ್ತೆ ಸಂಚಾರಕ್ಕೆ ವೇಗ ಕಲ್ಪಿಸುವ ಕಾಲ ಸನ್ನಿಹಿತವಾಗಿದೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಇದರಿಂದ ಹಲವು ವರ್ಷಗಳ ಬೇಡಿಕೆಯಾಗಿದ್ದ ಕುಶಾಲನಗರದಿಂದ ಮಾಣಿವರೆಗಿನ ರಸ್ತೆ ಚತುಷ್ಪಥವಾಗುವ ಕನಸು ನನಸಾಗುತ್ತಿದೆ. ಇದರಿಂದಾಗಿ ಬೆಂಗಳೂರು-ಮಂಗಳೂರು ಪ್ರಯಾಣದ ಸಮಯ ಇಳಿಕೆಯಾಗಲಿದೆ. ಇದನ್ನೂ ಓದಿ: ಬೆಂಗಳೂರು – ಮೈಸೂರು ಹೆದ್ದಾರಿ ಯಾರಿಗೆ ಉಪಯೋಗ : ಹೆಚ್‍ಡಿಕೆ
Advertisement
Advertisement
ಮೊದಲ ಹಂತವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಇಂದು ಲೋಕಾರ್ಪಣೆಗೊಂಡಿತು. ಈ ಯೋಜನೆಯಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಕ್ಕಂತಾಗಿದೆ. ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಸಮಯ 3 ಗಂಟೆಗಳಿಂದ 75 ನಿಮಿಷಗಳಿಗೆ ಇಳಿಕೆಯಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆ ಹಾಗೂ ಕೃಷಿ ಚಟುವಟಿಕೆ ಅಭಿವೃದ್ಧಿಗೂ ಪ್ರೋತ್ಸಾಹ ದಕ್ಕಿದಂತಾಗಿದೆ.
ಇದರ ಮುಂದುವರಿದ ಭಾಗವಾಗಿ 92.33 ಕಿ.ಮೀ ಉದ್ದದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. 4,128.92 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಮೈಸೂರು-ಕುಶಾಲನಗರ ಚುತುಷ್ಪಥ ಹೆದ್ದಾರಿಯಾದರೆ, ಬೆಂಗಳೂರಿನಿಂದ ಕುಶಾಲನಗರಕ್ಕೆ ಪ್ರಯಾಣಿಸುವ ಸಮಯದಲ್ಲಿ ಇಳಿಕೆಯಾಗಲಿದೆ. ಬೆಂಗಳೂರಿನಿಂದ ಕುಶಾಲನಗರಕ್ಕೆ ಪ್ರಯಾಣಿಸಲು ಹಾಲಿ 5 ಗಂಟೆ ಸಮಯ ಬೇಕು. ಚತುಷ್ಪಥ ಹೆದ್ದಾರಿಯಾದರೆ ಈ ಸಮಯ ಎರಡೂವರೆ ಗಂಟೆಗೆ ಇಳಿಯುತ್ತದೆ. ಆ ಮೂಲಕ ಪ್ರಯಾಣಿಕರಿಗೆ ಎರಡೂವರೆ ಗಂಟೆ ಉಳಿತಾಯವಾಗುತ್ತದೆ. ಈ ಹೆದ್ದಾರಿ ಉತ್ತಮ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ
ಎರಡನೇ ಹಂತದಲ್ಲಿ ಕುಶಾಲನಗರ-ಸಂಪಾಜೆ, ಮೂರನೇ ಹಂತದಲ್ಲಿ ಸಂಪಾಜೆಯಿಂದ-ಮಾಣಿಗೆ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಈ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್ ಸಿಕ್ಕರೆ, ಬೆಂಗಳೂರು-ಮಂಗಳೂರು ಪ್ರಯಾಣದ ಸಮಯದಲ್ಲಿ ಕಡಿತವಾಗಲಿದೆ.
ಸದ್ಯ ಮೈಸೂರು ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ 395 ಕಿ.ಮೀ ಇದ್ದು ಪ್ರಯಾಣಿಸಲು 8 ರಿಂದ 9 ಗಂಟೆ ಸಮಯ ಬೇಕಾಗುತ್ತದೆ. ಚತುಷ್ಪಥ ರಸ್ತೆಯಾದರೆ ಆ ಸಮಯ 5 ಗಂಟೆಗೆ ಇಳಿಕೆಯಾಗಲಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಇದನ್ನೂ ಓದಿ: ಗುಜರಾತ್ ಸಿಎಂ ಆಗಿದ್ದಾಗಲೂ ಸಕ್ಕರೆ ನಾಡಿಗೆ ಬಂದಿದ್ರು ಮೋದಿ