– ರಾಜಕೀಯ ಶುದ್ಧೀಕರಣಕ್ಕೆ 9ನೇ ತಾರೀಖು ಸಾಕ್ಷಿಯಾಗುತ್ತೆ
ಮೈಸೂರು: 9ನೇ ತಾರೀಖಿನ ನಂತರ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿದ್ದರೆ ತಾನೇ ವಿಶ್ವನಾಥ್ ಮಂತ್ರಿಯಾಗುವುದು ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇಂದು ಹುಣಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕೆ.ಎಸ್.ಆರ್.ಟಿ.ಸಿ ಯ ಸ್ಕ್ರಾಪ್ ಮೇಟಿರಿಯಲ್ ಮಾರಿಸೋಕೆ ಯಾರನ್ನೋ ವಿಶ್ವನಾಥ್ ಕರೆದುಕೊಂಡು ಬಂದಿದ್ದರು. ಅವರು ಹುಣಸೂರಿನ ಮುಸ್ಲಿಂ ಅವರನ್ನು ಕರೆದುಕೊಂಡು ಬಂದಿರಲಿಲ್ಲ. ಬದಲಾಗಿ ಚೆನ್ನೈನ ಯಾರೋನ್ನು ಕರೆದುಕೊಂಡು ಬಂದಿದ್ದರು ಎಂದು ವಿಶ್ವನಾಥ್ ವಿರುದ್ಧ ಕಿಡಿಕಾರಿದರು.
ವಿಶ್ರಾಂತಿಗಾಗಿ ತಾಜ್ ಹೋಟೆಲ್‍ಗೆ ಹೋದರೆ ಅದೇ ದೊಡ್ಡ ಅಪರಾಧ ಆಗಿದೆ. ಉಪ ಚುನಾವಣೆ ನಡೆಸೋದಿಕ್ಕೆ ಒಂದೊಂದು ಕ್ಷೇತ್ರಕ್ಕೆ 40 ಕೋಟಿ ಸಿಎಂ ಕೊಟ್ಟಿದ್ದಾರೆ. ಇವರಿಗೆ ಎಷ್ಟು ದುರಹಂಕಾರ ಇದೆ ನೋಡಿ. ಯಾವ ಪಕ್ಷಕ್ಕೂ ಕೊಡೆ ಹಿಡಿಯೋಕೆ ನಾವು ಯಾವ ಮನೆ ಬಾಗಿಲಿಗೂ ಹೋಗಿಲ್ಲ. ಆದರೆ ಅವರೆ ನಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಒಮ್ಮೆ ಕಾಂಗ್ರೆಸ್ ನವರು ಬರುತ್ತಾರೆ ತಮಗೆ ಕೊಡೆ ಹಿಡಿರಿ ಅಂತಾರೆ. ಒಮ್ಮೆ ಬಿಜೆಪಿ ಅವರು ಬರುತ್ತಾರೆ ಕೊಡೆ ಹಿಡಿರಿ ಅಂತಾರೇ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತೆ ನಾನೇ ಸಿಎಂ ಆಗ್ತಿನಿ ಅನ್ನೋಲ್ಲ. 9ನೇ ತಾರೀಖಿನ ನಂತರ ಏನೇನೋ ಆಗುತ್ತೆ ಅಂತಾನು ಹೇಳೋಲ್ಲ. ರಾಜಕೀಯ ಶುದ್ಧೀಕರಣಕ್ಕೆ 9ನೇ ತಾರೀಖು ಸಾಕ್ಷಿಯಾಗುತ್ತೆ. ಮಲ್ಲಿಕಾರ್ಜುನ ಖರ್ಗೆಯವರು 9ಕ್ಕೆ ಸಿಹಿ ಸುದ್ದಿ ಕೊಡ್ತಿವಿ ಅಂದಿದ್ದಾರೆ. ಅವರ ಮಾತುಗಳನ್ನು ದಲಿತ ಬಂದುಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಯಡಿಯೂರಪ್ಪ ಅವರನ್ನು ಅನರ್ಹ ಶಾಸಕರೊಬ್ಬರು ಕಾಮಧೇನು ಎನ್ನುತ್ತಾರೆ. ಯಡಿಯೂರಪ್ಪ ರಾಜ್ಯದ ಜನರ ಪಾಲಿಗೆ ಕಾಮಧೇನು ಅಲ್ಲ. ಅನರ್ಹ ಶಾಸಕರ ಪಾಲಿಗೆ ಮಾತ್ರ ಕಾಮಧೇನು ಎಂದು ಸಿಎಂ ಮೇಲೆ ಮಾಜಿ ಸಿಎಂ ವಾಗ್ದಾಳಿ ಮಾಡಿದ್ದಾರೆ.