ಮೈಸೂರು: ಅರಮನೆ ನಗರಿ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲ್ಲೇ ಮೈಸೂರು ವಿವಿ ಹೊರಡಿಸಿರೋ ಆದೇಶ ವಿವಾದಕ್ಕೀಡಾಗಿದೆ.
ಸಂಜೆ 6.30ರ ನಂತರ ಮಾನಸಗಂಗೋತ್ರಿ ಆವರಣ, ಕುಕ್ಕರಹಳ್ಳಿಕೆರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಪ್ರವೇಶಕ್ಕೆ ನಿರ್ಬಂಧ ಹೇರಿ ವಿವಿ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ. ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು, ಕೂರುವುದನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್
ಸುರಕ್ಷತೆ, ಮುನ್ನೆಚ್ಚರಿಕೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ವಿವಿ ಭದ್ರತಾ ಸಿಬ್ಬಂದಿಯಿಂದ ಗಸ್ತು ಸಂಜೆ 6 ರಿಂದ 9ರವರೆಗೆ ಗಸ್ತು ತಿರುಗಲು ವ್ಯವಸ್ಥೆ ಮಾಡಲಾಗಿದೆ. ಪೊಲೀಸರ ಮೌಖಿಕ ನಿರ್ದೇಶನದ ಮೇರೆಗೆ ಆದೇಶ ಹೊರಡಿಸಿದ್ದೇವೆ ಅಂತ ವಿವಿ ಹೇಳಿದೆ.
ಆದೇಶದ ಬೆನ್ನಲ್ಲೇ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿವಿ ಆದೇಶವನ್ನು ಪುನರ್ ವಿಮರ್ಶೆ ಮಾಡುವುದಾಗಿ ತಿಳಿಸಿದೆ. ಇಂದು ಈ ಆದೇಶ ರದ್ದಿನ ಸುತ್ತೋಲೆ ಹೊರಬೀಳುವ ಸಂಭವ ಇದೆ. ಇದನ್ನೂ ಓದಿ: ಈ ಸರ್ಕಾರದಲ್ಲಿ ಹೆಣ್ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ ಡಿಕೆಶಿ