Karnataka

ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್

Published

on

Share this

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸುಳಿವು ಸಿಕ್ಕರೂ ಸದ್ಯ ನಾವು ಅದನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆರೋಪಿಗಳು ಪತ್ತೆಯಾದ ತಕ್ಷಣ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಡಿಜಿಪಿ ಪ್ರವೀಣ್ ಸೂದ್ ಭರವಸೆ ನೀಡಿದರು.

ಈ ಕುರಿತು ನಗರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ಪ್ರಕರಣದ ಕುರಿತು ಗಂಭೀರ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದಿಂದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತೆ ಮಾನಸಿಕ ಸ್ಥಿತಿ ಸರಿ ಇಲ್ಲ. ಹುಷಾರಾದ ಬಳಿಕ ಮಾಹಿತಿ ನೀಡುವುದಾಗಿ ಸಂತ್ರಸ್ತೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಈ ಸರ್ಕಾರದಲ್ಲಿ ಹೆಣ್ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ ಡಿಕೆಶಿ

ಆಗಸ್ಟ್ 24 ರಂದು ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸೂಕ್ಷ್ಮತೆಯಿಂದ ವರ್ತಿಸಬೇಕಿದೆ. ಸಂತ್ರಸ್ತೆ ಯಾರು, ಎಲ್ಲಿಂದ ಬಂದರು ಎಂಬ ವಿಚಾರ ಅಗತ್ಯವಿಲ್ಲ. ಆದರೆ ಈ ಘಟನೆ ಆಗಿರುವುದು ಬೇಸರ ತಂದಿದೆ. ಏನು ನಡೆದಿದೆ ಎಂಬುದನ್ನು ನಾವು ಬೇರೆ, ಬೇರೆ ರೀತಿಯಿಂದ ಪತ್ತೆ ಮಾಡಿದ್ದೇವೆ. ದರೋಡೆ ಪ್ರಕರಣದ ಕುರಿತು ಮಾಹಿತಿ ನೀಡಿದಂತೆ ಈ ಸಾಮೂಹಿಕ ಅತ್ಯಾಚಾರದ ಪ್ರಕರಣದ ಕುರಿತು ಆರೋಪಿಗಳು ಪತ್ತೆಯಾದ ತಕ್ಷಣ ಮಾಹಿತಿ ನೀಡುತ್ತೇವೆ ಎಂದರು.

ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗುತ್ತಾರೆ ಎಂಬ ವಿಶ್ವಾಸ ನಮಗಿದೆ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಇದ್ದರೂ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಸೂಚಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ನಡೆದಿದೆ. ದರೋಡೆ ಪ್ರಕರಣದ ರೀತಿಯಲ್ಲೇ ಈ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುತ್ತೇವೆ. ಸುಳಿವು ಸಿಕ್ಕಿದ್ದರೂ ನಾವು ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ. ಸುಳಿವಿನ ಕುರಿತು ಮಾಹಿತಿ ನೀಡಿದರೆ, ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

ದರೋಡೆ ಪ್ರಕರಣದ ಆರೋಪಿಗಳು ಪತ್ತೆಯಾದ ತಕ್ಷಣ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಈ ಪ್ರಕರಣದ ಆರೋಪಿಗಳನ್ನು ಪತ್ತೆಯಾದ ಬಳಿಕ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ದರೋಡೆ ಮಾಡಿ ಶೂಟೌಟ್ ಮಾಡಿದ್ದ ಪ್ರಕರಣ ನಡೆದಿತ್ತು. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಶೂಟೌಟ್ ಪ್ರಕರಣ ಪತ್ತೆಗೆ ಐದು ಸ್ಕ್ವಾಡ್ ಮಾಡಲಾಗಿತ್ತು. ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದ್ದೇವೆ. ಘಟನೆಯ ಪ್ಲಾನ್ ಮಾಡಿದವರನ್ನು ಸಹ ಬಂಧಿಸಿದ್ದೇವೆ. ಬೆಂಗಳೂರು, ಮುಂಬೈ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ಇವರು ಅಡಗಿದ್ದರು. ಆರು ಜನರನ್ನು ಬಂಧಿಸಲಾಗಿದೆ. ಒಟ್ಟು 8 ಜನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪ್ಲಾನ್ ಮಾಡಿದ ಇಬ್ಬರನ್ನು ಬಂಧಿಸಿದ್ದೇವೆ. ಇದರಲ್ಲಿ ಒಬ್ಬರು ಮೈಸೂರಿನವರು, ಮತ್ತೊಬ್ಬರು ಬೆಂಗಳೂರಿನವರು ಎಂದು ಮಾಹಿತಿ ನೀಡಿದ್ದರು.

ಪಕ್ಕಾ ಪ್ಲಾನ್ ಮಾಡಿ ಈ ಕೃತ್ಯವನ್ನು ನಡೆಸಲಾಗಿತ್ತು. ಘಟನೆ ಬಳಿಕ ಆರೂ ಜನ ಸಹ ದೇಶದ ವಿವಿಧ ಮೂಲೆಗಳಲ್ಲಿ ತಲೆಮರೆಸಿಕೊಂಡಿದ್ದರು. ಆದರೂ ಒಟ್ಟು 8 ಜನ ಆರೋಪಿಗಳ ಪೈಕಿ 6 ಜನರನ್ನು ಬಂಧಿಸಿದ್ದೇವೆ. ಕಳ್ಳತನವಾದ ಹಲವು ಸಾಮಗ್ರಿಗಳು ಸಿಕ್ಕಿವೆ, ಇನ್ನೂ ಕೆಲವು ಸಿಗಬೇಕಿದೆ ಎಂದರು. ಇದನ್ನೂ ಓದಿ: ಮಾಜಿ ಗಂಡನ ಹೇಳಿಕೆಯಿಂದ ಚೀನಾದ ಖ್ಯಾತ ನಟಿಗೆ ಬಿತ್ತು 340 ಕೋಟಿ ರೂ. ದಂಡ

ಹೈ ಕೋರ್ಟ್ ಆದೇಶದನ್ವಯ ಹೆಚ್ಚು ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. 8 ಜನರ ಪೈಕಿ ಈಗ 6 ಜನರನ್ನು ಬಂಧಿಸಿದ್ದೇವೆ. ಅಲ್ಲಿಂದ ವಿವಿಧ ರಾಜ್ಯಗಳಿಂದ ಆರೋಪಿಗಳನ್ನು ಕರೆತರಲು ಕೆಲ ಕಾನೂನುಗಳ ಪಾಲನೆ ಅಗತ್ಯವಾಗಿದೆ. ಸ್ಥಳೀಯ ಕೋರ್ಟ್ ಸೆಕ್ಯೂರ್ ಮಾಡಿದ ಬಳಿಕ ಅವರನ್ನು ಮೈಸೂರಿಗೆ ಕರೆ ತಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ಲಾನ್ ಮಾಡಿದವರು ಮೊದಲು ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಜ್ಯುವೆಲ್ಲರಿ ಅಂಗಡಿ ಇಟ್ಟುಕೊಂಡಿದ್ದರು. ಈ ಹಿಂದೆ ಮೋಸ ಮಾಡಿದ ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನೊಬ್ಬರು ಬೆಂಗಳೂರಿನವರು ಮತ್ತೊಂದು ಕೇಸ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಇಬ್ಬರು ಪ್ಲಾನ್ ಮಾಡಿದವರು ಬೇರೆ ರಾಜ್ಯದವನ್ನು ಕರೆಸಿಕೊಂಡು ಇಲ್ಲಿ ದರೋಡೆ ನಡೆಸಿದ್ದಾರೆ ಎಂದು ವಿವರಿಸಿದರು.

ಅರಗ ಜ್ಞಾನೇಂದ್ರ ಮಾತನಾಡಿ, ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ಎರಡು ಘಟನೆಗಳು ದುರದೃಷ್ಟಕರ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹಾಗೂ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹಾಕಿದ್ದೆವು. ಏನಾದರೂ ಮಾಡಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ, ಆ ಭಾಗದ ಜನರಿಗೆ ವಿಶ್ವಾಸ ತುಂಬಬೇಕೆಂದು ಹೇಳಿದ್ದೆವು. ಪ್ರವೀಣ್ ಸೂದ್ ಅವರು ತನಿಖೆ ನಡೆಸಿ ಕೆಲವರನ್ನು ಬಂಧಿಸಿದ್ದಾರೆ, ಅಲ್ಲದೆ ಕೆಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸಂಪೂರ್ಣ ಸಾಕ್ಷ್ಯ ಲಭಿಸಿ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು. ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

ಇದೀಗ ಅತ್ಯಾಚಾರ ಪ್ರಕರಣವನ್ನು ಇದೇ ರೀತಿ ಸದ್ಯದಲ್ಲೇ ಇತ್ಯರ್ಥಪಡಿಸುತ್ತಾರೆ. ಪೊಲೀಸ್ ಅಧಿಕಾರಿಗಳ ಮೇಲೆ ಭರವಸೆ ಇಡೋಣ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications