– ಪ್ರಕರಣದಲ್ಲಿ ಪೊಲೀಸರಿಗೆ ಸವಾಲಾಗಿದ್ದೇನು?
ಮೈಸೂರು: ಅರಮನಮೆ ನಗರಿ ಮೈಸೂರಿನಲ್ಲಿ ಗ್ಯಾಂಗ್ ರೇಪ್ ನಡೆದು 4 ದಿನಗಳೇ ಕಳೆದು ಹೋಗಿದೆ. 80 ಗಂಟೆ ಕಳೆದ್ರೂ ಇನ್ನೂ ಆರೋಪಿಗಳ ಸುಳಿವಿಲ್ಲ. ಆದರೆ ಇದುವರೆಗೂ ಆರೋಪಿಗಳ ಪತ್ತೆಯಾಗದೇ ಇರುವುದು ಜನಸಾಮಾನ್ಯರು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ಬೇಧಿಸಲು ಪೊಲೀಸರಿಗೆ ಆಗ್ತಿಲ್ವಾ? ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರು ಪ್ರಕರಣದ ಬಗ್ಗೆ ಸುಳಿವು ಸಿಕ್ಕಿದ್ದರೂ, ಈ ಪರಿಸ್ಥಿತಿಯಲ್ಲಿ ಹೇಳಲು ಸಾಧ್ಯವಿಲ್ಲ: ಪ್ರವೀಣ್ ಸೂದ್
Advertisement
ಪೊಲೀಸರಿಗೆ ಎದುರಾದ ಸವಾಲುಗಳೇನು?
ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸರಿಗೆ ಲಭ್ಯವಿಲ್ಲ. ಈವರೆಗೂ ಘಟನೆ ಬಗ್ಗೆ ಸಂತ್ರಸ್ತೆ ಹೇಳಿಕೆ ನೀಡಿಲ್ಲ. ಘಟನಾ ಸ್ಥಳದ ಐದಾರು ಕಿ.ಮೀ.ವ್ಯಾಪ್ತಿಯಲ್ಲಿ ಸಿಸಿಟಿವಿಗಳೇ ಇಲ್ಲ. ಕಾಮುಕರ ಮುಖಚರ್ಯೆ, ಹಾವಭಾವ, ಬಳಸುತ್ತಿದ್ದ ಭಾಷೆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಸ್ಥಳದಲ್ಲಿ ಸಿಕ್ಕಿರೋ ಮದ್ಯದ ಬಾಟಲ್‍ಗಳಿಂದ ಆರೋಪಿಗಳ ಪತ್ತೆ ದುಸ್ತರವಾಗಿದ್ದು, ಪ್ರಕರಣ ಬೇಧಿಸಲು ಪೊಲೀಸರಿಗೆ ಸವಾಲಾಗಿದೆ. ಇದನ್ನೂ ಓದಿ: ಈ ಸರ್ಕಾರದಲ್ಲಿ ಹೆಣ್ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ ಡಿಕೆಶಿ
Advertisement
Advertisement
ಖಾಕಿ ಮುಂದಿನ ನಡೆ ಏನು?
ಸಂತ್ರಸ್ತೆ ಮಾಹಿತಿ ನೀಡದಿದ್ರೂ ತನಿಖೆ ವಿಳಂಬ ಮಾಡುವಂತಿಲ್ಲ. ಹಳೆಯ ಪ್ರಕರಣಗಳ ತನಿಖೆಯನ್ನು ಆಧರಿಸಿ ಈ ಕೇಸ್ ತನಿಖೆ ನಡೆಸುವುದು. ಸ್ಥಳದಲ್ಲಿ ಸಿಕ್ಕಿರೋ ಮದ್ಯದ ಬಾಟಲ್ ಮಾರಾಟವಾಗಿದ್ದೆಲ್ಲಿ ಎಂಬ ಬಗ್ಗೆ ತನಿಖೆ ಮಾಡುವುದು. ಬಾಟಲ್ ಮಾರಾಟವಾದ ಅಂಗಡಿ ಗೊತ್ತಾದ್ರೆ ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸುವುದು. ಮೊಬೈಲ್ ಟವರ್ ಲೊಕೇಶನ್ ಮೂಲಕ ಕರೆಗಳ ಸಂಪೂರ್ಣ ಪರಿಶೀಲನೆ ಮಾಡುವುದು. ಹಾಗೂ ಪ್ರಕರಣ ನಡೆದ ಜಾಗದಲ್ಲಿ ಈ ಹಿಂದೆ ಆಗಿರುವ ಅಪರಾಧ ಕೇಸ್ ಪರಿಶೀಲನೆ ನಡೆಸುವುದಾಗಿದೆ. ಇದನ್ನೂ ಓದಿ: ಮಹಿಳೆಯರಿಗೆ ಬಂದೂಕು ಲೈಸೆನ್ಸ್ ಕೊಡಿ – ತಮ್ಮದೇ ಸರ್ಕಾರಕ್ಕೆ ಆನಂದ್ ಸಿಂಗ್ ಪುಕ್ಕಟ್ಟೆ ಸಲಹೆ
Advertisement
ಪ್ರಕರಣ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿ, ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸುಳಿವು ಸಿಕ್ಕರೂ ಸದ್ಯ ನಾವು ಅದನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆರೋಪಿಗಳು ಪತ್ತೆಯಾದ ತಕ್ಷಣ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಪ್ರಕರಣದ ಕುರಿತು ಗಂಭೀರ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದಿಂದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತೆ ಮಾನಸಿಕ ಸ್ಥಿತಿ ಸರಿ ಇಲ್ಲ. ಹುಷಾರಾದ ಬಳಿಕ ಮಾಹಿತಿ ನೀಡುವುದಾಗಿ ಸಂತ್ರಸ್ತೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.