– ಬರ ಸಭೆಗೆ ಬಂದ ಜಿಲ್ಲಾ ಪಂಚಾಯತ್ ಸಿಇಓಗಳ ಸಫಾರಿ
ಮೈಸೂರು: ಇಷ್ಟು ದಿನ ಶಾಸಕರು ಮತದಾರರನ್ನು ಮರೆತು ರೆಸಾರ್ಟ್ ಸೇರಿಕೊಂಡು ಎಂಜಾಯ್ ಮಾಡಿ ಬಂದರು. ಇದೀಗ ಬರ ಸಭೆಗೆ ಬಂದಿದ್ದ ಸರ್ಕಾರಿ ಅಧಿಕಾರಿಗಳು ನಾವೇನು ಕಡಿಮೆ ಇಲ್ಲ ಎಂಬಂತೆ ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಸಫಾರಿಯಲ್ಲಿ ಬ್ಯೂಸಿಯಾಗಿದ್ದಾರೆ. ಬರ ಸಭೆ ಹೆಸರಿನಲ್ಲಿ ಮೈಸೂರಿಗೆ ಬಂದಿದ್ದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಸಿಇಓಗಳು ಈಗ ನಾಗರಹೊಳೆ ಐಷಾರಾಮಿ ರೆಸಾರ್ಟ್ ನಲ್ಲಿ ತಂಗಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ.
ಹೆಚ್.ಡಿ.ಕೋಟೆ ತಾಲೂಕಿನ ಖಾರಪುರ ಸಮೀಪ ಇರುವ ಐಷಾರಾಮಿ ರೆಸಾರ್ಟ್ ನಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಗಳು ತಂಗಿದ್ದು, ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್ ರೆಸಾರ್ಟ್ ನಲ್ಲಿ ಕಾರ್ಯಾಗಾರ ನಡೆಯುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಅಧಿಕಾರಿಗಳು ಕಾರ್ಯಾಗಾರಕ್ಕೆ ಬಂದಿದ್ದಾರಾ ಅಥವಾ ಐಷಾರಾಮಿ ರೆಸಾರ್ಟ್‍ನಲ್ಲಿ ಉಳಿದು ಸಫಾರಿ ಮಾಡಲು ಬಂದಿದ್ದಾರಾ? ಎಂಬ ಪ್ರಶ್ನೆ ಮೂಡಿಸಿದೆ.
Advertisement
Advertisement
ಬುಧವಾರ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿದ್ದ ಸಿಇಓಗಳು ಇಂದು ಸಹ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲೇ ಕಾರ್ಯಾಗಾರ ಮುಂದುವರಿಸಬಹುದಿತ್ತು. ಆದ್ರೆ ಐಷಾರಾಮಿ ರೆಸಾರ್ಟ್ ವಾಸ್ತವ್ಯ ಯಾಕೆ ಬೇಕಾಗಿತ್ತು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv