ಮೈಸೂರು: ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಮಹಾಕುಂಭ ಮೇಳ ಆರಂಭವಾಗಿದ್ದು, 2ನೇ ದಿನವಾದ ಇಂದು ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ನವಗ್ರಹ ಹೋಮ, ಸುದರ್ಶನ ಹೋಮ, ರುದ್ರ ಹೋಮ, ನದಿ ಪಾತ್ರದಲ್ಲಿ ಪುಣ್ಯ ಹೋಮಗಳು ನೆರವೇರಿಸಲಾಯಿತು. ಮಹಾಕುಂಭ ಮೇಳಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಗಣ ಬರುತ್ತಿದ್ದು, ಪುಣ್ಯಸ್ನಾನ ಮಾಡಿ ದೇವಿಯ ಅನುಗ್ರಹ ಪಡೆಯುತ್ತಿದ್ದಾರೆ.
Advertisement
Advertisement
ವಾರಣಾಸಿಯಲ್ಲಿ ಗಂಗಾರತಿ ನಡೆಸುವ ತಂಡದಿಂದಲೇ ವಾರಣಾಸಿ ಮಾದರಿಯಲ್ಲಿ ನದಿ ಮಧ್ಯ (ತ್ರಿವೇಣಿ ಸಂಗಮದಲ್ಲಿ) ಆರತಿ ಪೂಜೆ ಮಾಡಲಾಯಿತು. ಈ ಮೂಲಕ ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಗಂಗಾರತಿ ಪೂಜೆ ನೆರವೇರಿತು. ಈ ವೇಳೆ ನದಿ ಮಧ್ಯೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Advertisement
Advertisement
ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಗಂಗಾ ಪೂಜೆಯನ್ನು ಕಣ್ತುಂಬಿಕೊಂಡರು. ಪತಿ ಸಿಎಂ ಕುಮಾರಸ್ವಾಮಿ ಅವರ ಜೊತೆಗೆ ಕುಳಿತು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಗಂಗಾರತಿ ಕಾರ್ಯಕ್ರಮ ವೀಕ್ಷಿಸಿದರು. ಸಚಿವರಾದ ಜಿ.ಟಿ ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಶಾಸಕರಾದ ಯತೀಂದ್ರ, ಅಶ್ವಿನ್ ಕುಮಾರ್ ಅವರು ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv