ಮೈಸೂರು: ಚಾಮುಂಡಿಬೆಟ್ಟದಲ್ಲಿ (Chamundi hills) ಯಾರೋ ಕಿಡಿಗೇಡಿಗಳು ಬೆಟ್ಟದ ಒಣಹುಲ್ಲಿಗೆ ಬೆಂಕಿ ಹಚ್ಚಿರುವ ಪರಿಣಾಮ ಅರಣ್ಯಕ್ಕೆ ಆವರಿಸಿಕೊಂಡಿದೆ. ಒಟ್ಟು 35 ಎಕರೆಯಷ್ಟು ಅರಣ್ಯ ನಾಶವಾಗಿದೆ ಎಂದು ಡಿಸಿಎಫ್ (Mysuru DCF) ಬಸವರಾಜು ಮಾಹಿತಿ ನೀಡಿದರು.
Advertisement
ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದ ಘಟನೆ ಕುರಿತು ಮಾತನಾಡಿದ ಅವರು, ಸದ್ಯ ಬೆಂಕಿ (Fire) ನಿಯಂತ್ರಣಕ್ಕೆ ಬಂದಿದೆ. ಒಟ್ಟು 35 ಎಕರೆಯಷ್ಟು ಅರಣ್ಯ ನಾಶವಾಗಿದೆ. ಯಾವುದೇ ಪ್ರಾಣಿ ಪಕ್ಷಿಗಳಿಗೆ ಹಾನಿಯಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ
Advertisement
Advertisement
ಯಾರೋ ಕಿಡಿಗೇಡಿಗಳು ಬೆಟ್ಟದ ಒಣಹುಲ್ಲಿಗೆ ಬೆಂಕಿ ಹಚ್ಚಿರುವ ಪರಿಣಾಮ ಅದು ಆವರಿಸಿಕೊಂಡಿದೆ. ಕಿಡಿಗೇಡಿಗಳ ಪತ್ತೆಗೆ ಟವರ್ ಲೊಕೆಷನ್ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ದನ ಮೇಯಿಸುವವರ ಮೇಲೆ ಅನುಮಾನಗಳಿವೆ. ಇದರ ಬಗ್ಗೆಯೂ ಪರಿಶೀಲನೆ ಮಾಡುತ್ತಿದ್ದೇವೆ. ಕಳೆದ 5 ವರ್ಷಗಳ ಹಿಂದೆ ಇದೇ ರೀತಿ ಬೆಂಕಿ ಬಿದ್ದು, ಅರಣ್ಯ ನಾಶವಾಗಿತ್ತು ಎಂದು ಡಿಸಿಎಫ್ ತಿಳಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ, ಲೀಸ್ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ