ದಸರಾ ಆನೆಗಳಿಗೆ ಕಬ್ಬು ತಿನಿಸಿದ ಡಿಕೆಶಿ ದಂಪತಿ
ಮೈಸೂರು ದಸರೆಯಲ್ಲಿ ಕೇರಳ ಪರಂಪರೆಯ ಅನಾವರಣ!
ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗುತ್ತಿರುವ ಜಂಬೂ ಸವಾರಿ.
ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗುತ್ತಿರುವ ಜಂಬೂ ಸವಾರಿ.
ಆಯುರ್ವೇದಿಕ್ ವೃತ್ತ ತಲುಪಿದ ಜಂಬೂ ಸವಾರಿ.
ರಾಜಬೀದಿಯಲ್ಲಿ ಅಂಬಾರಿ ಹೊತ್ತು ಸಾಗುತ್ತಿರುವ ಕ್ಯಾಪ್ಟನ್ ಪ್ರಶಾಂತ
ಕೆ.ಆರ್ ವೃತ್ತ ತಲುಪಿದ ಜಂಬೂ ಸವಾರಿ.
ಅಂಬಾರಿ ಹೊತ್ತು ಗಜ ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಿರುವ ಪ್ರಶಾಂತ.
ಅಂಬಾರಿ ನೋಡಿ ಸಂಭ್ರಮಿಸುತ್ತಿರುವ ಜನರು.
ಹೆಸರಿಗೆ ತಕ್ಕಂತೆ ಬಲಶಾಲಿಯಾಗಿದ್ದ ʻಬಲರಾಮʼ
ದ್ರೋಣನ ನಂತರ ದಸರೆಯ ಜವಾಬ್ದಾರಿ ಹೊತ್ತ ಪ್ರಮುಖ ಆನೆಗಳಲ್ಲಿ ಬಲರಾಮನದು ವಿಶೇಷ ಸ್ಥಾನ. ಹೆಸರಿಗೆ ತಕ್ಕಂತೆ ಬಲಶಾಲಿಯಾಗಿದ್ದ ಬಲರಾಮ ಶಾಂತ ಸ್ವಭಾವದವನಾಗಿದ್ದ. ರಾಮನಂತೆ ಸಾತ್ವಿಕ ಗುಣ ಹೊಂದಿದ್ದ ಈ ಆನೆಯನ್ನು 1987ರಲ್ಲಿ ಕೊಡಗಿನ ಕಟ್ಟೆಪುರ ಅರಣ್ಯ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಯಿತು. 1994 ರಿಂದ ದಸರೆಯಲ್ಲಿ ಭಾಗವಹಿಸಿದ ಬಲರಾಮ, 2000 ರಿಂದ 2011 ರ ವರೆಗೆ ಸತತ 11 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಸಾಗಿದ. ತನ್ನ ಶಾಂತ ಸ್ವಭಾವ, ಶಿಸ್ತು ಮತ್ತು ಭವ್ಯ ನಡಿಗೆಯಿಂದ ಬಲರಾಮ ಮೈಸೂರು ದಸರೆಯ ಜನಪ್ರಿಯ ಆನೆಗಳ ಸಾಲಿನಲ್ಲಿ ಅಚ್ಚಳಿಯದ ಸ್ಥಾನ ಪಡೆದನು.

ಸತತ 18 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ʻದ್ರೋಣʼ!
1971ರಲ್ಲಿ ಕಾಕನಕೋಟೆಯ ಅರಣ್ಯದಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ದ್ರೋಣನನ್ನ ಸೆರೆಹಿಡಿಯಲಾಯಿತು. ನಂತರ ಮೈಸೂರು ದಸರೆಯ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಆನೆಯಾಗಿ ಬೆಳೆದ ದ್ರೋಣ ಸತತ 18 ಬಾರಿ, 1980 ರಿಂದ 1998 ರ ವರೆಗೆ, ಚಿನ್ನದ ಅಂಬಾರಿ ಹೊತ್ತಿದ್ದಾನೆ. ಸುಮಾರು 10.2 ಅಡಿ ಎತ್ತರ ಮತ್ತು 6,400 ಕೆ.ಜಿ. ತೂಕ ಹೊಂದಿದ್ದ ದ್ರೋಣನ ಗಜಗಾಂಭೀರ್ಯ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿತ್ತು. ದ್ರೋಣನ ಖ್ಯಾತಿ ಮೈಸೂರು ದಸರೆಯ ಗಡಿಯನ್ನು ದಾಟಿ ಹಿಂದಿ ಕಿರುತೆರೆಯ ‘ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್’ ಧಾರಾವಾಹಿಗೂ ತಲುಪಿತು. ಆದರೆ 1998ರಲ್ಲಿ ಮೇವಿಗಾಗಿ ಕಾಡಿಗೆ ಬಿಟ್ಟ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಈ ದೈತ್ಯಾಕಾರದ ಆನೆಯನ್ನು ಕಳೆದುಕೊಳ್ಳಲಾಯಿತು. ದ್ರೋಣನ ಅಗಲಿಕೆ ದಸರೆಯ ಅಭಿಮಾನಿಗಳಿಗೆ ಮರೆಯಲಾಗದ ನೋವಿನ ಅಧ್ಯಾಯವಾಯಿತು.

ಅಣ್ಣಾವ್ರ ‘ಗಂಧದ ಗುಡಿ’ ಸಿನಿಮಾದಲ್ಲಿ ಮಿಂಚಿದ್ದ ರಾಜೇಂದ್ರ ಆನೆ!
ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದ ನಂತರ, 1977 ರಿಂದ ಚಿನ್ನದ ಅಂಬಾರಿಯಲ್ಲಿ ಮಹಾರಾಜರನ್ನ ಕೂರಿಸುವ ಬದಲು ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸುವ ಪರಂಪರೆ ಆರಂಭವಾಯಿತು. ಚಾಮುಂಡೇಶ್ವರಿ ವಿಗ್ರಹವನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ ಮೊದಲ ಆನೆ ರಾಜೇಂದ್ರ. ಹೀಗಾಗಿ ಮೈಸೂರು ದಸರೆಯ ಇತಿಹಾಸದಲ್ಲಿ ರಾಜೇಂದ್ರನಿಗೆ ವಿಶಿಷ್ಠ ಸ್ಥಾನವಿದೆ.
ರಾಜೇಂದ್ರನ ಮತ್ತೊಂದು ವಿಶೇಷತೆಯೆಂದರೆ, ಆತ ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದ. ಡಾ. ರಾಜ್ಕುಮಾರ್ ಅಭಿನಯದ ‘ಗಂಧದ ಗುಡಿ’ ಚಲನಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಪ್ರಸಿದ್ಧ ಹಾಡಿನಲ್ಲಿ ಕಾಣಿಸಿಕೊಳ್ಳುವ ಆನೆಯೂ ರಾಜೇಂದ್ರನೇ. ಚಿತ್ರದ ಕೊನೆಯವರೆಗೂ ಭಾಗವಹಿಸುವ ಮೂಲಕ ದಸರೆಯ ಅಂಬಾರಿ ಆನೆಯೊಂದು ಕನ್ನಡ ಚಿತ್ರರಂಗದಲ್ಲಿಯೂ ತನ್ನದೇ ಆದ ಗುರುತು ಮೂಡಿಸಿತು.

ಅಂಬಾರಿ ಆನೆಗಳ ಇತಿಹಾಸದಲ್ಲೇ ಅತ್ಯಂತ ದೈತ್ಯ ಆನೆ ʻಬಿಳಿಗಿರಿʼ!
ಇಲ್ಲಿಯವರೆಗೆ ಅಂಬಾರಿ ಹೊತ್ತ ಆನೆಗಳಲ್ಲಿ ಬಿಳಿಗಿರಿಯೇ ದೈತ್ಯಾಕಾರದ ಆನೆಗಳಲ್ಲಿ ಒಂದಾಗಿದ್ದ. ಸುಮಾರು 7,000 ಕೆ.ಜಿ. ತೂಕ ಹೊಂದಿದ್ದ ಈ ಆನೆ ಬರೋಬ್ಬರಿ 10.5 ಅಡಿ ಎತ್ತರವಿತ್ತು. ತನ್ನ ಭವ್ಯವಾದ ಗಾತ್ರ ಮತ್ತು ಗಜಗಾಂಭೀರ್ಯದಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಬಿಳಿಗಿರಿ, ಮಹಾರಾಜರನ್ನು ಹೊತ್ತು ಸಾಗಿದ ಕೊನೆಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಮೈಸೂರು ಅರಮನೆಯ ರಾಜವೈಭವ ಮತ್ತು ಜಂಬೂಸವಾರಿಯ ನಡುವಿನ ಒಂದು ಮಹತ್ವದ ಕೊಂಡಿಯಾಗಿ ಬಿಳಿಗಿರಿಯ ಹೆಸರು ದಸರೆಯ ಇತಿಹಾಸದಲ್ಲಿ ದಾಖಲಾಗಿದೆ.
ಹಾಲಿವುಡ್ ಚಿತ್ರದಲ್ಲೂ ಮಿಂಚಿದ ಜಗತ್ಪ್ರಸಿದ್ಧ ʻಐರಾವತʼ ಆನೆ!
ಐರಾವತ ಕೂಡ ಜಗತ್ಪ್ರಸಿದ್ಧಗೊಂಡ ದಸರಾ ಆನೆಗಳಲ್ಲಿ ಒಂದು. ಮೈಸೂರು ದಸರೆಯ ಮೆರವಣಿಗೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಆನೆಯನ್ನು ‘ದಿ ಎಲಿಫಂಟ್ ಬಾಯ್’ ಎಂಬ ಹಾಲಿವುಡ್ ಚಿತ್ರದಲ್ಲಿಯೂ ಬಳಸಿಕೊಳ್ಳಲಾಯಿತು. ಈ ಚಿತ್ರ ವಿಶ್ವದಾದ್ಯಂತ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳಿಗೆ ಪಾತ್ರವಾಯಿತು. ವಿಶೇಷವೆಂದರೆ ಐರಾವತನ ಮಾವುತನೂ ಆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ. ಹೀಗಾಗಿ ದಸರೆಯ ಆನೆಯೊಂದು ಮೈಸೂರು ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡ ಅಪರೂಪದ ಉದಾಹರಣೆಯಾಗಿ ಐರಾವತ ನೆನಪಾಗುತ್ತಾನೆ.

45 ವರ್ಷಗಳ ಕಾಲ ಅಂಬಾರಿ ಹೊತ್ತ ಜಯಮಾರ್ತಾಂಡನ ಬಗ್ಗೆ ನಿಮಗೆಷ್ಟು ಗೊತ್ತು?
ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ, ರಾಜ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಸೆರೆಹಿಡಿಯಲ್ಪಟ್ಟ ಆನೆ. ಚಿನ್ನದ ಅಂಬಾರಿ ಹೊತ್ತ ಮೊದಲ ಆನೆ ಎಂಬ ಹೆಗ್ಗಳಿಕೆಗೆ ಜಯಮಾರ್ತಾಂಡ ಪಾತ್ರನಾಗಿದ್ದಾನೆ. ಸುಮಾರು 45 ವರ್ಷಗಳ ಕಾಲ, ಅಂದರೆ 1870 ರಿಂದ 1915ರ ವರೆಗೆ, ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ ಈ ಆನೆ 3 ಮಹಾರಾಜರಾದ 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರನ್ನ ಹೊತ್ತು ಸಾಗಿದ ಏಕೈಕ ಆನೆ ಎಂಬ ವಿಶೇಷತೆ ಹೊಂದಿದೆ. ಮಹಾರಾಜರಿಗೆ ಜಯಮಾರ್ತಾಂಡ ಅಚ್ಚುಮೆಚ್ಚಿನ ಆನೆಯಾಗಿದ್ದ. ಅದರ ನೆನಪಿಗಾಗಿ ಅರಮನೆಯ ಮುಖ್ಯ ದ್ವಾರಕ್ಕೆ ‘ಜಯಮಾರ್ತಾಂಡ ದ್ವಾರ’ ಎಂದು ಹೆಸರು ಇಡಲಾಗಿದೆ. ಪ್ರತಿ ವರ್ಷ ದಸರಾ ಆನೆಗಳು ಅರಮನೆಗೆ ಈ ದ್ವಾರದ ಮೂಲಕವೇ ಪ್ರವೇಶಿಸುವುದು ಇಂದಿಗೂ ವಿಶೇಷವಾಗಿ ಕಾಣುತ್ತದೆ.
ಜಯಮಾರ್ತಾಂಡನ ನಂತರ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್ ಹಾಗೂ ಮೋತಿಲಾಲ್ರಾಜ್ ಮೊದಲಾದ ಆನೆಗಳು ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಯ ವೈಭವಕ್ಕೆ ಸಾಕ್ಷಿಯಾದವು. ಒಂದರ ನಂತರ ಮತ್ತೊಂದು ಆನೆ ಅರಮನೆಯ ಪರಂಪರೆಯನ್ನ ಮುಂದುವರಿಸುತ್ತಾ ಬಂದವು.

ಆನೆಗಳು ದಸರಾ ವೈಭದ ಪ್ರತೀಕ
ಈ ಖೆಡ್ಡಾ ಪರಂಪರೆಯಿಂದ ಬಂದ ಅನೇಕ ಆನೆಗಳು ಮುಂದೆ ಮೈಸೂರು ದಸರೆಯ ಇತಿಹಾಸವನ್ನೇ ಬದಲಿಸಿದವು. ಅವುಗಳಲ್ಲಿ ಕೆಲವು ಕೇವಲ ಮೆರವಣಿಗೆಯ ಆನೆಗಳಾಗಿರಲಿಲ್ಲ. ಅವು ಮೈಸೂರು ದಸರೆಯ ವೈಭವದ ಪ್ರತೀಕಗಳಾಗಿ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದವು.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಆನೆಗಳ ಸಂಖ್ಯೆ ಸರಿಸುಮಾರು ಹನ್ನೆರಡು, ಈಗ ಪ್ರಶಾಂತ ಹದಿಮೂರನೆಯವನು. ಪ್ರತಿಯೊಂದು ಆನೆಗೂ ತನ್ನದೇ ಆದ ಕಥೆ, ತನ್ನದೇ ಆದ ಸಾಧನೆ ಮತ್ತು ದಸರೆಯೊಂದಿಗೆ ತನ್ನದೇ ಆದ ಭಾವನಾತ್ಮಕ ನಂಟಿದೆ.

ಕಾಕನಕೋಟೆಯಲ್ಲಿ ಆಪರೇಷನ್ ʻಖೆಡ್ಡಾʼ – ಕರಡಿಹಳ್ಳದಲ್ಲಿ ಯಶಸ್ವಿ ಕಾರ್ಯಾಚರಣೆ
ಆನೆಗಳನ್ನ ಕಾಡಿನಿಂದ ಹಿಡಿದು ಪಳಗಿಸುವ ವಿಶಿಷ್ಟ ವಿಧಾನವೇ ʻಖೆಡ್ಡಾʼ. ‘ಖೆಡ್ಡಾ’ ಎಂಬುದು ಹಿಂದಿ ಶಬ್ದವಾಗಿದ್ದು, ಆನೆಗಳನ್ನ ಬೋನಿಗೆ ತಳ್ಳುವ ಕಾರ್ಯಾಚರಣೆಯ ಹೆಸರಾಗಿದೆ. ಈ ವಿಧಾನ ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಇದ್ದಿರಬಹುದು ಎನ್ನಲಾಗುತ್ತೆ. ಆದರೆ ಮೈಸೂರು ಸಂಸ್ಥಾನದಲ್ಲಿ ಅನುಸರಿಸಲಾದ ಖೆಡ್ಡಾ ವಿಧಾನವೇ ನಂತರ ದೇಶದ ಗಮನ ಸೆಳೆದ ವಿಶಿಷ್ಟ ಪರಂಪರೆಯಾಗಿ ರೂಪುಗೊಂಡಿತು.
17ನೇ ಶತಮಾನದಲ್ಲಿ ಹೈದರಾಲಿ ನಂತರ ಟಿಪ್ಪು ಸುಲ್ತಾನ್ ಕೂಡ ಆನೆಗಳನ್ನ ಸೆರೆಹಿಡಿಯಲು ಈ ವಿಧಾನವನ್ನ ಪ್ರಯೋಗಿಸಿದ್ದರು. ಆದರೆ ಬ್ರಿಟಿಷರ ಕಾಲದಲ್ಲಿ ಖೆಡ್ಡಾ ವ್ಯವಸ್ಥಿತ ಹಾಗೂ ದೊಡ್ಡ ಪ್ರಮಾಣದ ಕಾರ್ಯಾಚರಣೆಯಾಗಿ ರೂಪುಗೊಂಡಿತು. ಜಿ.ಪಿ ಸ್ಯಾಂಡರ್ಸನ್ ಅವರ ನೇತೃತ್ವದಲ್ಲಿ ಚಾಮರಾಜನಗರದ ಕರಡಿಹಳ್ಳದಲ್ಲಿ 1874ರ ಜೂನ್ನಲ್ಲಿ ನಡೆದ ಮೊದಲ ಯಶಸ್ವಿ ಖೆಡ್ಡಾದಲ್ಲಿ ಬರೋಬ್ಬರಿ 55 ಆನೆಗಳನ್ನ ಸೆರೆಹಿಡಿಯಲಾಯಿತು. ಈ ಕಾರ್ಯಾಚರಣೆಯೇ ಮುಂದಿನ ದಿನಗಳಲ್ಲಿ ಮೈಸೂರು ಭಾಗದ ಖೆಡ್ಡಾ ಪರಂಪರೆಗೆ ಪ್ರಮುಖ ಆಧಾರವಾಯಿತು.

ಪ್ರಶಾಂತವಾಗಿ ಸಾಗುತ್ತಿದ್ದಾನೆ ಕ್ಯಾಪ್ಟನ್ ಪ್ರಶಾಂತ
ಅಂಬಾರಿ ಹೊತ್ತ ಕ್ಯಾಪ್ಟನ್ ಪ್ರಶಾಂತ ರಾಜಗಾಂಭೀರ್ಯದಿಂದ ಸಾಗುತ್ತಿದ್ದಾನೆ. ಬಲರಾಮ ದ್ವಾರ ದಾಟಿದ ಪ್ರಶಾಂತ ಆನೆ ಮೈಸೂರಿನ ರಾಜಬೀದಿಯಲ್ಲಿ ಹೆಜ್ಜೆ ಹಾಕಲು ಶುರು ಮಾಡಿದ್ದಾನೆ.
ಜಂಬೂ ಸವಾರಿ ವೀಕ್ಷಣೆಗೆ ಜನಸ್ತೋಮ
ವಿಶ್ವವಿಖ್ಯಾತ ಮೈಸೂರು ದಸರಾ
ಜಂಬೂ ಸವಾರಿ ವೀಕ್ಷಣೆಗೆ ಜನಸ್ತೋಮ
ಮರಗಳ ಮೇಲೆ, ಬಿಲ್ಡಿಂಗ್ ಏರಿ ಜಂಬೂ ಸವಾರಿ ಹಾಗೂ ಕಲಾ ತಂಡಗಳ ವೀಕ್ಷಣೆ
ಮೈಸೂರಿನ ಕೆ.ಆರ್ ಸರ್ಕಲ್ ಸೇರಿದಂತೆ ಹಲವೆಡೆ ಜನಸ್ತೋಮ
ಶುಭ ಮೀನ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ – ಜಂಬೂ ಸವಾರಿ ಮೆರವಣಿಗೆ ಶುರು
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ಶುರುವಾಗಿದೆ. ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿದ್ದಾರೆ. ಈ ಮೂಲಕ ಜಂಬೂ ಸವಾರಿಗೆ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಉಪಸ್ಥಿತರಿದ್ದರು.
ಮೈಸೂರು ದಸರೆಯಲ್ಲಿ ಸಾಂಸ್ಕೃತಿಕ ಕಲೆಯ ವೈಭವ
ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿ ವಿರಾಜಮಾನ

ಅಂಬಾರಿ ಕಟ್ಟುವ ಕಾರ್ಯ ಯಶಸ್ವಿ – ಕೆಲವೇ ಕ್ಷಣಗಳಲ್ಲಿ ಜಂಬೂ ಸವಾರಿ ಮೆರವಣಿಗೆ ಶುರು
ದಸರಾ ಮೆರವಣಿಗೆಯಲ್ಲಿ ಕರ್ನಾಟಕ ಅಭಿವೃದ್ಧಿ ಸಾಮರ್ಥ್ಯ ಸಾರುವ ಸ್ತಬ್ಧ ಚಿತ್ರ
ಕ್ಯಾಪ್ಟನ್ ಪ್ರಶಾಂತನ ಮೇಲೆ ಚಿನ್ನದ ಅಂಬಾರಿ ಕಟ್ಟಿದ ಸಿಬ್ಬಂದಿ
ಅರಮನೆಯತ್ತ ಹೊರಟ ತೆಲಂಗಾಣ ಸಿಎಂ
ತೆಲಂಗಾಣ ಸಿಎಂ ರೇವಂತ ರೆಡ್ಡಿ
ಈ ಬಾರಿ ತೆಲಂಗಾಣ, ಕೇರಳಂ ಸಿಎಂ ಗಳಿಗೆ ದಸರಾಗೆ ಆಹ್ವಾನ
ಪುಷ್ಪಾರ್ಚನೆ ವೇಳೆ ಕರ್ನಾಟಕ, ಕೇರಳಂ ಹಾಗೂ ತೆಲಂಗಾಣ ಸಿಎಂ ಭಾಗಿ
ಕುಟುಂಬ ಸಮೇತ ಹೊರಟ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಸಿನಿಸ್ಟಾರ್ಸ್ ಮೆರವಣಿಗೆ
ರಸ್ತೆಯುದ್ದಕ್ಕೂ ಶಿಳ್ಳೆ, ಕೂಗಾಟ. ಏಷ್ಯನ್ ಗೇಮ್ಸ್ ವಿಜೇತರು , RCB ಯ ಶ್ರೇಯಾಂಕ ಪಾಟೀಲ್, ಭಾರತದ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಮೆರವಣಿಗೆಯಲ್ಲಿ ಭಾಗಿ
ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭ

ಅಂಬಾರಿ ಕಟ್ಟುವ ಜಾಗದ ಕಡೆ ಹೊರಟ ಕ್ಯಾಪ್ಟನ್ ಪ್ರಶಾಂತ.
ಅಂಬಾವಿಲಾಸ ಅರಮನೆ ಬಳಿ ಅಂಬಾರಿ ಕಟ್ಟುವ ಜಾಗ.
ಕುಮ್ಕಿ ಆನೆಗಳಾದ ರೂಪ-ಕಾವೇರಿ ಜೊತೆ ಹೆಜ್ಜೆ ಹಾಕಲಿರುವ ಪ್ರಶಾಂತ.
ಈ ಬಾರಿ ಜಂಬೂಸವಾರಿಯಲ್ಲಿ ‘ನಿಶಾನೆ ಆನೆ’ಯಾಗಿ (ಗಂಡಭೇರುಂಡ ಧ್ವಜ ಹೊತ್ತು) ಹೆಜ್ಜೆ ಹಾಕುತ್ತಿರುವ ಅಭಿಮಾನ್ಯು.
ಕ್ಯಾಪ್ಟನ್ ಪ್ರಶಾಂತ ಆನೆಗೆ ಅಂಬಾರಿ ಕಟ್ಟುವ ಕಾರ್ಯ ಆರಂಭ
ಮೈಸೂರು ದಸರಾ ಮೆರವಣಿಗೆಗೆ ಸಿಎಂ ಚಾಲನೆ
ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ.
ಮೈಸೂರು ಪೇಟ ಧರಿಸಿರುವ ಸಿಎಂ ಡಿಕೆ ಶಿವಕುಮಾರ್.
ಕ್ಯಾಪ್ಟನ್ ಪ್ರಶಾಂತನಿಗೆ ಬಣ್ಣ ಹಚ್ಚುವ ಪ್ರಕ್ರಿಯೆ ಆರಂಭ
11 ಆನೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಿದ ನಂತರ ಕೊನೆಯದಾಗಿ ಪ್ರಶಾಂತನಿಗೆ ಬಣ್ಣದ ಚಿತ್ತಾರ.
ನಾಗಲಿಂಗಪ್ಪ ಅವರಿಂದ ವಿಶೇಷ ಚಿತ್ತಾರ ರಚನೆ.
ಚಿನ್ನದ ಅಂಬಾರಿ ಹೊರಲಿರುವ ಪ್ರಶಾಂತ.
ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು
ಮೈಸೂರು ದಸರಾದಲ್ಲಿ ನಡೆಯುತ್ತಿದ್ದ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಡಿಕೆಶಿ
ಪೊಲೀಸರಿಂದ ಗೌರವ ವಂದನೆ ಸಲ್ಲಿಕೆ.
ಯದುವೀರ್ ಒಡೆಯರ್ರಿಂದ ವಿಜಯಯಾತ್ರೆ ಪ್ರಾರಂಭ
ಬನ್ನಿ ಪೂಜೆಗೆ ತೆರಳಿದ ಯದುವೀರ್.
ಚಿನ್ನದ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ.
ಪಟ್ಟದ ಆನೆ, ಪಟ್ಟದ ಹಸುಗಳ ಆಗಮನ.
ಭುವನೇಶ್ವರಿ ದೇವಾಲಯದಲ್ಲಿ ಬನ್ನಿಪೂಜೆ ಸಲ್ಲಿಸಲಿರುವ ಯದುವೀರ್.
ಜಂಬೂಸವಾರಿಯಲ್ಲಿ 12 ಆನೆಗಳು ಭಾಗಿ
13 ಆನೆಗಳ ಪೈಕಿ 12 ಆನೆಗಳು ಮೆರವಣಿಗೆಯಲ್ಲಿ ಭಾಗಿ.
ಈ ಬಾರಿ ಧನಂಜಯನಿಗೆ ಮೆರವಣಿಗೆಯಿಂದ ಕೊಕ್.
ಅಭಿಮನ್ಯು – ನಿಶಾನೆ ಆನೆ
ಪ್ರಶಾಂತ – ಅಂಬಾರಿ ಆನೆ
ಲಕ್ಷ್ಮಿ ಮತ್ತು ಕಾವೇರಿ – ಕುಮ್ಕಿ ಆನೆಗಳು
ಗೋಪಿ – ನೌಪತ್ ಆನೆ
ಶ್ರೀಕಂಠ , ಏಕಲವ್ಯ, ಮಹೇಂದ್ರ, ಸುಗ್ರೀವ, ಶ್ರೀರಾಮ, ರೂಪಾ, ಮತ್ತು ಚೈತ್ರಾ ಸಾಲಾನೆಗಳು
ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗದ ಸಮಯದಲ್ಲಿ ಬದಲಾವಣೆ
ಅರಮನೆ ಪ್ರವೇಶಿಸಿದ ಚಾಮುಂಡೇಶ್ವರಿ ಮೂರ್ತಿ
ಚಾಮುಂಡಿ ಬೆಟ್ಟದಿಂದ ಮೆರವಣಿಗೆ ಹೊರಟ ಚಾಮುಂಡೇಶ್ವರಿ ಮೂರ್ತಿ ಅರಮನೆ ಪ್ರವೇಶಿಸಿದೆ. ಅರಮನೆ ಪುರೋಹಿತರು ತಾಯಿಗೆ ಮಂಗಳಾರತಿ ಮಾಡಿ, ಬೂದಗುಂಬಳ ಕಾಯಿಯಿಂದ ತಾಯಿಗೆ ದೃಷ್ಟಿ ತೆಗೆದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಸಿದ್ಧತೆ ಪೂರ್ಣಗೊಂಡಿದೆ. ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ.
