ಬೆಂಗಳೂರು: 2025ರ ಮೈಸೂರು ದಸರಾ (Mysuru Dasara) ಮಹೋತ್ಸವ ಸಂಬಂಧ ಸೆ.27ರಂದು ಸಂಜೆ 4 ಗಂಟೆಗೆ ಬನ್ನಿಮಂಟಪದಲ್ಲಿ ವೈಮಾನಿಕ ಪ್ರದರ್ಶನ (Air Show) ಹಾಗೂ ಸೆ.28 ಮತ್ತು ಸೆ.29ರಂದು ಅದೇ ಮೈದಾನದಲ್ಲಿ ಸಂಜೆ 6 ಗಂಟೆಗೆ ಡ್ರೋನ್ ಶೋ (Drone Show) ನಡೆಯಲಿದೆ.
ಅ.1ರಂದು ಬನ್ನಿಮಂಟಪದ ಮೈದಾನದಲ್ಲಿ ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ಮತ್ತು ಪಂಜಿನ ಕವಾಯತು ಪೂರ್ವಾಭ್ಯಾಸದ ಕಾರ್ಯಕ್ರಮ ಜರುಗಲಿದೆ. ಅ.2ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳುವುದು ಮತ್ತು ಅದೇ ದಿನ ಸಂಜೆ 6 ಗಂಟೆಗೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಕಾರ್ಯಕ್ರಮ ಜರುಗಲಿದೆ. ಇದನ್ನೂ ಓದಿ: ನವರಾತ್ರಿಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ – ಸ್ವದೇಶಿ ವಸ್ತುಗಳನ್ನು ಖರೀದಿಸಿ: ಮೋದಿ ಕರೆ
ಅರಮನೆ ಆವರಣದಲ್ಲಿ ಮತ್ತು ಬನ್ನಿಮಂಟಪದ ಮೈದಾನದಲ್ಲಿ ಲಭ್ಯವಿರುವ ಆಸನಗಳನ್ನು ಗಮನದಲ್ಲಿಟ್ಟುಕೊಂಡು ವೀಕ್ಷಕರಿಗೆ ಟಿಕೆಟ್ ಮತ್ತು ಪಾಸುಗಳನ್ನು ನೀಡಲಾಗುತ್ತದೆ. ಅಲ್ಲದೇ ಅಧಿಕೃತ ಟಿಕೆಟ್ ಮತ್ತು ಪಾಸು ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಶುರು – ಮಧುಸೂದನ್ ನಾಯ್ಕ್
ಭದ್ರತೆ, ಶಿಷ್ಟಾಚಾರ, ಆದ್ಯತೆ, ಸ್ಥಳದಲ್ಲಿ ಲಭ್ಯವಿರುವ ಸೌಕರ್ಯ ಹಾಗೂ ಸಾರ್ವಜನಿಕ ಸುರಕ್ಷತೆ ಮತ್ತು ಜನಸಮೂಹ ನಿಯಂತ್ರಣಗಳ ಮಾನದಂಡಗಳ ಅನುಗುಣವಾಗಿ ಪಾಸುಗಳನ್ನು ಮತ್ತು ಟಿಕೆಟುಗಳನ್ನು ವಿತರಿಸಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಟಿಕೆಟ್‌ಗಳನ್ನು ಆನ್‌ಲೈನ್ www.mysoredasara.gov.in ಮೂಲಕ ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಕಾರ್ಯಕ್ರಮ ಯಶಸ್ವಿಯಾಗಿಸಲು ಸಹಕರಿಸುವಂತೆ ದಸರಾ ವಿಶೇಷಾಧಿಕಾರಿ ಮತ್ತು ಮೈಸೂರು ಜಿಲ್ಲಾಧಿಕಾರಿಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆಣೆ ಪ್ರಮಾಣಕ್ಕಾಗಿ ದೇವಾಲಯಕ್ಕೆ ಬಂದ ಹೊನ್ನಾಳಿ ಶಾಸಕ – ಸವಾಲೆಸೆದು ಕೈಕೊಟ್ಟ ರೇಣುಕಾಚಾರ್ಯ ಆಪ್ತ