ಮಡಿಕೇರಿ: ಕೊರೊನಾ ಆತಂಕದ ನಡುವೆಯೇ ಈ ಬಾರಿ ಸರಳ ರೀತಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ತಯಾರಿಗಳು ಗರಿಗೆದರಿವೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳು ರಾಜ್ಯದ ತಮ್ಮ ವಿವಿಧ ಬಿಡಾರಗಳಲ್ಲಿ ಭರ್ಜರಿಯಾಗಿ ತಯಾರಾಗುತ್ತಿವೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಆನೆಕಾಡು ಸಾಕಾನೆ ಶಿಬಿರದಲ್ಲಿ ಮೈಸೂರು ದಸರಾದ ಪಟ್ಟದ ಆನೆ ವಿಕ್ರಮ ಹಾಗೂ ಮುಂಚೂಣಿ ಆನೆಗಳಾದ ಧನಂಜಯ, ಕಾವೇರಿ ದಸರೆಗೆ ಹೊರಡುವ ಉತ್ಸುಕದಲ್ಲಿವೆ.
Advertisement
ನಾಡಹಬ್ಬ ದಸರಾಕ್ಕೆ ಭರ್ಜರಿ ತಯಾರಿ ಶುರುವಾಗಿದೆ, ಕೊರೊನಾ ಆತಂಕದ ಮಧ್ಯೆಯೇ ಕಳೆದ ಬಾರಿಯಂತೆ ಈ ಬಾರಿಯು ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗಾಗಿ ಆನೆಗಳ ತಂಡ ಮೈಸೂರಿನತ್ತ ಹೊರಡಲು ಉತ್ಸುಕವಾಗಿವೆ. ದಸರಾದ ಸಾಂಪ್ರದಾಯಿಕ ಗಜಪಯಣಕ್ಕಾಗಿ ಆನೆಗಳ ತಂಡ ರೆಡಿಯಾಗುತ್ತಿದ್ದು, ಅರಮನೆ ನಗರಿಗೆ ಹೊರಡಲು ತಯಾರಿ ಮಾಡಿಕೊಳ್ಳುತ್ತಿವೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ದುಬಾರೆಯಿಂದ ಹಾಗೂ ಆನೆಕಾಡಿನಲ್ಲಿರುವ ಸಾಕಾನೆ ಶಿಬಿರದಲ್ಲಿರುವ ಮೈಸೂರು ದಸರಾದ ಪಟ್ಟದ ಆನೆ ವಿಕ್ರಮ(58) ಸೇರಿದಂತೆ ಮುಂಚೂಣಿ ಆನೆಗಳಾದ ಧನಂಜಯ(43), ಕಾವೇರಿ(44) ದಸರೆ ಜಂಬುಸವಾರಿಗೆ ತಯಾರಿ ನಡೆಸುತ್ತಿವೆ. ಗಾಂಭೀರ್ಯದ ನಡೆಯ ಗಜಗಳು ಶಿಬಿರದಲ್ಲಿ ಮಾವುತ ಹಾಗೂ ಕಾವಾಡಿಗಳ ಆಜ್ಞೆಯಂತೆ ತಾಲೀಮಿನಲ್ಲಿ ತೊಡಗಿವೆ. ಇದನ್ನೂ ಓದಿ: ಕೊಡಗಿಗೆ ಕಾಶ್ಮೀರದ ರೀತಿಯ ಹೆದ್ದಾರಿ ನಿರ್ಮಿಸಿಕೊಡಿ ಗಡ್ಕರಿಗೆ ಬೊಮ್ಮಾಯಿ ಮನವಿ
Advertisement
Advertisement
ಪ್ರತಿ ವರ್ಷ ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ದಸರಾಗೆ ಆರು ಅನೆಗಳು ಮೈಸೂರಿನತ್ತ ಪ್ರಯಾಣ ಬೆಳಸುತ್ತಿದವು. ಅದರೆ ಈ ಬಾರಿ ಕೊರೊನಾ ಆರ್ಭಟ ಮತಷ್ಟು ಹೆಚ್ಚು ಆಗಿರುವುದರಿಂದ ಈ ಬಾರಿ ಶಿಬಿರದಿಂದ ಮೂರು ಸಾಕಾನೆಗಳು ಭಾಗಿಯಾಗುತ್ತಿವೆ. ಶಿಬಿರದಲ್ಲಿ ಇರುವ ಆನೆಗಳಿಗೆ ನಿತ್ಯವೂ ಬೆಳಗ್ಗೆ 6 ಕೆ.ಜಿ. ಭತ್ತದ ಹುಲ್ಲು, 6 ಕೆ.ಜಿ. ಭತ್ತ, ಬೆಲ್ಲ ಜೊತೆಗೆ ವಿಶೆಷ ಆಹಾರವಾಗಿ ಜೋಳ, ಕುಚಲಕ್ಕಿ, ರಾಗಿ ಮುದ್ದೆ ಸಿದ್ಧಪಡಿಸಿದ ಆಹಾರವನ್ನು ನೀಡಿ ತಯಾರು ಮಾಡಲಾಗಿದೆ. ಮೈಸೂರಿಗೆ ತೆರಳುವ ಆನೆಗಳ ತಂಡ ಅಲ್ಲಿ ದಸರಾಕ್ಕಾಗಿ ವಿಶೇಷ ಸಿದ್ಧತೆಯಲ್ಲಿ ತೊಡಗಲಿವೆ. ಸದ್ಯ ಶಿಬಿರದಲ್ಲಿ ಈಗಾಗಲೇ ಸಾಕಾನೆಗಳಿಗೆ ವಿಶೇಷ ಆರೈಕೆ ನಂತರ ಅಗತ್ಯ ತಾಲೀಮು ನಡೆಸಿ ನಾಡಹಬ್ಬದಲ್ಲಿ ಪಾಲ್ಗೊಳಲು ಆನೆಗಳು ಹೊರಡಲು ತಯಾರಿ ನಡೆಸಿದೆ. ಈ ಬಾರಿ ಪ್ರತಿ ಆನೆಯೊಂದಿಗೆ ಮಾವುತ ಕಾವಾಡಿಗಳು ಮಾತ್ರ ತೆರಳಲಿದ್ದು, ನಾಡಹಬ್ಬದ ಯಶಸ್ವಿಯಾಗಿ ಆನೆಗಳನ್ನು ತಯಾರು ಮಾಡಲಿದ್ದಾರೆ.
Advertisement
ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗಾಗಿ ಆನೆಗಳ ತಂಡ ರಾಜ್ಯದ ವಿವಿಧೆಡೆಯಿಂದ ವೀರನಹೊಸಹಳ್ಳಿ ಶಿಬಿರಕ್ಕೆ ತೆರಳಿ ಅಲ್ಲಿಂದ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದು, ಸಂಪ್ರದಾಯದಂತೆ ಗಜಪಯಣ ನಡೆಯಲಿದೆ. ಇದೇ ಸೆಪ್ಟೆಂಬರ್ 13 ರಂದು ಮೈಸೂರಿನತ್ತ ಎಲ್ಲ ಅನೆಗಳು ಪ್ರಯಾಣ ಬೆಳಸಲ್ಲಿವೆ.