ಮಡಿಕೇರಿ: ಕೊಡಗಿನ ರಸ್ತೆಗಳಿಗೆ ಜಮ್ಮು ಕಾಶ್ಮೀರದಲ್ಲಿ ಸೇನೆಯು ನಿರ್ಮಿಸುವಂತಹ ಹೆದ್ದಾರಿಗಳ ನಿರ್ಮಾಣ ಅಗತ್ಯವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಿತಿನ್ ಗಡ್ಕರಿ ಬಳಿ ಮನವಿ ಮಾಡಿದ್ದಾರೆ.
Advertisement
ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಆರಂಭವಾದ ಭಾರೀ ಭೂ ಕುಸಿತದಂತಹ ಘಟನೆಗಳು ಮತ್ತೆ ಮತ್ತೆ ಮರುಕಳುಹಿಸುತ್ತಲೇ ಇವೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ 22 ಕಡೆಗಳಲ್ಲೂ ಭೂಕುಸಿತವಾಗಿತ್ತು. ಮಡಿಕೇರಿಯಿಂದ ಜೋಡುಪಾಲದವರೆಗೆ ಕಡಿದಾದ ಬೆಟ್ಟ ಪ್ರದೇಶವಿದ್ದು ಅವುಗಳನ್ನು 90 ಡಿಗ್ರಿಯಲ್ಲಿ ಕೊರೆದು ರಸ್ತೆ ಮಾಡಿರುವುದೇ ಬೆಟ್ಟಗಳು ಮತ್ತು ಹೆದ್ದಾರಿಗಳು ಕುಸಿಯಲು ಕಾರಣ ಎನ್ನಲಾಗುತ್ತಿದೆ. ಇದನ್ನೂ ಓದಿ: ಕಲಾಪಕ್ಕೆ ಸಚಿವರ ಹಾಜರಿ ಕಡ್ಡಾಯ- ಸಿಎಂಗೆ ಪತ್ರ ಬರೆದ ಸಭಾಪತಿ ಹೊರಟ್ಟಿ
Advertisement
Advertisement
22 ಕಡೆಗಳಲ್ಲಿ ಕುಸಿದಿದ್ದ ಹೆದ್ದಾರಿಗೆ 58 ಕೋಟಿ ರೂಪಾಯಿ ವ್ಯಯಿಸಿ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಆದರೂ ಹೆದ್ದಾರಿಗಳು ಮತ್ತೆ ಕುಸಿಯುತ್ತಲೇ ಇರುವುದು ಮಂಗಳೂರು ಮತ್ತು ಮಡಿಕೇರಿ ನಡುವಿನ ಸಂಪರ್ಕವನ್ನು ಶಾಶ್ವತವಾಗಿ ಕಡಿತ ಮಾಡುವ ಆತಂಕ ಎದುರಾಗಿದೆ. ಕಳೆದ ಮೂರು ವರ್ಷಗಳಿಂದಲೂ ಹೆದ್ದಾರಿಗಳು ಕುಸಿಯುತ್ತಿರುವುದರಿಂದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಡಿಕೇರಿಯಿಂದ ಸಂಪಾಜೆವರೆಗೆ ಕುಸಿಯುತ್ತಿರುವ ಹೆದ್ದಾರಿ ಕಾಮಗಾರಿಗೆ ಮತ್ತೆ 100 ಕೋಟಿ ರೂಪಾಯಿಯ ಅಗತ್ಯವಿದ್ದು ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡುವುದಾಗಿ ಹೇಳಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಸಿಎಂ
Advertisement
ಈಗ ಮಾಡುತ್ತಿರುವ ಕಾಮಗಾರಿಗಳಿಂದ ಹೆದ್ದಾರಿಗಳ ಕುಸಿತಕ್ಕೆ ಶಾಶ್ವತ ಪರಿಹಾರ ಅಲ್ಲ ಎಂದು ಹೇಳಲಾಗಿದೆ. ಈ ಕುರಿತು ಕಳೆದ ಮೂರು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಅವರನ್ನೂ ಭೇಟಿ ಜಮ್ಮು ಮತ್ತು ಕಾಶ್ಮೀರಗಳಲ್ಲಿ ಸೇನೆಯು ನಿರ್ಮಿಸುವಂತಹ ಹೆದ್ದಾರಿಗಳ ನಿರ್ಮಾಣ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.