Advertisements

ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

ಮೈಸೂರು: ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಮುಂಜಾನೆ 4.40ರಿಂದ ಅರಮನೆಯಲ್ಲಿ ಹೋಮ ಆರಂಭವಾಗಿದೆ.

Advertisements

ಹೋಮಕ್ಕೆ ಯದುವೀರ್ ಒಡೆಯರ್ ಅವರಿಂದ ಪೂರ್ಣಾಹುತಿ. 5.45ಕ್ಕೆ ಆನೆ ಕುದುರೆ ಹಸುಗಳ ಆಗಮನವಾಗಿದೆ. 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೇರವೇರಿದೆ. ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ. ಉತ್ತರ ಪೂಜೆ ನಂತರ ಶಮಿ ಪೂಜೆ ನಂತರ ಚಾಮುಂಡಿ ದೇವಿ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಗಿದೆ.

Advertisements

ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಜಯಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮುಂಜಾನೆ 5.45ಕ್ಕೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 7.20ರಿಂದ 7.40ರವರೆಗೆ ಅರಮನೆ ರಾಜಪುರೋಹಿತರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆ ನಡೆಸಿದ ಯದುವೀರ್ ಒಡೆಯರ್, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಮೂಲಕ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2021 ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಕೆಂಪು ಸೀರೆಯುಡಿಸಿ ಅಲಂಕಾರ ಮಾಡಲಾಗಿದೆ. ಬೆಳ್ಳಿ ರಥದ ಮೂಲಕ ತಾಯಿ ಚಾಮುಂಡೇಶ್ವರಿಯನ್ನು ಕರೆದೊಯ್ಯುಲಾಗಿದೆ. ಸಚಿವ ಎಸ್.ಟಿ.ಸೋಮಶೇಖರ್‌ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು. 8 ಗಂಟೆಗೆ ಚಾಮುಂಡಿ ಬೆಟ್ಟದಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆಗೆ ಬರಲಿದೆ. ತಾಯಿಯನ್ನು ಸ್ವಾಗತಿಸಲು ಭಕ್ತರು ಉತ್ಸುಕರಾಗಿದ್ದಾರೆ. ಬೆಟ್ಟದ ಪಾದದಿಂದ ಅರಮನೆಯ ರಸ್ತೆಯ ವರೆಗೆ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕಲಾಗಿದೆ. ದೇವರ ನೈವೇದ್ಯಕ್ಕೆ ನವಧಾನ್ಯ ಉಸ್ಲಿ ನವರಾತ್ರಿ ಸ್ಪೆಷಲ್

Advertisements

ಜನಪದ ಕಲಾತಂಡಗಳೊಂದಿಗೆ ಸ್ಟೆಪ್ ಹಾಕಿದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜಾನಪದ ಕಲಾ ತಂಡಗಳ ಜೊತೆಗೆ ನೃತ್ಯ ಮಾಡಿ ಕಂಸಾಳೆ ಬಡಿದು ಹುರುಪು ತುಂಬಿದ್ದಾರೆ. ಅರಮನೆಯಂಗಳದಲ್ಲಿರುವ ಜಾನಪದ ಕಲಾ ತಂಡದ ಜೊತೆಗೆ ವೀರಗಾಸೆ ಕತ್ತು ಗುರಾಣಿ ಹಿಡಿದು ಉಸ್ತುವಾರಿ ಸಚಿವರು ಕುಣಿದ ಕುಪ್ಪಳಿಸಿದ್ದಾರೆ. ಸರಳ ದಸರಾದಲ್ಲಿ ಅದ್ದೂರಿ ಸ್ಟಪ್ ಹಾಕಿದ ಸೋಮಶೇಖರ್ ಎಲ್ಲಾ ಜಾನಪದ ಕಲಾ ತಂಡಗಳೊಂದಿಗೆ  ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಎಸ್‍ಟಿಎಸ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಸಾಥ್ ನೀಡಿದ್ದಾರೆ.

ಜಯಮಾರ್ತಂಡ ದ್ವಾರದ ಮೂಲಕ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆ ಆವರಣ ಪ್ರವೇಶಿಸಿದೆ. ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ತಾಯಿ ಉತ್ಸವ ಮೂರ್ತಿಗೆ ಪೂರ್ಣ ಕುಂಭ ಸ್ವಾಗತ ಮಾಡಲಾಗಿದೆ. ಅಂಬಾವಿಲಾಸ ಅರಮನೆ ದ್ವಾರ ಪ್ರವೇಶಿಸಿದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಂಪ್ರದಾಯ ಪೂಜೆ ವಿಧಿವಿಧಾನ ಮೂಲಕ ಉತ್ಸವ ಮೂರ್ತಿ ಬರ ಮಾಡಿಕೊಂಡ ಅರಮನೆ ಅರ್ಚಕರು ಉತ್ಸವ ಮೂರ್ತಿ ಅಂಬಾವಿಲಾಸ ಅರಮನೆಗೆ ಶಿಫ್ಟ್ ಮಾಡಲಾಗಿದೆ. ದಸರಾ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ  ನಡೆಯುತ್ತಿವೆ.

Advertisements
Exit mobile version