ಮೈಸೂರು: ವಿಶ್ವ ಪ್ರಸಿದ್ಧ ದಸರಾ ಜಂಬೂ ಸವಾರಿ (Dasara Jamboo Savari) ಆರಂಭಕ್ಕೂ ಮುನ್ನ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ನೀಡಲು ವಿಶೇಷವಾದ ಉಡುಗೊರೆ ಸಿದ್ಧವಾಗಿದೆ. ಸಿಎಂಗೆ ನೀಡಲು ಆರಾಧ್ಯ ದೈವ ಗಂಗಾಧರ ಅಜ್ಜಯ್ಯನ (Gangadhara Ajjayya) ವಿಗ್ರಹ ತಯಾರಾಗಿದೆ.
ನಂದಿ ಧ್ವಜ ಪೂಜೆ ಬಳಿಕ ಸಿಎಂ, ಡಿಸಿಎಂ, ಸಚಿವರಿಗೆ ವಿಶೇಷ ಉಡುಗೊರೆ ನೀಡಲಾಗುತ್ತದೆ. ಡಿಕೆಶಿಗಾಗಿ ಪಂಚಲೋಹದಲ್ಲಿ ಗಂಗಾಧರ ಅಜ್ಜಯ್ಯನ ವಿಗ್ರಹ ತಯಾರಾಗಿದೆ. ಡಿಸಿಎಂ ಪರಮೇಶ್ವರ್ ಅವರಿಗೆ ಶಾಂತಿಧೂತ ಬುದ್ಧನ ವಿಗ್ರಹ ಹಾಗೂ ಸಚಿವ ಶಿವರಾಜ್ ತಂಗಡಗಿ ಅವರಿಗಾಗಿ ಮನೆದೇವರಾದ ಕನಕಾಚಲಪತಿ ದೇವರ ಮೂರ್ತಿಯನ್ನು ತಯಾರಿಸಲಾಗಿದೆ. ಇದನ್ನೂ ಓದಿ: ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ – ಯದುವೀರ್ ಒಡೆಯರ್ರಿಂದ ಪೂಜಾ ಕೈಂಕರ್ಯ
ಮೈಸೂರಿನ ಖ್ಯಾತ ಶಿಲ್ಪಿ ರಾಜೇಶ್ ಈ ವಿಶೇಷ ಉಡುಗೊರೆ ತಯಾರಿಸಿದ್ದಾರೆ. ಪ್ರತಿ ವರ್ಷ ನಂದಿಪೂಜೆ ಬಳಿಕ ಮುಖ್ಯಮಂತ್ರಿಗಳಿಗೆ ಉಡುಗೊರೆಯನ್ನು ಶಿಲ್ಪಿಗಳ ಕುಟುಂಬ ನೀಡುತ್ತದೆ. ಇದನ್ನೂ ಓದಿ: ಜಂಬೂ ಸವಾರಿ ವೀಕ್ಷಣೆಗೆ ದಾರಿಯುದ್ದಕ್ಕೂ ಜಾಗ ರಿಸರ್ವ್ ಮಾಡಿದ ಜನ!
