ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2026) ಉದ್ಘಾಟನೆಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 11 ರಂದು ಚಾಮುಂಡಿ ಬೆಟ್ಟದಲ್ಲಿ (Chamundi Hills) ದಸರಾ ಉದ್ಘಾಟನೆಯಾಗಲಿದೆ.
ಈ ಬಾರಿ ಜುಲೈ 26 ರಂದು ಗಜಪಯಣ ಆರಂಭವಾಗಲಿದೆ. ಅಕ್ಟೋಬರ್ 11ಕ್ಕೆ ದಸರಾ ಉದ್ಘಾಟನೆಗೊಳ್ಳಲಿದೆ. ಅ.21 ರಂದು ವಿಜಯದಸಮಿ ಜಂಬೂಸವಾರಿ ನಡೆಯಲಿದೆ. ಅಂದು ಸಾಯಂಕಾಲ 4:10 ರ ಮೀನಾ ಲಗ್ನದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ದಸರಾ ಉದ್ಘಾಟಕರನ್ನು ನಿರ್ಣಯಿಸುವ ಅಧಿಕಾರ ಸಿಎಂ ನೀಡುವ ಸಾಧ್ಯತೆ ಇದೆ. ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರು ಕಳೆದ ವರ್ಷ ದಸರಾ ಉದ್ಘಾಟನೆ ಮಾಡಿದ್ದರು.
