ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2022) ಮಹೋತ್ಸವದ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡಾ ಹತ್ತು-ಹಲವು ಕಾರ್ಯಕ್ರಮಗಳು ಮೇಳೈಸಿವೆ. ಮಹಿಳಾ ಮತ್ತು ಮಕ್ಕಳ ದಸರಾ, ಯೋಗ ದಸರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.
Advertisement
ಹೌದು. ಮೈಸೂರಿನಲ್ಲಿ ನವರಾತ್ರಿ (Navaratri) ಯ ಸಂಭ್ರಮ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಶರನ್ನವರಾತ್ರಿಯ ಎರಡನೇ ದಿನವಾದ ಇಂದು ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿವೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ದಸರಾ, ಯೋಗ (Yoga) ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರತಿದೆ. ದಸರಾ ರಂಗೋಲಿ ಸ್ಪರ್ಧೆ, ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನಗಳು ಪ್ರಮುಖ ಆಕರ್ಷಣೆ ಆಗಿತ್ತು. ಇದನ್ನೂ ಓದಿ: ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು – ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು
Advertisement
Advertisement
ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಇಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅರಮನೆ ಅಂಗಳದಲ್ಲಿ ನೂರಾರು ಸ್ಪರ್ಧಿಗಳು ರಂಗೋಲಿ ಚಿತ್ತಾರ ಬಿಡಿಸಿ ಸಂಭ್ರಮಿಸಿದರು. ಸಾಂಪ್ರದಾಯಿಕ, ಕಲಾತ್ಮಕ, ಆಧುನಿಕ ಶೈಲಿಯಲ್ಲಿ ರಂಗೋಲಿ ಅರಮನೆ ಆವರಣದಲ್ಲಿ ಮೇಳೈಸಿದವು. ರಂಗೋಲಿ ಸ್ಪರ್ಧೆಗೆ ಶಾಸಕ ಎಸ್. ಎ.ರಾಮದಾಸ್ ಚಾಲನೆ ನೀಡಿ ಸ್ಪರ್ಧಿಗಳಿಗೆ ಶುಭ ಹಾರೈಸಿದ್ರು. ಅಲ್ಲದೇ 86 ವರ್ಷದ ವೃದ್ಧೆಯೋರ್ವರು ರಂಗೋಲಿ ಬಿಡಿಸಿ ಎಲ್ಲರ ಗಮನ ಸೆಳೆದರು.
Advertisement
ಆರೋಗ್ಯ ವೃದ್ಧಿಗಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಯೋಗ ವಾಹಿನಿ ಕಾರ್ಯಕ್ರಮವನ್ನ ಹಮ್ಕಿಕೊಳ್ಳಲಾಗಿತ್ತು. ನಗರದ ಜವರೇಗೌಡ ಪಾರ್ಕ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ನೂರಾರು ಯೋಗ ಪಟುಗಳು ಸಾಮೂಹಿಕ ಯೋಗಾಭ್ಯಾಸ ಮಾಡಿ ಸಂಭ್ರಮಿಸಿದರು. ಅಲ್ಲದೇ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜೆ.ಕೆ.ಮೈದಾನದಲ್ಲಿ ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನ ಆಯೋಜನೆ ಮಾಡಲಾಗಿತ್ತು. 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಒಟ್ಟಾರೆ ದಸರಾ ಮಹೋತ್ಸವದ ಎರಡನೇ ದಿನದ ಹಲವು ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆತಿದ್ದು ಇನ್ನೂ ಎಂಟು ದಿನಗಳ ಕಾಲ ದಸರಾ ವೈಭವ ಕಳೆಗಟ್ಟಲಿದೆ. ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್