ಮೈಸೂರು: ಅರಮನೆಯ ಆವರಣದಲ್ಲಿರುವ ದಸರಾ ಗಜಪಡೆಗೆ ಇಂದಿನಿಂದ ತಾಲೀಮು ಶುರುವಾಗಿದೆ. ಅರಮನೆಯಿಂದ ಬನ್ನಿಮಂಟಪದವರೆಗೂ ಈ ತಾಲೀಮು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಡೆಯಲಿದೆ.
Advertisement
ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ಶುರುವಾಗಲಿದೆ. ಮೊದಲ ವಾರ ಆನೆಗಳಿಗೆ ತಾವು ಸಾಗಬೇಕಾದ ಹಾದಿಯ ಪರಿಚಯ ಮಾಡಿಸುವ ಕೆಲಸ ನಡೆಯುತ್ತದೆ. ನಂತರ ಹಂತ ಹಂತವಾಗಿ ಆನೆಗಳಿಗೆ ಭಾರ ಹಾಕಿ ತಾಲೀಮು ನಡೆಸಲಾಗುತ್ತದೆ.
Advertisement
Advertisement
ಎರಡು ವರ್ಷ ಕರೋನಾ ಹಿನ್ನೆಲೆಯಲ್ಲಿ ದಸರಾ ನಡೆಯದ ಕಾರಣ ಈ ಮಾರ್ಗವನ್ನು ಆನೆಗಳು ಮರೆತಿರುತ್ತವೆ. ಈ ದೃಷ್ಟಿಯಿಂದ ಈ ಬಾರಿ ಒಂದು ವಾರ ಕಾಲ ಕೇವಲ ಹಾದಿ ಪರಿಚಿಯಿಸುಚ ತಾಲೀಮು ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗ್ಳೂರಿನ ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆಗೆ ಅಪಮಾನ
Advertisement
57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ, 63 ವರ್ಷದ ಅರ್ಜುನ, 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ, 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ 18 ವರ್ಷದ ಪಾರ್ಥಸಾರಥಿ ಆನೆಗಳ ಆಗಮನವಾಗಿದೆ.
Live Tv
[brid partner=56869869 player=32851 video=960834 autoplay=true]