ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿ ಪೊಲೀಸರ ಅತಿಥಿಯಾದ ಆರೋಪಿ ಫರಾನ್ ಪಾಷಾ ಈ ಹಿಂದೆ ಮೂರು ಬಾರಿ ಶಾಸಕರ ಕೊಲೆಗೆ ಯತ್ನಿಸಿ ಫೇಲ್ ಆಗಿದ್ದನು.
ಮೈಸೂರಿನ ಮಿಲಾದ್ ಪಾರ್ಕ್ ಬಳಿ ಹತ್ಯೆಗೆ ಪ್ಲಾನ್ ಮಾಡಿ ಫೇಲ್ ಆಗಿದ್ದನು. ಮುಸ್ಲಿಮರೇ ಹೆಚ್ಚು ಇರುವ ಸ್ಥಳದಲ್ಲಿ ತನ್ವೀರ್ ಕೊಲೆಗೆ ಸ್ಕೇಚ್ ಹಾಕಲಾಗಿತ್ತು. ಫರಾನ್ ಪಾಷಗೆ ಅಬೀದ್ ಪಾಷಾನಿಂದ ಟ್ರೈನಿಂಗ್ ನೀಡಿರುವ ವಿಚಾರದ ಕುರಿತು ತೀವ್ರ ವಿಚಾರಣೆ ನಡೆಸಿದ ಬಳಿಕ ಆರೋಪಿ ಫರಾನ್ ಸತ್ಯ ಬಾಯಿಬಿಟ್ಟಿದ್ದಾನೆ.
ನಡೆದಿದ್ದೇನು?
ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲ್ ಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದನು. ಆದರೆ ಸ್ಥಳದಿಂದ ಓಡಿ ಹೋಗುತ್ತಿದ್ದಂತೆಯೇ ಫರಾನ್ ಮ್ಯಾಟ್ ಎಡವಿ ಬಿದ್ದಿದ್ದು, ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇತ್ತ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ
ಕೊಲೆಗೆ ತಂಡ ರಚನೆ:
ಮೈಸೂರಲ್ಲಿ ಮಹಾ ಮರ್ಡರ್ ಗೆ ಬಿಗ್ ಸ್ಕೆಚ್ ಹಾಕಲಾಗಿದೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯವ್ಯಕ್ತಿಗಳೇ ಟಾರ್ಗೆಟ್ ಆಗಿದೆ. 30 ತಂಡಗಳು ಸಕ್ರಿಯವಾಗಿ ಕೆಲಸಮಾಡುತ್ತಿವೆ. ಒಂದು ತಂಡದಲ್ಲಿ 15 ಜನರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಹಂತದಲ್ಲಿ ಪ್ರಮುಖ ವ್ಯಕ್ತಿಗಳ ಚಲನವಲನ ಅದರ ಪರಿಣಾಮಗಳನ್ನ ಸಂಘಟನೆ ಮುಖಂಡರಿಗೆ ಸದಸ್ಯರು ತಿಳಿಸುತ್ತಿದ್ದರು.
ತನ್ವೀರ್ ಹತ್ಯೆ ಯತ್ನ ಪ್ರಕರಣವೂ ಇದೇ ರೀತಿ ವಾಚ್ ಮಾಡಿಯೇ ಮಾಡಲಾಗಿತ್ತು. ರಾಜಕೀಯವಾಗಿ ಬೇರೆ ರೀತಿ ಮುಗಿಸಲು ಸಾಧ್ಯವಾಗದಿದ್ದಾಗ ಕೊಲೆ ಯತ್ನ ಮಾಡಲಾಗಿದೆ. ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷಾ ತನ್ವೀರ್ ಕೊಲೆ ಯತ್ನ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ತನಿಖೆಯಿಂದ ಖಚಿತವಾಗಿದೆ. ಈಗಾಗಲೇ ಪ್ರಕರಣದ 5 ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ಭಾಗಿ ಖಚಿತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ