ಪಾಕಿಸ್ತಾನದಲ್ಲಿ ಕಾಡುತ್ತಿದೆ ನಿಗೂಢ ವೈರಲ್ ಜ್ವರ

Public TV
2 Min Read
PAK

ಇಸ್ಲಾಮಾಬಾದ್: ನಿಗೂಢ ವೈರಲ್ ಜ್ವರವು ಪಾಕಿಸ್ತಾನದ ಕರಾಚಿಯಲ್ಲಿ ಕಾಡುತ್ತಿದ್ದು, ವೈದ್ಯರು ಇದು ಯಾವ ಜ್ವರವೆಂದು ತಿಳಿಯದೆ ತತ್ತರಿಸುತ್ತಿದ್ದಾರೆ.

vaccine pakistan

ಪಾಕಿಸ್ತಾನದ ಕರಾಚಿಯಲ್ಲಿ ‘ನಿಗೂಢ ವೈರಲ್ ಜ್ವರ’ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ವೈರಲ್ ಜ್ವರವನ್ನು ಮೊದಲು ಡೆಂಗ್ಯೂ ಎಂದು ಪರಿಗಣಿಸಿ ಪರೀಕ್ಷಿಸಿದಾಗ, ರಿಪೋರ್ಟ್ ನೆಗೆಟಿವ್ ಬಂತು ಎಂದು ವೈದ್ಯರು ಮತ್ತು ರೋಗಶಾಸ್ತ್ರಜ್ಞರು ತಿಳಿಸಿದರು. ಈ ರೋಗದಿಂದ ರೋಗಿಗಳ ಪ್ಲೇಟ್‍ಲೆಟ್‍ಗಳು ಮತ್ತು ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತಿದ್ದು, ಡೆಂಗ್ಯೂ ರೋಗದ ಲಕ್ಷಣವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದ 3 ವಿಭಾಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಉತ್ತರಾಖಂಡ್

ಡೌ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‍ನ ಆಣ್ವಿಕ ರೋಗಶಾಸ್ತ್ರದ ಮುಖ್ಯಸ್ಥ ಪ್ರೊ.ಸಯೀದ್ ಖಾನ್ ಈ ಕುರಿತು ಮಾತನಾಡಿದ್ದು, ಒಂದೆರಡು ವಾರಗಳಿಂದ, ನಾವು ಈ ವೈರಲ್ ಜ್ವರದ ಪ್ರಕರಣಗಳನ್ನು ನೋಡುತ್ತಿದ್ದೇವೆ. ಈ ಜ್ವರದಿಂದ ರೋಗಿಗಳಲ್ಲಿ ಪ್ಲೇಟ್‍ಲೆಟ್‍ಗಳು ಮತ್ತು ಬಿಳಿ ರಕ್ತ ಕಣಗಳು ಕುಸಿಯುತ್ತಿವೆ. ಈ ರೋಗಲಕ್ಷಣಗಳು ಡೆಂಗ್ಯೂ ಜ್ವರಕ್ಕೆ ಹೋಲುತ್ತವೆ. ಆದರೆ ಈ ಕುರಿತು ಪರೀಕ್ಷೆಸಿದಾಗ ರಿಪೋರ್ಟ್ ನೆಗೆಟಿವ್ ಬರುತ್ತಿದೆ ಎಂದು ಹೇಳಿದರು.

dengue 1

ಜಿಲ್ಲಾ ಆರೋಗ್ಯ ಅಧಿಕಾರಿ(ಡಿಎಚ್‍ಒ) ಈ ಕುರಿತು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಶುಕ್ರವಾರ 45 ಜನರಿಗೆ ಹೊಸ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿವೆ. ಈ ನಿಗೂಢ ವೈರಸ್ ಕಾಯಿಲೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ನಗರದಲ್ಲಿ ಪ್ಲೇಟ್‍ಲೆಟ್‍ಗಳ ಮೆಗಾ ಯೂನಿಟ್‍ಗಳು ಮತ್ತು ಯಾದೃಚ್ಛಿಕ ಘಟಕಗಳ ತೀವ್ರ ಕೊರತೆಯಿದೆ. ಈ ಹಿನ್ನೆಲೆ ಇಲ್ಲಿನ ಜನರು ತುಂಬಾ ಕಷ್ಟ ಪಡುತ್ತಿದ್ದಾರೆ ಎಂದು ತಿಳಿಸಿದರು.

ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ಮತ್ತು ಹೆಮಟೋ-ರೋಗಶಾಸ್ತ್ರಜ್ಞರು ಸೇರಿದಂತೆ ಇತರ ತಜ್ಞರು, ಕರಾಚಿಯಲ್ಲಿ ಡೆಂಗ್ಯೂ ವೈರಸ್ ತರಹದ ಇನ್ನೊಂದು ರೋಗ ಕಾಣಿಸಿಕೊಂಡಿದೆ ಎಂದು ದೃಢಪಡಿಸಿದ್ದಾರೆ. ಇದು ಡೆಂಗ್ಯೂ ಜ್ವರದಂತೆಯೇ ಕಾರ್ಯನಿರ್ವಹಿಸುವ ಮತ್ತು ಅದೇ ಚಿಕಿತ್ಸಾ ಫ್ರೋಟೋಕಾಲ್ಸ್ ಗಳ ಅಗತ್ಯವಿರುವ ರೋಗವನ್ನು ಉಂಟುಮಾಡುತ್ತದೆ. ಆದರೆ ಇದು ಡೆಂಗ್ಯೂ ಜ್ವರವಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಗಿದ ಯೋಗಾನರಸಿಂಹ ಸ್ವಾಮಿ ಗೋಪುರದ ಕಳಶ – ಆತಂಕದಲ್ಲಿ ಭಕ್ತರು

dengue

ಗುಲ್ಯನ್-ಎ-ಇಕ್ಬಾಲ್‍ನ ಮಕ್ಕಳ ಆಸ್ಪತ್ರೆಯ ಆಣ್ವಿಕ ವಿಜ್ಞಾನಿ ಡಾ.ಮುಹಮ್ಮದ್ ಜೊಹೈಬ್ ಅವರು, ಈ ವೈರಸ್ ಡೆಂಗ್ಯೂ ಅಲ್ಲ. ಆದರೆ ಡೆಂಗ್ಯೂ ತರಹದ ರೋಗಲಕ್ಷಣಗಳನ್ನು ಹೊಂದಿರುವ ವೈರಲ್ ಜ್ವರವಾಗಿದೆ ಎಂದು ದೃಢಪಡಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಂಗ್ಯೂ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಇದು ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಸಾಮಾನ್ಯವಾಗಿದೆ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗುತ್ತೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *