InternationalLatestMain Post

ಚಿಲಿಯಲ್ಲಿ ನಿಗೂಢ ಸಿಂಕ್‍ಹೋಲ್ ಪತ್ತೆ – ಹೇಗೆ ಬಂತು ಅಂತ ಯಾರಿಗೂ ಗೊತ್ತಿಲ್ಲ!

Advertisements

ಸ್ಯಾಂಟಿಯಾಗೊ: ಜಗತ್ತಿನಲ್ಲಿ ಒಂದಲ್ಲಾ ಒಂದು ವಿಸ್ಮಯಗಳು ಆಗಾಗ ನಡೆಯುತ್ತಲೇ ಇರುತ್ತದೆ. ಕಳೆದ ವಾರ ಚಿಲಿ ದೇಶದ (Mining In Chile) ಗಣಿಗಾರಿಕೆ ಪ್ರದೇಶವೊಂದರಲ್ಲಿ ಬೃಹತ್ ಕುಳಿಯೊಂದು ಪತ್ತೆಯಾಗಿದ್ದು, ಇದೀಗ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ.

ಚಿಲಿ ದೇಶದ ಉತ್ತರ ಭಾಗದಲ್ಲಿರುವ ಗಣಿಗಾರಿಕೆ ಪ್ರದೇಶದಲ್ಲಿ ಕಾಣಿಸಿಕೊಂಡ ಸುಮಾರು 82 ಮೀಟರ್ ವ್ಯಾಸದ ನಿಗೂಢ ಸಿಂಕ್‍ಹೋಲ್ ಬಗ್ಗೆ ತನಿಖೆ ಇದೀಗ ಆರಂಭಗೊಂಡಿದೆ. ಚಿಲಿ ದೇಶದ ರಾಜಧಾನಿ ಸ್ಯಾಂಟಿಯಾಗೊದ ಉತ್ತರಕ್ಕೆ ಸುಮಾರು 656 ಕಿಲೋಮೀಟರ್ ದೂರದಲ್ಲಿ ಕೆನಡಾದ ಲುಂಡಿನ್ ಮೈನಿಂಗ್ ತಾಮ್ರದ ಗಣಿ ಇರುವ ಭಾಗದಲ್ಲೇ ಈ ಬೃಹತ್ ಸಿಂಕ್‍ಹೋಲ್ (Chile Sinkhole) ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂವಿಜ್ಞಾನ ಮತ್ತು ಗಣಿಗಾರಿಕೆ ಸೇವೆ ಅಂದಾಜಿಸಿದೆ. ಇದನ್ನೂ ಓದಿ: ಪಶು ಸಂಗೋಪನೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ- ಶಿಕ್ಷಕ ಅರೆಸ್ಟ್

ಕೆನಡಾದ ಸಂಸ್ಥೆ ಲುಂಡಿನ್ ಗಣಿಗಾರಿಕೆ ಮಾಡುತ್ತಿರುವ ಅಲ್ಕಾಪರ್ರೋಸಾ ಗಣಿ ಬಳಿ, ಟಿಯೆರಾ ಅಮರಿಲ್ಲಾ ಪುರಸಭೆಯು ಸಿಂಕ್‍ಹೋಲ್ ಸುತ್ತಲೂ 100 ಮೀಟರ್ ಭದ್ರತಾ ಪರಿಧಿಯನ್ನು ನಿರ್ಮಿಸಲಾಗಿದ್ದು, ಸಿಬ್ಬಂದಿ, ಉಪಕರಣಗಳು ಅಥವಾ ಮೂಲಸೌಕರ್ಯಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಮತ್ತು ಸಿಂಕ್ಹೋಲ್ ಪತ್ತೆಯಾದಾಗಿನಿಂದ ಸ್ಥಿರವಾಗಿದೆ ಎಂದು ಕಂಪನಿ ತಿಳಿಸಿದೆ.

ಸ್ಯಾಂಟಿಯಾಗೊದ ಉತ್ತರ ಭಾಗದಲ್ಲಿ ಸುಮಾರು 800 ಕಿಲೋಮೀಟರ್ (ಸುಮಾರು 500 ಮೈಲುಗಳು) ದೂರದ ಪ್ರದೇಶದಲ್ಲಿ ಸಿಂಕ್‍ಹೋಲ್ ಪತ್ತೆಯಾಗಿದ್ದು, ಅಲ್ಕಾಪರ್ರೋಸಾ ಭೂಗತ ಗಣಿ ಪ್ರದೇಶದ ಅಭಿವೃದ್ಧಿ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಿಲಿಯು ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದಕನ ದೇಶವಾಗಿದ್ದು, ಇಡೀ ಜಗತ್ತಿಗೆ ಕಾಲು ಭಾಗದಷ್ಟು ಪೂರೈಕೆ ಮಾಡುತ್ತದೆ.

ಈ ಸಿಂಕ್‍ಹೋಲ್ ಸರಿಸುಮಾರು 200 ಮೀಟರ್‍ಗಳಷ್ಟು ಆಳವಿದೆ. ಸಿಂಕ್‍ಹೋಲ್‍ನ ಕೆಳಭಾಗದಲ್ಲಿ ನಾವು ಯಾವುದೇ ವಸ್ತುವನ್ನು ಪತ್ತೆ ಮಾಡಿಲ್ಲ. ಆದರೆ ಸಾಕಷ್ಟು ನೀರು ಇರುವುದು ಪತ್ತೆಯಾಗಿದೆ ಎಂದು ಏಜೆನ್ಸಿಯ ನಿರ್ದೇಶಕ ಡೇವಿಡ್ ಮಾಂಟೆನೆಗ್ರೊ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

ಸಿಂಕ್‍ಹೋಲ್‍ನಿಂದ ಸಮೀಪವಿರುವ ಮನೆಯು 600 ಮೀಟರ್‍ಗಿಂತ ಹೆಚ್ಚು ದೂರದಲ್ಲಿದೆ. ಆದರೆ ಯಾವುದೇ ಜನನಿಬಿಡ ಪ್ರದೇಶ ಅಥವಾ ಸಾರ್ವಜನಿಕ ಸೇವೆಯು ಪೀಡಿತ ವಲಯದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಇದರಿಂದ ತನಿಖೆ ನಡೆಸಲು ಸುಳಬಾವಗಿದೆ ಎಂದು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button