ನಾಡಿನಾದ್ಯಂತ ಕಾತರದಿಂದ ಕಾಯುತ್ತಿರುವ ಮೈಸೂರು ಜಂಬು ಸವಾರಿ ಶುಕ್ರವಾರ ನಡೆಯಲಿದೆ. ಇಲ್ಲಿಯವರೆಗೂ ನವದುರ್ಗೆಯನ್ನು ಪೂಜೆ ಮಾಡಿ ಸಿಹಿ ಮಾಡಿ ಸಂಭ್ರಮಿಸಿದ್ದೀರಾ. ಈಗ ಹಬ್ಬಕ್ಕಾಗಿ ಆರೋಗ್ಯಕ್ಕೂ ಉತ್ತಮವಾದ ಮೈಸೂರು ಬಿಸಿಬಿಸಿ ರಸಂ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಪುಡಿ ಮಾಡಲು
1. ದನಿಯಾ – 2 ಚಮಚ
2. ಜೀರಿಗೆ – 1 ಚಮಚ
3. ಕಡಲೆ ಬೇಳೆ – 1 ಚಮಚ
4. ಮೆಣಸು – 1 ಚಮಚ
5. ಕೆಂಪು ಒಳ ಮೆಣಸಿನ ಕಾಯಿ – 3 ರಿಂದ 4
6. ಕೊಬ್ಬರಿ ತುರಿ – ಅರ್ಧ ಬಟ್ಟಲು
Advertisement
Advertisement
ಪೌಡರ್ ಮಾಡುವ ವಿಧಾನ:
* ಒಂದು ಫ್ರೈಯಿಂಗ್ ಪ್ಯಾನ್‍ಗೆ ದನಿಯಾ, ಜೀರಿಗೆ, ಕಡಲೆಬೇಳೆ, ಮೆಣಸು, ಕೆಂಪು ಒಣ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
* ಅದಕ್ಕೆ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.
Advertisement
ರಸಕ್ಕೆ
1. ಟೊಮೋಟೋ – 2 ರಿಂದ 3
2. ಹುಣಸೆಹಣ್ಣು – ನಿಂಬೆ ಗಾತ್ರ
3. ಅರಿಶಿನ ಪುಡಿ – ಅರ್ಧ ಚಮಚ
4. ಉಪ್ಪು – ರುಚಿಗೆ ತಕ್ಕಷ್ಟು
5. ಬೆಲ್ಲ – 1 ಚಮಚ
6. ತೊಗರಿ ಬೇಳೆ – 1 ಬಟ್ಟಲು
Advertisement
ಒಗ್ಗರಣೆಗೆ
1. ಎಣ್ಣೆ – 3 ಚಮಚ
2. ಸಾಸಿವೆ – ಅರ್ಧ ಚಮಚ
3. ಕರಿಬೇವು – ಸ್ವಲ್ಪ
4. ಇಂಗು – ಚಿಟಿಕೆ
5. ಕೆಂಪು ಮೆಣಸಿನ ಕಾಯಿ -3 ರಿಂದ 4
6. ಕೊತ್ತಂಬರಿ ಸೊಪ್ಪು
ರಸಂ ಮಾಡುವ ವಿಧಾನ:
* ಮೊದಲಿಗೆ ತೊಗರಿಬೇಳೆಯನ್ನು ಕುಕ್ಕರ್ ಗೆ ಹಾಕಿ 2-3 ಕೂಗು ಕೂಗಿಸಿಟ್ಟುಕೊಳ್ಳಿ.
* ಫ್ರೈಯಿಂಗ್ ಪ್ಯಾನಿಗೆ ಹೆಚ್ಚಿದ ಟೊಮೋಟೋ, ಹುಣಸೆ ರಸ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಲಿಡ್ ಮುಚ್ಚಿ 5 ರಿಂದ 10 ನಿಮಿಷ ಚೆನ್ನಾಗಿ ಕುದಿಸಿ.
* ಬಳಿಕ ಅದಕ್ಕೆ ಈ ಮೊದಲೇ ಬೇಯಿಸಿಟ್ಟುಕೊಂಡ ತೊಗರಿ ಬೇಳೆಯನ್ನು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ. ಚೆನ್ನಾಗಿ ಕುದಿಸಿ.
* ಈಗ ರಸಂಗೆ ಬೇಕಾದಷ್ಟು ನೀರು ಸೇರಿಸಿ, ಹುರಿದು ಪುಡಿ ಮಾಡಿದ ಪೌಡರ್ ಅನ್ನು 2 ರಿಂದ 3 ಚಮಚ ಸೇರಿಸಿ ಕುದಿಸಿ.
* ರಸ ಚೆನ್ನಾಗಿ ಕುದಿ ಬಂದು ಸುವಾಸನೆ ಬರುತ್ತದೆ.
* ಅದಕ್ಕೀಗ ಒಗ್ಗರಣೆ ಸೇರಿಸಿ. ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಸ್ಟೌವ್ ಆರಿಸಿದರೆ 10 ನಿಮಿಷದಲ್ಲಿ ರಸಂ ರೆಡಿ.
* ಬಿಸಿ ಅನ್ನದೊಂದಿಗೆ ರಸಂ ಜೊತೆ ತುಪ್ಪ ಸೇರಿಸಿ ಊಟ ಮಾಡಿದರೆ ಅದರ ಮಜಾವೇ ಬೇರೆ.
ಒಗ್ಗರಣೆ:
* ಒಂದು ಒಗ್ಗರಣೆ ಬೌಲಿಗೆ ಎಣ್ಣೆ ಹಾಕಿ.
* ಕಾದ ಮೇಲೆ ಸಾಸಿವೆ, ಕರಿಬೇವು, ಇಂಗು, ಕೆಂಪು ಮೆಣಸಿನ ಕಾಯಿ ಹಾಕಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv