ಮೈಸೂರು: ನನ್ನ ಶತ್ರುಗಳಿಕೆ ದೇವರು ಒಳ್ಳೆಯದು ಮಾಡಲಿ. ಆದರ ಜೊತೆಗೆ ಆಪ್ತರಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೂ ಒಳ್ಳೆಯದು ಮಾಡಲಿ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಚಾಮುಂಡಿ ದೇವಿ ದರ್ಶನ ಪಡೆದು ನಂತರ ಮಾತನಾಡಿದ ಅವರು, ನನಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಯಾವ ಭಯವೂ ಇಲ್ಲ. ನನ್ನೂರಿನಲ್ಲಿ ಇದ್ದಿದ್ದರೆ ಕೋಲಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದೆ. ಇವತ್ತು ಮೈಸೂರಿನಲ್ಲಿದ್ದೀನಿ ಹಾಗಾಗಿ ಚಾಮುಂಡಿ ದೇವಿ ದರ್ಶನ ಪಡೆದಿದ್ದೇನೆ ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಡಿಕೆಶಿ ಅವರು ಕೂಡ ಇವತ್ತೇ ಚಾಮುಂಡಿ ದರ್ಶನ ಪಡೆಯುತ್ತಿರುವ ವಿಚಾರದ ಬಗ್ಗೆ ಕೇಳಿದಾಗ ನೋ ಕಾಮೆಂಟ್ಸ್ ಎಂದ ಅವರು, ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರವಾಗಿ ಬರುತ್ತೆ ಎಂಬ ವಿಶ್ವಾಸವಿದೆ. ತೀರ್ಪು ಏನಾಗುತ್ತೆ ಅದು ಆಗಲಿ ಬಿಡಲಿ. ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕರೆ ಸಾಕು, ನೋಡೋಣಾ ಏನಾಗುತ್ತೆ ಎಂದರು.
Advertisement
ರಮೇಶ್ ಜಾರಕಿಹೊಳಿ ಜೊತೆ ಮೊತ್ತೋರ್ವ ಅನರ್ಹ ಶಾಸಕ ಮಹೇಶ್ ಕಮಟ್ಟಳಿ ಕೂಡ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದು, ದೇವರ ದರ್ಶನಕ್ಕೂ ಸುಪ್ರೀಂ ಕೋರ್ಟ್ ತೀರ್ಪಿಗೂ ಸಂಬಂಧ ಇಲ್ಲ. ನಮಗೆ ಒಳ್ಳೆಯದಾಗುತ್ತೆ ಅಂದುಕೊಂಡಿದ್ದೇನೆ. ರಾಜಕೀಯ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು.