ನಾಡಿನಾದ್ಯಂತ ದಸರಾ ಹಬ್ಬದ ವಾತಾವರಣ ಕಳೆಗಟ್ಟುತ್ತಿದೆ. ಈಗಾಗಲೇ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದಸರಾ ಅಂದರೆ ನವರಾತ್ರಿ, ಒಂಬತ್ತು ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಸಿಹಿ ಮಾಡಬೇಕಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕಾಗಿ ಮೈಸೂರು ಪಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
1. ಕಡಲೆ ಹಿಟ್ಟು – ಅರ್ಧ ಕೆಜಿ
2. ತುಪ್ಪ – 1 ಬಟ್ಟಲು
3. ಎಣ್ಣೆ – 1 ಬಟ್ಟಲು
4. ಸಕ್ಕರೆ – ಮುಕ್ಕಾಲು ಕೆಜಿ
5. ನೀರು – 1 ಲೋಟ
ಮಾಡುವ ವಿಧಾನ
* ಒಂದು ಪ್ಯಾನ್‍ಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಕುದಿಸಿಡಿ.
* ಈಗ ಒಂದು ಪ್ಯಾನ್‍ಗೆ ಸಕ್ಕರೆ, 1 ಲೋಟ ನೀರು ಹಾಕಿ ಕುದಿಸಿ.
* ಒಂದು ಎಳೆ ಪಾಕ ಬಂದ ಮೇಲೆ ಅದಕ್ಕೆ(ಪಾಕ) ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟನ್ನು ಹಾಕಿಕೊಳ್ಳುತ್ತಾ ಸೌಟಿನಿಂದ ತಿರುಗಿಸುತ್ತಿರಿ.
* ಕಡಲೆಹಿಟ್ಟು ಗಂಟುಗಳಿಲ್ಲದಂತೆ ಸಂಪೂರ್ಣವಾಗಿ ಸಕ್ಕರೆ ಪಾಕದೊಂದಿಗೆ ಮಿಕ್ಸ್ ಮಾಡಿ.
* ಈಗ ಸ್ವಲ್ಪ ಸ್ವಲ್ಪವೇ ತುಪ್ಪ ಮತ್ತು ಎಣ್ಣೆ ಮಿಕ್ಸ್ ಅನ್ನು ಸೇರಿಸಿ ಕೈಯಾಡಿಸುತ್ತಿರಿ.
* ಕಡಲೆಹಿಟ್ಟು ಈಗ ತುಪ್ಪ ಮತ್ತು ಎಣ್ಣೆಯನ್ನು ಹೀರಿಕೊಂಡು ಗಟ್ಟಿಯಾಗುತ್ತಾ ಬರುತ್ತದೆ.
* ನಂತರ ತುಪ್ಪ ಸವರಿದ ಟ್ರೇಗೆ ಬಿಸಿ ಇರುವಾಗಲೇ ಕಡಲೆಹಿಟ್ಟು ಗಟ್ಟಿಯನ್ನು ಹಾಕಿ ಬೇಕಾದ ಶೇಪ್‍ಗೆ ಕತ್ತರಿಸಿ.
* ಬಿಸಿ ಆರಿದ ಮೇಲೆ ಸ್ಲೈಸ್ ಗಳನ್ನು ಟ್ರೇನಿಂದ ಸಪರೇಟ್ ಮಾಡಿ ಸವಿಯಿರಿ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ದಸರಾ ಸುದ್ದಿಗಳು: