ಮೈಸೂರು: ಸಿಎಂ ಸಿದ್ದರಾಮಯ್ಯ (CM Siddarmaiah) ಅವರ ಹೆಸರನ್ನು ರಸ್ತೆಗೆ ಇಡಲು ಮುಂದಾದ ಮಹಾನಗರ ಪಾಲಿಕೆ (Mysore City Corporation) ಚಿಂತನೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಕೆಆರ್‌ಎಸ್ ರಸ್ತೆಗೆ (KRS Road) ಸಿಎಂ ಸಿದ್ದರಾಮಯ್ಯ ಹೆಸರು ಇಡಲು ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದ್ದು ಅದಕ್ಕಾಗಿ ಪತ್ರಿಕಾ ಜಾಹಿರಾತು ನೀಡಿದೆ. ಕೆಆರ್‌ಎಸ್ ರಸ್ತೆಯಲ್ಲಿ ಅತಿ ಹೆಚ್ಚಿನ ಆಸ್ಪತ್ರೆಗಳಿವೆ. ಹೀಗಾಗಿ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರು ಇಡಲು ಮುಂದಾಗಿದೆ.
Advertisement
Advertisement
ಪಾಲಿಕೆಯ ಈ ನಿಲುವಿಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ (Snehamayi Krishna) ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ನಾನು ಮಾಡಿರುವ ಆರೋಪದಲ್ಲಿ ಸಿದ್ದರಾಮಯ್ಯ ಎ1 ಆರೋಪಿ ಆಗಿದ್ದಾರೆ. ಅಂತಹ ಆರೋಪಿ ಹೆಸರನ್ನು ಮೈಸೂರಿನ ಪ್ರಮುಖ ರಸ್ತೆಗೆ ಇಡಲು ಹೊರಟಿರೋದು ವಿಷಾದನೀಯ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹೊಸ ಧಾರ್ಮಿಕ ವಿವಾದ ಕೆದಕಬೇಡಿ ಎಂದಿದ್ದಕ್ಕೆ ಸಿಟ್ಟು – ಭಾಗವತ್ ವಿರುದ್ಧ ಸ್ವಾಮೀಜಿಗಳ ಆಕ್ರೋಶ
Advertisement
ಮೈಸೂರು ಅರಸರು ಕೊಟ್ಟಿರುವ ಕೊಡುಗೆ ಮನಗಾಣಬೇಕು. ಆ ರಸ್ತೆಯಲ್ಲಿ ಕೆಂಪಜಮಣಿ ಕ್ಷಯರೋಗ ಆಸ್ಪತ್ರೆ ಕೂಡ ಇದೆ. ಮೊದಲಿಂದ ಅದನ್ನು ಪಿ.ಕೆ.ಟಿ.ಬಿ ರಸ್ತೆ ಅಂತಲೇ ಕರೆಯುತ್ತಾರೆ. ಅಂತಹ ಐತಿಹಾಸಿಕ ರಸ್ತೆಗೆ ಗುರುತರ ಆರೋಪ ಹೊತ್ತಿರುವ ವ್ಯಕ್ತಿ ಹೆಸರಿಡುತ್ತಿರುವುದು ಸರಿಯಲ್ಲ. ಇದರ ಬಗ್ಗೆ ನಾನು ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
Advertisement