ಮೈಸೂರು: ಅಂಬೇಡ್ಕರ್ ಪ್ರತಿಮೆ ವಶ ಹಿನ್ನೆಲೆಯಲ್ಲಿ ಪಡುವಾರಹಳ್ಳಿ ನಿವಾಸಿಗಳು ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಮೈಸೂರಿನ ಮಾತೃ ಮಂಡಳಿ ವೃತ್ತದ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾತೃ ಮಂಡಳಿ ವೃತ್ತ ಬಂದ್ ಮಾಡಿದ್ದು, ಇದರಿಂದಾಗಿ ಕೆಲ ಸಮಯ ವಾಹನ ಸವಾರರಿಗೆ ತೊಂದರೆ ಉಂಟಾಯಿತು.
ಶಾಸಕ ಎಲ್.ನಾಗೇಂದ್ರ, ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಡಿಸಿಪಿ ಪ್ರದೀಪ್ ಗುಂಟಿ ಸ್ಥಳಕ್ಕಾಗಮಿಸಿ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ಸುತ್ತುವರೆದಿದ್ದಾರೆ. ಇದನ್ನೂ ಓದಿ: ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್