ಬೆಂಗಳೂರಿನ ಬೆಡಗಿ ನಿತ್ಯಾ ಮೆನನ್ (Nithya Menen) ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಆಗಾಗ ವೈಯಕ್ತಿಕ ವಿಚಾರವಾಗಿ ‘ಮೈನಾ’ ನಟಿ ಸುದ್ದಿಯಾಗುತ್ತಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ, ನಟಿ ತಮ್ಮ ಮದುವೆ (Wedding) ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಮದುವೆ ಬಗ್ಗೆ ತಮ್ಮ ಆಲೋಚನೆ ಏನು ಎಂಬುದನ್ನ ನಟಿ ಮಾತನಾಡಿದ್ದು, ನಾನು ಎಲ್ಲವನ್ನೂ ಮೀರಿ ಬೆಳೆದಿದ್ದೆ ನಾನು ಏನು ಮಾಡಬೇಕು ಎಂಬುದನ್ನು ಮತ್ತೊಬ್ಬರು ಹೇಳಬೇಕು ಬಯಸೋದಿಲ್ಲ. ಪಾಲಕರು ಈ ವಿಚಾರದಲ್ಲಿ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ನನಗೆ ಅವರು ಸ್ವಾತಂತ್ರ‍್ಯ ನೀಡಿದ್ದಾರೆ. ಸ್ವಾತಂತ್ರ‍್ಯ ಇಲ್ಲದೆ ನನಗೆ ಬದುಕೋಕೆ ಆಗಲ್ಲ. ಅದು ಅವರಿಗೆ ಗೊತ್ತು ಎಂದಿದ್ದಾರೆ ನಿತ್ಯಾ. ಇದನ್ನೂ ಓದಿ:ನಿಮ್ಮ ಚಿನ್ನದ ಮೊಬೈಲ್ ನನಗೆ ಸಿಕ್ಕಿದೆ, ನನ್ನ ಬೇಡಿಕೆ ಈಡೇರಿಸ್ತೀರಾ? ನಟಿಗೆ ಬಂತು ಇ-ಮೇಲ್
ನನ್ನ ಅಜ್ಜಿ ಬದುಕಿದ್ದಾಗ ಅವರ ಕಡೆಯಿಂದ ಮದುವೆಯಾಗಬೇಕೆಂಬ ಒತ್ತಡವಿತ್ತು. ನಾನು ನಟಿ ಎಂಬ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ನೀನು ಜೀವನದಲ್ಲಿ ಏನನ್ನೂ ಮಾಡುತ್ತಿಲ್ಲ. ನೀನು ಯಾಕೆ ಮದುವೆಯಾಗಬಾರದು ಎಂದು ಅಜ್ಜಿ ನನಗೆ ಕೇಳುತ್ತಲೇ ಇದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಬಿಟ್ಟು ಈ ವಿಚಾರದಲ್ಲಿ ಇನ್ಯಾರೂ ನಮ್ಮ ಮನೆಯಲ್ಲಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ.
30 ವರ್ಷ ದಾಟಿದಾಗ ಮದುವೆ ಬಗ್ಗೆ ಒತ್ತಡ ಬರುತ್ತದೆ. ಈ ಸಂದರ್ಭದಲ್ಲಿ ಹಲವು ಬಾಕ್ಸ್‌ಗಳನ್ನ ಟಿಕ್ ಮಾಡಬೇಕು. ಸಮಾಜ ಅಂದುಕೊಂಡ ವಿಚಾರವನ್ನು ಪಾಲಿಸಿದರೆ ಒಳ್ಳೆಯವರು ಎನಿಸಿಕೊಳ್ಳುತ್ತೀರಿ. ಇಲ್ಲವಾದರೆ ನಿಮಗೆ ಕೆಟ್ಟವರು ಎನ್ನುವ ಪಟ್ಟ ಸಿಗುತ್ತದೆ ಎಂದು ನಿತ್ಯಾ ಮುಕ್ತವಾಗಿ ಮಾತನಾಡಿದ್ದಾರೆ.
ನಿತ್ಯಾ ಮೆನನ್ ಅವರು ನಟ ಚೇತನ್ ಜೊತೆ ಮೈನಾ(Mynaa), ಸುದೀಪ್ (Sudeep) ಜೊತೆ ಕೋಟಿಗೊಬ್ಬ 2, ‘ಐದು ಒಂದ್ಲಾ ಐದು’ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.