ಕಾಸ್ಟಿಂಗ್ ಕೌಚ್ (Casting Couch) ಎಂಬುದು ಚಿತ್ರರಂಗದಲ್ಲಿರುವ ಕೆಟ್ಟ ಪಿಡುಗು. ಅವಕಾಶಕ್ಕಾಗಿ ಪಲ್ಲಂಗ ಏರುವ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಸಿಡಿದೆದಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ನಟಿ ನಿತ್ಯಾ ಮೆನನ್ (Nithya Menon) ಮಾತನಾಡಿದ್ದಾರೆ. ಕರಾಳ ಅನುಭವದ ಬಗ್ಗೆ ಬಿಚ್ಚಿದ್ದಾರೆ.
ಕೋಟಿಗೊಬ್ಬ 2 (Kotigobba 2), ಮೈನಾ (Mynaa) ಕನ್ನಡದ ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್ ಗಮನ ಸೆಳೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ಬ್ಯೂಟಿ ನಿತ್ಯಾ ಮೆನನ್ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿ, ಎಲ್ಲಾ ಭಾಷೆಯಲ್ಲಿ ನಟಿಸಿದ್ದೀನಿ, ಆದರೆ ಟಾಲಿವುಡ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ತೆಲುಗು ಚಿತ್ರರಂಗದಲ್ಲಿ ತನಗೆ ಯಾರೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ತಮಿಳು ಸಿನಿಮಾರಂಗದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಇದನ್ನೂ ಓದಿ:ಅಪ್ಪಂದಿರ ದಿನಾಚರಣೆಗೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್
ಕಾಲಿವುಡ್‌ನ (Kollywood) ನಾಯಕನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಶೂಟಿಂಗ್ ಸಮಯದಲ್ಲಿ ಅವರು ತನ್ನನ್ನು ಸ್ಪರ್ಶಿಸುವ ಮೂಲಕ ತುಂಬಾ ಹಿಂಸೆ ನೀಡಿದ್ದರು ಎಂದು ನಿತ್ಯಾ ಹೇಳಿದರು. ಆದರೆ ಆ ನಾಯಕ ಯಾರು ಎನ್ನುವ ಬಗ್ಗೆ ನಿತ್ಯಾ ಬಹಿರಂಗಪಡಿಸಿಲ್ಲ. ನಾಯಕನ ಹುಚ್ಚು ವರ್ತನೆಯಿಂದ ಸರಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ ಎಂದು ನಿತ್ಯಾ ಮೆನನ್ ಹೇಳಿದ್ದಾರೆ. ಮಹಿಳೆಯರಿಗೆ ಆ ರೀತಿ ತೊಂದರೆ ಕೊಟ್ಟರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಹಾಗಾಗಿಯೇ ಈಗ ಎಷ್ಟೋ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಹೆದರುತ್ತಿದ್ದಾರೆ ಎಂದು ನಿತ್ಯಾ ಹೇಳಿದ್ದಾರೆ.
ಇದೀಗ ನಿತ್ಯಾ ಮೆನನ್ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಆದರೆ ನಿತ್ಯಾ ಮೆನನ್‌ಗೆ ಇಷ್ಟೊಂದು ಕಿರುಕುಳ ನೀಡಿದ ತಮಿಳಿನ ಹೀರೋ ಯಾರು ಎಂಬ ಬಗ್ಗೆ ಜನರಲ್ಲಿ ಭಾರೀ ಕುತೂಹಲ ಹೆಚ್ಚಾಗಿದೆ. ಯಾರೆಂದು ತಲೆಕೆಡಿಸಿಕೊಂಡಿದ್ದಾರೆ. ತಮಿಳಿನ ಅನೇಕ ಸಿನಿಮಾಗಳಲ್ಲಿ ನಿತ್ಯಾ ನಟಿಸಿದ್ದಾರೆ. ಹಾಗಾಗಿ ಯಾರೆಂದು ಗುರುತಿಸುವುದು ಕಷ್ಟವಾಗಿದೆ.