ನೇಪಿಟಾವ್/ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ (Myanmar Earthquake) 900 ಕಿಲೋ ಮೀಟರ್ ದೂರದ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಂಕ್ ಮೇಲೂ ದೊಡ್ಡ ಪರಿಣಾಮ ಬೀರಿದೆ. 1930ರ ನಂತರ ಥಾಯ್ಲೆಂಡ್‌ನಲ್ಲಿ ಎದುರಿಸಿದ ಅತ್ಯಂತ ಶಕ್ತಿಶಾಲಿ ಕಂಪನ ಇದಾಗಿದ್ದು, ಗಗನಚುಂಬಿ ಕಟ್ಟಡಗಳ ಧರಾಶಾಹಿಯಾಗಿವೆ. ನಿಂತ ಸ್ಥಳದಲ್ಲಿ ಮೆಟ್ರೋ ರೈಲ್ವೆ (Metro Train) ನಲುಗಿ ಹೋಗಿವೆ, ರಸ್ತೆಗಳು ಬಾಯಿತೆರದು ನಿಂತಿದೆ. ಘಟನೆಯಲ್ಲಿ ಈವರೆಗೆ 144 ಮಂದಿ ಸಾವನ್ನಪ್ಪಿದ್ದಾರೆ.
ಈ ನಡುವೆ ಸಂತ್ರಸ್ತವಾಗಿರುವ ಮ್ಯಾನ್ಮಾರ್‌ಗೆ ಭಾರತ ನೆರವಿನ ಹಸ್ತ ಚಾಚಿದೆ. ತಾತ್ಕಾಲಿಕ ಟೆಂಟ್‌ಗಳು, ಮಲಗುವ ಹಾಸಿಗೆ, ಹೊದಿಕೆಗಳು, ಆಹಾರ, ನೀರು, ನೈರ್ಮಲ್ಯ ಕಿಟ್, ಸೋಲಾರ್ ಲೈಟ್, ಜನರೇಟರ್ ಸೆಟ್ ಹಾಗೂ ಔಷಧಗಳ ನೆರವನ್ನು ಭಾರತ ನೀಡಿದೆ. ಈಗಾಗಲೇ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯುಸೇನೆಯ C-130-J ವಿಮಾನ ವಿಮಾನದಲ್ಲಿ ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ಮೊದಲು ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದ್ದೆ – ಥೈಲ್ಯಾಂಡ್ ಭೂಕಂಪದ ಭಯಾನಕ ಚಿತ್ರಣ ಬಿಚ್ಚಿಟ್ಟ ಕನ್ನಡಿಗ
ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಪ್ರಬಲ ಭೂಕಂಪನದ ಬೆನ್ನಲೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಹಸ್ತ ಚಾಚುವ ಭರವಸೆ ನೀಡಿದ್ದರು. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:Photo Gallary: ಮ್ಯಾನ್ಮಾರ್, ಥೈಲ್ಯಾಂಡ್‌ನಲ್ಲಿ ಡೆಡ್ಲಿ ಭೂಕಂಪ – ಭೀಕರ ದೃಶ್ಯಗಳನ್ನು ಫೋಟೊಗಳಲ್ಲಿ ನೋಡಿ..
ನಲುಗಿ ಹೋದ ಮೆಟ್ರೋಗಳು
ಥಾಯ್ಲೆಂಡ್ ಮತ್ತು ಮಯನ್ಮಾರ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಥಾಯ್ಲೆಂಡ್ ರಾಜಧಾನಿ ಬ್ಯಾಕಾಂಕ್ ಅನ್ನು ನಲುಗಿಸಿದೆ. ಬ್ಯಾಕಾಂಕ್‌ನಲ್ಲಿ ಸಂಭವಿಸಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 7.3 ರಿಂದ 7.7 ರವರೆಗೆ ತೀವ್ರತೆಯಲ್ಲಿ ದಾಖಲಾಗಿದೆ. ಥಾಯ್ಲೆಂಡ್‌ನ ಖನಿಜ ಸಂಪನ್ಮೂಲ ಇಲಾಖೆಯ ಪ್ರಕಾರ, ಈ ಭೂಕಂಪವು 1930ರ ನಂತರ ಥಾಯ್ಲೆಂಡ್‌ನಲ್ಲಿ ಅನುಭವಿಸಿದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: Myanmar Earthquake: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ 60 ಸಾವು, 250 ಮಂದಿಗೆ ಗಾಯ
ಘಟನೆಯಲ್ಲಿ ಈವರೆಗೆ 144 ಮಂದಿ ಸಾವನ್ನಪ್ಪಿದ್ದು ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಥಾಯ್ಲೆಂಡ್‌ನ ಪ್ರಧಾನಿ ಪೇಟೊಂಗ್‌ತಾರ್ನ್ ಶಿನವತ್ರಾ ಅವರು ಭೂಕಂಪದ ನಂತರ ಬ್ಯಾಂಕಾಕ್‌ನ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 144ಕ್ಕೇರಿದ ಸಾವಿನ ಸಂಖ್ಯೆ; ತುರ್ತು ಪರಿಸ್ಥಿತಿ ಘೋಷಣೆ