ನೈಪಿಡಾವ್: ಮ್ಯಾನ್ಮಾರ್‌ನ (Myanmar) ಶಾಲೆಯೊಂದರ ಮೇಲೆ ಸೇನಾ ಹೆಲಿಕಾಪ್ಟರ್‌ಗಳು (Army Helicopters) ಗುಂಡಿನ ದಾಳಿ ನಡೆಸಿದ ಪರಿಣಾಮ ಏಳು ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಸೆಂಟ್ರಲ್ ಸಾಗಯಿಂಗ್ ಪ್ರದೇಶದ (Central Sagaing Region( ಲೆಟ್ ಯೆಟ್ ಕೋನ್ (Let Yet Kone) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಬೌದ್ಧ ವಿಹಾರದಲ್ಲಿದ್ದ (Buddhist Monastery) ಶಾಲೆಯ ಮೇಲೆ ಸೇನಾ ಹೆಲಿಕಾಪ್ಟರ್‌ಗಳು ಗುಂಡಿನ ದಾಳಿ ನಡೆಸಿವೆ. ಈ ವೇಳೆ ಘಟನೆಯಲ್ಲಿ ಕೆಲವು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇತರರು ಸೇನಾ ಪಡೆಗಳು ಗ್ರಾಮಕ್ಕೆ ಪ್ರವೇಶಿಸಿದ ನಂತರ ಸಾವನ್ನಪ್ಪಿದ್ದಾರೆ. ನಂತರ ಶವಗಳನ್ನು ಮಿಲಿಟರಿಯಿಂದ 11 ಕಿಲೋಮೀಟರ್ ದೂರದಲ್ಲಿರುವ ಟೌನ್‍ಶಿಪ್‍ಗೆ ಸಾಗಿಸಿ ಸಮಾಧಿ ಮಾಡಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ
Advertisement
Advertisement
2020ರ ಫೆಬ್ರವರಿ 1 ರಂದು ನಡೆದ ದಂಗೆಯ ನಂತರ ಮ್ಯಾನ್ಮಾರ್ ಮಿಲಿಟರಿ ಜುಂಟಾ, ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಮಿಲಿಟರಿ ಆಡಳಿತವನ್ನು ವಿರೋಧಿಸುವವರನ್ನು ಹತ್ತಿಕ್ಕಲು ಮ್ಯಾನ್ಮಾರ್ ಜುಂಟಾ ರಾಷ್ಟ್ರವ್ಯಾಪಿ (Junta’s Systematic) ದಮನ ಕಾರ್ಯಾಚರಣೆ ನಡೆಸುತ್ತಿದೆ. ಸಾಮೂಹಿಕ ಹತ್ಯೆಗಳು, ಚಿತ್ರಹಿಂಸೆ, ಅನಿಯಂತ್ರಿತ ಬಂಧನ ಮತ್ತು ನಾಗರಿಕರ ಮೇಲೆ ವಿವೇಚನಾರಹಿತ ದಾಳಿಗಳು ಸೇರಿದಂತೆ ಜುಂಟಾದ ವ್ಯವಸ್ಥಿತ ಮತ್ತು ವ್ಯಾಪಕ ದಾಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳು. ಇದು ಯುದ್ಧಾಪರಾಧಗಳಿಗೆ ಸಮನಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಆರೋಪಿಸಿದೆ.
Advertisement
Advertisement
ಫೆಬ್ರವರಿಯಲ್ಲಿ ನಡೆದ ದಂಗೆಯ ನಂತರ ಭದ್ರತಾ ಪಡೆಗಳು ಇಲ್ಲಿಯವರೆಗೂ ಸುಮಾರು 1,600 ಜನರನ್ನು ಕೊಂದಿವೆ. 12,000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿವೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಸಿಡಿಲಿಗೆ 11 ಮಂದಿ ಬಲಿ – ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಣೆ