ಕೆಕೆ ಹಾಡುಗಳನ್ನು ಮೆಚ್ಚಿಕೊಂಡವರಲ್ಲಿ ಖ್ಯಾತ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಶ್ರೇಯಾ ಘೋಷಾಲ್ ಕೂಡ ಒಬ್ಬರು. ಕೆಕೆ ಜೊತೆ ಅದೆಷ್ಟೋ ವೇದಿಕೆಗಳನ್ನು ಶ್ರೇಯಾ ಹಂಚಿಕೊಂಡಿದ್ದಾರೆ. ಜೊತೆಯಾಗಿ ಯುಗಳಗೀತೆ ಹಾಡಿದ್ದಾರೆ. ವೇದಿಕೆಯ ಮೇಲೆ ಹಾಡುತ್ತಾ ಕುಣಿದಿದ್ದಾರೆ. ಹೀಗಾಗಿ ಕೆಕೆ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಆಘಾತಕ್ಕೆ ಒಳಗಾಗಿದ್ದಾರೆ ಶ್ರೇಯಾ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?
ನೆಚ್ಚಿನ ಗಾಯಕನ ಸಾವಿಗೆ ಕಂಬನಿ ಮಿಡಿದಿರುವ ಶ್ರೇಯಾ ಘೋಷಾಲ್, ಭಾವುಕರಾಗಿ ಟ್ವಿಟ್ ಮಾಡಿದ್ದು ‘ಕೆಕೆ ನಿಧನದ ಸುದ್ದಿಯನ್ನು ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾಕೆ ಕೆಕೆ? ನನ್ನ ಹೃದಯ ಛಿದ್ರವಾಗಿದೆ. ನಿನ್ನ ಸಾವನ್ನು ಸ್ವೀಕರಿಸಲು ಆಗುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್
ಶ್ರೇಯಾ ಘೋಷಾ ಜೊತೆಗೆ ವಿಜಯ ಪ್ರಕಾಶ್, ವಿಶಾಲ್, ಸೇರಿದಂತೆ ಹಲವು ಗಾಯಕರು ಕೆಕೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇಂತಹ ಗಾಯಕನ ಸಾವು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡ ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ `ಮಹಾನಟಿ’ ಕೀರ್ತಿ ಸುರೇಶ್
ಕೆಕೆ ಎಂದು ಖ್ಯಾತರಾಗಿರುವ ಕೃಷ್ಣಕುಮಾರ್ ಕುನ್ನತ್ ಮಂಗಳವಾರ ಕೊಲ್ಕತ್ತಾದ ನಜ್ರುಲಾ ಮಂಚ್ ಆಡಿಟೋರಿಯಂನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿದ್ದ ವೇಳೆ ಕುಸಿದು ಬಿದ್ದ ಕೆಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಅಷ್ಟರಲ್ಲಿ ಕೆಕೆ ಪ್ರಾಣಪಕ್ಷಿ ಹಾರಿ ಹೋಗಿದೆ.