– ರಾಜ್ಯಪಾಲರಿಗೆ ದೂರು ಕೊಟ್ಟವರಲ್ಲಿ ಒಬ್ಬ ಬ್ಲ್ಯಾಕ್‌ಮೇಲರ್, ಮತ್ತೊಬ್ಬ ರೌಡಿಶೀಟರ್, ಇನ್ನೊಬ್ಬ ಜೆಡಿಎಸ್ ಮುಖಂಡ
ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಮುಂದೆ ಕಾನೂನಿನ ಸಂಕಷ್ಟ ಎದುರಾಗಿದೆ. ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಂಕಷ್ಟ ಎದುರಿಸುತ್ತಿದ್ದು ಸಹಜವಾಗಿಯೇ ಅವರ ಇಡೀ ಕುಟುಂಬಕ್ಕೆ ಮಾನಸಿಕವಾಗಿ ಆಘಾತವಾಗಿದೆ. ಇದೇ ಮೊದಲ ಬಾರಿಗೆ ಅದನ್ನು ಪುತ್ರ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಬಹಿರಂಗವಾಗಿ ವ್ಯಕ್ತಪಡಿಸಿದರು.
Advertisement
ತಮ್ಮ ತಂದೆ ಮೇಲಿನ ಆರೋಪಗಳ ಬಗ್ಗೆ ಮಾತಾಡುವಾಗ ಯತೀಂದ್ರ ಕಣ್ತುಂಬಿಕೊಂಡಿದ್ದಾರೆ. ನನಗೂ ನನ್ನ ತಾಯಿ ಇಬ್ಬರಿಗೂ ಈ ವಿಚಾರದಲ್ಲಿ ಅತೀವ ಬೇಸರವಾಗಿದೆ. ನನ್ನ ತಂದೆ ಏನೂ ತಪ್ಪು ಮಾಡಿಲ್ಲ. ಆದರೂ ಇಂತಹ ಸುಳ್ಳು ಸೃಷ್ಟಿಸಿದ್ದ ಕಾರಣ ಮಾನಸಿಕವಾಗಿ ನೊಂದಿದ್ದೇನೆ ಎಂದು ಹೇಳಿದ್ದಾರೆ. 2014 ರ ನಂತರ ಈ ರೀತಿಯ ಅನೀತಿ ರಾಜಕಾರಣ ಶುರುವಾಯ್ತು. ಅದರ ಭಾಗವೇ ಈ ಆರೋಪ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದಕ್ಕೆ ಖುಷಿ ಪಡೋರು ಕಾಂಗ್ರೆಸ್ ನಾಯಕರೇ: ಶೆಟ್ಟರ್
Advertisement
Advertisement
ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಡುತ್ತಾರೆ ಅಂತಾ ನಿರೀಕ್ಷೆ ಇತ್ತು. ರಾಜ್ಯಪಾಲರಿಗೆ ದೂರು ಕೊಟ್ಟವರಲ್ಲಿ ಒಬ್ಬ ಬ್ಲ್ಯಾಕ್‌ಮೇಲರ್, ಒಬ್ಬ ರೌಡಿಶೀಟರ್, ಮತ್ತೊಬ್ಬ ಜೆಡಿಎಸ್ ಮುಖಂಡ. ಮೋದಿ, ಅಮಿತ್ ಶಾ ಟೀಕೆ ಮಾಡಿದ್ದಕ್ಕೆ ಈ ರೀತಿ ಕೇಸ್ ಹಾಕಿಸಿದ್ದಾರೆ ಎಂದು ಯತೀಂದ್ರ ಹೇಳಿದರು.
Advertisement
ತಂದೆ ಮಾಡದ ತಪ್ಪಿಗೆ ಈ ರೀತಿ ಆರೋಪಕ್ಕೆ ಗುರಿಯಾಗಿದ್ದು, ನನಗೆ ಬಹಳ ಬೇಸರವಾಗಿದೆ ಎಂದು ಯತೀಂದ್ರ ಕಣ್ತುಂಬಿಕೊಂಡಿದ್ದಾರೆ. ನನ್ನ ತಾಯಿ ಕೂಡ ಈ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ತಪ್ಪೇ ಇಲ್ಲದೆ ನನ್ನ ತಾಯಿಯನ್ನು ರಾಜಕಾರಣದಲ್ಲಿ ಎಳೆದು ತಂದಿದ್ದು ನಮಗೆ ನೋವಾಗಿದೆ ಎಂದು ಭಾವುಕರಾದರು. ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್