ಬಿಗ್ ಬಾಸ್ (Bigboss) ಖ್ಯಾತಿಯ ಪ್ರಥಮ್ (Olle Hudga Pratham) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸದ್ದಿಲ್ಲದೆ ನಟಭಯಂಕರ ಪ್ರಥಮ್ ಎಂಗೇಜ್ಮೆಂಟ್ (Engagement) ಮಾಡಿಕೊಂಡಿದ್ದಾರೆ. ಈ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರಥಮ್ ಅಂದರೆ ಫಸ್ಟ್ ನೆನಪಾಗೋದೇ ಅವರ ನಾನ್ ಸ್ಟಾಪ್ ಮಾತು. ದೊಡ್ಮನೆಯಲ್ಲಿ ತಮ್ಮ ಮಾತು, ನೇರ ನುಡಿಯಿಂದಲೇ ಫೇಮಸ್ ಆಗಿದ್ರು. ಭುವನ್, ಸಂಜನಾ, ರೇಖಾ, ಇದ್ದ ಸೀಸನ್‍ನಲ್ಲಿ ಪ್ರಥಮ್ ಖಡಕ್ ಆಗಿ ಆಡಿದ್ದರು. ಬಿಗ್ ಬಾಸ್ ಸೀಸನ್‍ನ ವಿನ್ನರ್ ಆಗಿ ಗೆಲುವು ಸಾಧಿಸಿದ್ರು. ಈಗ ತಮ್ಮ ಬ್ಯಾಚುಲರ್ ಲೈಫ್ ಗೆ ಪ್ರಥಮ್ ಗುಡ್ ಬೈ ಹೇಳ್ತಿದ್ದಾರೆ. ಇದನ್ನೂ ಓದಿ: ಕನ್ನಡದ ನಟಿ ವಿದಿಶಾ ಶ್ರೀವಾಸ್ತವ ಪ್ರೆಗ್ನೆನ್ಸಿ ಫೋಟೋಶೂಟ್
ಹೌದು.. ಪ್ರಥಮ್ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಸದ್ಯ ಸೈಲೆಂಟ್ ಆಗಿ ಒಳ್ಳೆಯ ಹುಡುಗ ಪ್ರಥಮ್ ಎಂಗೇಜ್ ಆಗಿದ್ದಾರೆ. ತನ್ನ ಕುಟುಂಬದವರು ಸಮ್ಮತಿಸಿದ ಹುಡುಗಿ ಜೊತೆ ಅರೆಂಜ್ ಮ್ಯಾರೇಜ್ ಆಗಲು ನಟ ರೆಡಿಯಾಗಿದ್ದಾರೆ. ಇದೀಗ ನಿಶ್ಚಿತಾರ್ಥ ನೆರವೇರಿರುವ ಬಗ್ಗೆ ಭಾವಿ ಪತ್ನಿ ಜೊತೆಗಿನ ರಿಂಗ್ ತೊಟ್ಟಿರುವ ಫೋಟೋವನ್ನ ನಟ ಶೇರ್ ಮಾಡಿದ್ದಾರೆ. ಭಾವಿ ಪತ್ನಿಯ ಮುಖ ಆಗಲಿ, ಹೆಚ್ಚಿನ ವಿವರ ಆಗಲಿ ಯಾವುದನ್ನು ಪ್ರಥಮ್ ಹಂಚಿಕೊಂಡಿಲ್ಲ.
ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು,ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್ಮೆಂಟ್ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ., ಅದೇ ಆಶೀರ್ವಾದ ಎಂದು ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಬಿಗ್ ಬಾಸ್ ಪ್ರಥಮ್‍ಗೆ ಶುಭಾಶಯಗಳ ಮಹಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: 50ನೇ ವಯಸ್ಸಿಗೆ ತಂದೆಯಾದ ಖುಷಿಯಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಪ್ರಭುದೇವ ಭೇಟಿ