ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಸಂಭ್ರಮ. ರಜಾ ದಿನವಾಗಿದ್ದರಿಂದ ಕೆಲವರ ಮನೆಯಲ್ಲಿ ನಾನ್ ವೆಜ್ ಮಾಡಲೇಬೇಕಾಗುತ್ತದೆ. ಪ್ರತಿವಾರದಂತೆ ಚಿಕನ್ ಸಾಂಬಾರ್, ಕಬಾಬ್, ಬಿರಿಯಾನಿ ಮಾಡಿದರೆ ಮನೆಯವರಿಗೂ ಬೇಸರವಾಗುತ್ತದೆ. ಆದ್ದರಿಂದ ನಿಮಗಾಗಿ ರುಚಿರುಚಿಯಾಗಿ ಮಟನ್ ಕರ್ರಿ ಮಾಡುವ ಸುಲಭ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
1. ಮಟನ್ – 1 ಕೆ.ಜಿ.
2. ಬೆಳ್ಳುಳ್ಳಿ – 1
3. ಅರಿಶಿಣ – ಚಿಟಿಕೆ
4. ಲವಂಗ – 7
5. ಏಲಕ್ಕಿ- 3
6. ಕೆಂಪು ಮೆಣಸಿನ ಕಾಯಿ – 8
7. ಈರುಳ್ಳಿ – 4
8. ಕೊಬ್ಬರಿ ತುರಿ – 2 ಕಪ್
9. ಗಸಗಸೆ – 2 ಚಮಚ
10. ಕರಿ ಮೆಣಸಿನ ಕಾಳು – 8
11. ಖಾರದ ಪುಡಿ -2 ಚಮಚ
12. ಶುಂಠಿ – ಸ್ವಲ್ಪ
13. ಉಪ್ಪು ರುಚಿಗೆ ತಕ್ಕಷ್ಟು
14. ಎಣ್ಣೆ – 4-5 ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
* ತೊಳೆದ ಸಣ್ಣೆಗೆ ಕತ್ತರಿಸಿದ ಮಟನ್‍ಗೆ ರುಬ್ಬಿದ ಪದಾರ್ಥವನ್ನು ಅದರ ಮೇಲೆ ಸವರಿ ಒಂದೂವರೆ ಗಂಟೆ ಇಡಿ.
* ಕೊಬ್ಬರಿ ತುರಿಯನ್ನು ಹುರಿದುಕೊಂಡು, ಅದರ ಜೊತೆಗೆ ಕಟ್ ಮಾಡಿದ್ದ ಈರುಳ್ಳಿ(1 ಈರುಳ್ಳಿ), ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು, ಖಾರದ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಿ.
* ಈ ಒಂದು ಬೌಲ್‍ಗೆ 4-5 ಚಮಚ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಶಿಣ ಹಾಕಿ ಫ್ರೈ ಮಾಡಿ.
* ಬಳಿಕ ಅದಕ್ಕೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಟನ್ ಹಾಕಿ ಬೇಕೆನಿಸಿದರೆ ನೀರು ಹಾಕಿ ಬೇಯಿಸಬೇಕು. ಬೆಂದ ನಂತರ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿರುಚಿಯಾದ ಮಟನ್ ಕರ್ರಿ ಸವಿಯಲು ಸಿದ್ಧ.