ಇನ್ನೇನು ಒಂದೆರೆಡು ದಿನಗಳಲ್ಲಿ ರಂಜಾನ್ ಹಬ್ಬ ಬಂದೇ ಬಿಡ್ತು. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ಸ್ಪೆಷಲ್ ಅಂತ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸದೇ ಸಿಂಪಲ್ ಆಗಿ ಕಡಿಮೆ ವಸ್ತುಗಳನ್ನು ಬಳಸಿ ರುಚಿಯಾದ ಮಟನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
1. ಮಟನ್ – 500 ಗ್ರಾಂ
2. ಒಂದು ದೊಡ್ಡ ಈರುಳ್ಳಿ ಪೇಸ್ಟ್
3. ಶುಂಠಿ -ಬೆಳ್ಳುಳ್ಳಿ – ಪೇಸ್ಟ್ 2 ಚಮಚ
4. ಹಸಿಮೆಣಸಿನಕಾಯಿ – (ಖಾರಕ್ಕೆ ತಕ್ಕಷ್ಟು) ರುಬ್ಬಿದ ಪೇಸ್ಟ್
5. ಕೊತ್ತಂಬರಿ ಪೇಸ್ಟ್ – 3 ಚಮಚ
6. ದನಿಯಾ ಪುಡಿ – 2-3 ಚಮಚ
7. ಚಕ್ಕೆ, ಲವಂಗ, ಪಲಾವ್ ಎಲೆ, ಮರಾಠಿ ಮೊಗ್ಗು, ಅನಾನಸ್ ಹೂ, ಕಸೂರಿ ಮೇಥಿ – ಸ್ವಲ್ಪ
8. ಒಂದು ಕಾಯಿ ರುಬ್ಬಿ ತೆಗೆದ ಹಾಲು
9. ಗರಂ ಮಸಾಲ – 1 ಚಮಚ
10. ಅಕ್ಕಿ – 1.5 ಪಾವು
11. ಗಟ್ಟಿ ಮೊಸರು – 1/4 ಲೀಟರ್
12. ಅರಿಶಿಣ -ಸ್ವಲ್ಪ
13. ಎಣ್ಣೆ – 5 ಚಮಚ
14. ಉಪ್ಪು – ರುಚಿಗೆ ತಕ್ಕಷ್ಟು
15. ನಿಂಬೆಹಣ್ಣು – 1
Advertisement
Advertisement
ಮಾಡುವ ವಿಧಾನ
* ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಈರುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿ.
* ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
* ಬಳಿಕ ಹಸಿಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಪೇಸ್ಟ್ ಸೇರಿಸಿ ಫ್ರೈ ಮಾಡಿ.
* ಈಗ ಚಕ್ಕೆ, ಲವಂಗ, ಪಲಾವ್ ಎಲೆ, ಮರಾಠಿ ಮೊಗ್ಗು, ಅನಾನಸ್ ಹೂ, ಕಸೂರಿ ಮೇಥಿ ಎಲ್ಲವನ್ನು ಹಾಕಿ ಫ್ರೈ ಮಾಡಿ 2 ನಿಮಿಷ ತಟ್ಟೆ ಮುಚ್ಚಿ.
* ಈಗ ಅದಕ್ಕೆ ತೊಳೆದ ಮಟನ್ ಸೇರಿಸಿ, ಅರಿಶಿಣ, ಸ್ವಲ್ಪ ಉಪ್ಪು ಸೇರಿಸಿ ಫ್ರೈ ಮಾಡಿ. 10-15 ನಿಮಿಷ ತಟ್ಟೆ ಮುಚ್ಚಿ ಬೇಯಿಸಿ.
* ನಂತರ ತೊಳೆದು ನೆನೆಸಿದ ಅಕ್ಕಿ, ಕಾಯಿ ಹಾಲು ಸೇರಿಸಿ ಒಂದು ಕುದಿ ಕುದಿಸಿ.
* ಈಗ ಗಟ್ಟಿ ಮೊಸರು, ದನಿಯಾ ಪುಡಿ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ. (ಮಟನ್ ಬೇಯಿಸಲು ಉಪ್ಪು ಹಾಕಲಾಗಿದೆ. ನೋಡಿಕೊಂಡು ಉಪ್ಪು ಹಾಕಿ)
* ಕುಕ್ಕರ್ ನಲ್ಲಿ ಮಾಡುತ್ತಿದ್ದರೆ 2-3 ಕೂಗು ಕೂಗಿಸಿ. ಪ್ಯಾನ್‍ನಲ್ಲಿ ಮಾಡುತ್ತಿದ್ದರೆ ಲಿಡ್ ತೆಗೆದು ಕೈಯಾಡಿಸುತ್ತಿರಿ.
* ಬಳಿಕ ನಿಂಬೆಹಣ್ಣಿನ ರಸ ಹಿಂಡಿ ಒಂದು ಸಲ ತಿರುಗಿಸಿ. ಕೊತ್ತಂಬರಿ ಸೊಪ್ಪನ್ನು ಮೇಲೆ ಗಾರ್ನಿಶ್ ಮಾಡಿ ಸರ್ವ್ ಮಾಡಿ.