ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಇದೀಗ ಮಳೆಯಿಂದ ಕೋಡಿ ಬಿದ್ದ ಕೆರೆಗಳಿಗೆ ಬಾಗಿನ ಅರ್ಪಿಸೋಕೆ ಜನ ಮುಗಿ ಬಿದ್ದಿದ್ದಾರೆ. ಕೋಡಿ ಬಿದ್ದ ನೆಲ್ಲಿಗುಡ್ಡೆ ಕೆರೆಗೆ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ತಮ್ಮ ಪತ್ನಿ ಅನುರಾಧರೊಂದಿಗೆ ಬಾಗಿನ ಅರ್ಪಿಸಿದ್ದಾರೆ.
ಕಳೆದ 14 ವರ್ಷಗಳಿಂದ ತುಂಬದಿದ್ದ ನಲ್ಲಿಗುಡ್ಡ ಕೆರೆ ಈ ಬಾರಿ ರೇಷ್ಮೆನಗರಿ ರಾಮನಗರ ಜಿಲ್ಲೆಯ ಬರಗಾಲವನ್ನ ಬಡಿದೋಡಿಸುವ ನಿಟ್ಟಿನಲ್ಲಿ ಸುರಿಯುತ್ತಿರುವ ಮಳೆಯಿಂದ ಕೆರೆ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಬಿಡದಿ ಸುತ್ತಮುತ್ತ ಅಂತರ್ಜಲ ಕೂಡಾ ವೃದ್ಧಿಯಾಗಿದೆ. ಇದ್ರಿಂದ ಸಂತೋಷಗೊಂಡಿರುವ ಬಿಡದಿ ಭಾಗದ ಜನರು ನೆಲ್ಲಿಗುಡ್ಡೆ ಕೆರೆಗೆ ಬಾಗಿನ ಅರ್ಪಿಸುತ್ತಿದ್ದಾರೆ. ಹಾಗೆಯೇ ಶುಕ್ರವಾರ ಮುತ್ತಪ್ಪ ರೈ ಕೂಡ ತಮ್ಮ ಪತ್ನಿ ಅನುರಾಧ ಜೊತೆಗೂಡಿ ಕೆರೆಯ ಬಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಕೆರೆಗೆ ಬಾಗಿನ ಅರ್ಪಿಸಿದ್ರು.
Advertisement
ಬಳಿಕ ಈ ಬಾರಿಯಂತೆ ಪ್ರತಿವರ್ಷವೂ ಮಳೆ ಬರಲಿ. ನಾಡಿನಾದ್ಯಂತ ಸಮೃದ್ದಿ ನೆಲಸಲಿ ಎಂದು ಬಾಗಿನ ಅರ್ಪಿಸಿ ಮುತ್ತಪ್ಪ ರೈ ದಂಪತಿಗಳು ಪ್ರಾರ್ಥನೆ ಸಲ್ಲಿಸಿದ್ರು.