ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಲಾಗಿತ್ತು. ಈ ವೇಳೆ ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಮಠದ ಬಾಲಕ ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ್ದಾನೆ.
ನಡೆದಾಡುವ ದೇವರು ಸಿದ್ದಗಂಗಾ ಅವರು ಮಠದಲ್ಲಿ ಮಕ್ಕಳಿಗೆ ಊಟ, ಶಿಕ್ಷಣ ನೀಡಿದ್ದು ಮಾತ್ರವಲ್ಲ, ಮಕ್ಕಳಿಗೆ ಅನ್ನದ ಮಹತ್ವ ತಿಳಿಸಿದ್ದಾರೆ. ಮಂಗಳವಾರ ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಉಚಿತ ಅನ್ನದಾಸೋಹ ಸಂದರ್ಭದಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಮಠದ ವಿದ್ಯಾರ್ಥಿ, ಅನ್ನದ ಮಹತ್ವ ತಿಳಿಸಿಕೊಟ್ಟಿದ್ದಾನೆ. ಅಲ್ಲದೇ ಪ್ರಸಾದ ಚೆಲ್ಲಬೇಡಿ, ಮುಂದೆ ಅನ್ನ ಸಿಗದ ಕಾಲ ಬರುತ್ತೆ ಎಂದು ಬಾಲಕ ಹೇಳಿದ್ದಾನೆ.
Advertisement
Advertisement
ಮಠದ ವಿದ್ಯಾರ್ಥಿ: ಅಣ್ಣಾ ಅಣ್ಣಾ. ಸಾಂಬಾರ್ ಬೇಕಾ. ಸಾಂಬಾರ್ ಬೇಕಾದ್ರೆ ಅಲ್ಲಿ ಹೋಗಿ.
ಭಕ್ತ : ಸಾಂಬಾರ್ ಜಾಸ್ತಿ ಆಯ್ತು.
ಮಠದ ವಿದ್ಯಾರ್ಥಿ: ಅವರು ಸಾಂಬಾರ್ ಇಲ್ಲ ಅಂತಾರೆ. ನೀವು ಸಾಂಬಾರ್ ಜಾಸ್ತಿ ಆಯ್ತು ಅಂತೀರಾ.
ಭಕ್ತ : ಏನು ಮಾಡೋದು?
ಮಠದ ವಿದ್ಯಾರ್ಥಿ: ಯಾರು ಏನು ಮಾಡೋದಿಲ್ಲ. ವೇಸ್ಟ್ ಮಾಡಬೇಡಿ.
ಭಕ್ತ : ಆಗಿದ್ದೇನು ಮಾಡಲಿ.
ಮಠದ ವಿದ್ಯಾರ್ಥಿ: ನಮಗೆ ಗೊತ್ತಿಲ್ಲ. ಹೊಟ್ಟೆ ತುಂಬಾ ಊಟ ಮಾಡಿ. ಇನ್ನೊಂದು ತಾಲೂಕು ಜನ ಬರ್ತಾರೆ. ಅವರಿಗೆ ಪ್ರಸಾದ ಸಿಗದಂಗೆ ಆಗುತ್ತೆ.
ಭಕ್ತ: ನನ್ನ ಕೈಲಿ ಆಗಲ್ಲ. ಶಕ್ತಿ ಇಲ್ಲಪ್ಪಾ.
ಮಠದ ವಿದ್ಯಾರ್ಥಿ: ಊಟ ಮಾಡಿದರೆ ತಾನೆ ಶಕ್ತಿ ಬರೋದು. ಶಕ್ತಿ ಇಲ್ಲಂದ್ರೆ. ಹೊಟ್ಟೆ ತುಂಬಾ ಊಟ ಮಾಡಿ.
Advertisement
ಬಾಲಕ ಭಕ್ತನಿಗೆ ಅನ್ನದ ಮಹತ್ವ ತಿಳಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
https://www.youtube.com/watch?v=5uh3fpEysn8&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv