ಹಲವು ತರಕಾರಿಗಳನ್ನು ಬಳಸಿಕೊಂಡು ಸಾಸಿವೆ ಅಥವಾ ರಾಯಿತವನ್ನು ಮಾಡಬಹುದು. ತೆಂಗಿನಕಾಯಿ ಹಾಗೂ ಮೊಸರನ್ನು ಬಳಸಿಕೊಂಡು ಮಾಡಲಾಗುವ ಸಾಸಿವೆ ಅನ್ನದೊಂದಿಗೆ ಸೂಪರ್ ಎನಿಸುತ್ತದೆ. ಇಂದು ನಾವು ಬೆಂಡೆಕಾಯಿಯನ್ನು ಬಳಸಿ ಸಾಸಿವೆ (Ladys Finger Sasive) ಅಥವಾ ರಾಯಿತವನ್ನು ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದನ್ನು ನೀವು ಕೂಡಾ ಮಾಡಿ ಸವಿದು ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ – 10-12
ಹಸಿರು ಮೆಣಸಿನ ಕಾಯಿ – 2
ಸಾಸಿವೆ – ಅರ್ಧ ಟೀಸ್ಪೂನ್
ತುರಿದ ತೆಂಗಿನಕಾಯಿ – 1 ಕಪ್
ಮೊಸರು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮಸಾಲೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಉದ್ದಿನ ಬೇಳೆ – ಅರ್ಧ ಟೀಸ್ಪೂನ್
ಕೆಂಪು ಮೆಣಸು – 1
ಕರಿಬೇವಿನ ಎಲೆಗಳು – ಕೆಲವು ಇದನ್ನೂ ಓದಿ: ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಟೇಸ್ಟಿ ಆಲೂಗಡ್ಡೆ ರವಾ ಫ್ರೈ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ.
* ಬಳಿಕ ಸಣ್ಣದಾಗಿ ಹೆಚ್ಚಿ ಪಕ್ಕಕ್ಕಿಡಿ.
* ಈಗ ಪ್ಯಾನ್ ಅನ್ನು ತೆಗೆದುಕೊಂಡು ಬಿಸಿ ಮಾಡಿ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಒಡೆದ ಕೆಂಪು ಮೆಣಸು, ಹಾಗೂ ಕರಿಬೇವಿನ ಎಲೆ ಹಾಕಿ.
* ಸಾಸಿವೆ ಸಿಡಿದ ಬಳಿಕ ಬೆಂಡೆಕಾಯಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ.
* ಈಗ ಉರಿಯನ್ನು ಆಫ್ ಮಾಡಿ, ಬೆಂಡೆಕಾಯಿಯನ್ನು ತಣ್ಣಗಾಗಲು ಬಿಡಿ.
* ಈಗ ಮಿಕ್ಸರ್ ಜಾರ್‌ಗೆ ತುರಿದ ತೆಂಗಿನಕಾಯಿ, ಸಾಸಿವೆ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ಮೊಸರನ್ನೂ ಸೇರಿಸಿಕೊಳ್ಳಿ.
* ಈಗ ಕಡಿದ ಮಿಶ್ರಣವನ್ನು ಹುರಿದು ತಣ್ಣಗಾದ ಬೆಂಡೆಕಾಯಿಗೆ ಹಾಕಿ ಮಿಶ್ರಣ ಮಾಡಿ.
* ಬೆಂಡೆಕಾಯಿ ಮೊಸರನ್ನು ಹೀರಿಕೊಳ್ಳಲು 10-15 ನಿಮಿಷಗಳ ಕಾಲ ಪಕ್ಕಕ್ಕಿಡಿ.
* ಇದೀಗ ಬೆಂಡಕಾಯಿ ಸಾಸಿವೆ ತಯಾರಾಗಿದ್ದು, ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ಸ್ಟಫ್ಡ್ ಹಾಗಲಕಾಯಿಯನ್ನು ಒಮ್ಮೆ ಮಾಡಿ ನೋಡಿ – ಮತ್ತೆಂದೂ ಈ ತರಕಾರಿ ಬೇಡ ಎನ್ನಲ್ಲ