ಊಟಕ್ಕೆ ರುಚಿಕರವಾದ ಒಂದು ಸೈಡ್ ಡಿಶ್ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಫಟಾಫಟ್ ಅಂತ ಏನಾದರೂ ಮಾಡಬೇಕು. ಇಂತಹ ಸಮಯದಲ್ಲಿ ನೀವು ಆಲೂಗಡ್ಡೆ ರವಾ ಫ್ರೈ (Potato Rava Fry) ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಮಾಡಬಹುದಾದ ಆಲೂಗಡ್ಡೆ ರವಾ ಫ್ರೈ ಊಟದ ರುಚಿ ಹೆಚ್ಚಿಸುತ್ತದೆ. ಆಲೂಗಡ್ಡೆ ರವಾ ಫ್ರೈ ಒಮ್ಮೆ ನೀವು ಕೂಡಾ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 2-3
ಎಣ್ಣೆ – ತವಾ ಫ್ರೈಗೆ ಬೇಕಾಗುವಷ್ಟು
ಮ್ಯಾರಿನೇಟ್ ಮಾಡಲು:
ಕೆಂಪು ಮೆಣಸಿನ ಪುಡಿ – 2-3 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಹಿಂಗ್ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಲೇಪನಕ್ಕೆ:
ರವೆ – 1 ಕಪ್
ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ಸ್ಟಫ್ಡ್ ಹಾಗಲಕಾಯಿಯನ್ನು ಒಮ್ಮೆ ಮಾಡಿ ನೋಡಿ – ಮತ್ತೆಂದೂ ಈ ತರಕಾರಿ ಬೇಡ ಎನ್ನಲ್ಲ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆದು, ತೆಳುವಾದ ಸ್ಲೈಸ್‌ಗಳಾಗಿ ಕತ್ತರಿಸಿ, ನೀರಿನಲ್ಲಿ ನೆನೆಸಿ.
* ಮ್ಯಾರಿನೇಶನ್ ತಯಾರಿಸಲು ಒಂದು ಪಾತ್ರೆಯಲ್ಲಿ ಉಪ್ಪು, ಕೆಂಪು ಮೆಣಸಿನ ಪುಡಿ, ಅರಿಶಿನ, ಹಿಂಗ್ ಹಾಕಿ, ಸ್ವಲ್ಪ ನೀರು ಸೇರಿಸಿ, ದಪ್ಪನೆಯ ಪೇಸ್ಟ್ ತಯಾರಿಸಿ.
* ನೆನೆಸಿಟ್ಟ ಆಲೂಗಡ್ಡೆಯನ್ನು ನೀರಿನಿಂದ ತೆಗೆದು, ಮ್ಯಾರಿನೇಶನ್ ಮಸಾಲೆಗೆ ಹಾಕಿ, ಮಿಶ್ರಣ ಮಾಡಿ. 15 ನಿಮಿಷ ಪಕ್ಕಕ್ಕಿಡಿ.
Advertisement
* ಈಗ ಒಂದು ತಟ್ಟೆ ತೆಗೆದುಕೊಂಡು, ಅದಕ್ಕೆ ರವೆ, ಕೆಂಪು ಮೆಣಸಿನಪುಡಿ ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಈಗ ಆಲೂಗಡ್ಡೆ ಸ್ಲೈಸ್‌ಗಳನ್ನು ಒಂದೊಂದಾಗಿಯೇ ರವೆ ಮಿಶ್ರಣದಲ್ಲಿ ಹಾಕಿ, ಸಂಪೂರ್ಣ ಕೋಟ್ ಆಗುವಂತೆ ಲೇಪಿಸಿಕೊಳ್ಳಿ.
* ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಆಲೂಗಡ್ಡೆ ಸ್ಲೈಸ್‌ಗಳನ್ನು ಅದರಲ್ಲಿಟ್ಟು, ಫ್ರೈ ಮಾಡಿ.
* ಆಲೂಗಡ್ಡೆ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಎರಡೂ ಬದಿಯಲ್ಲಿ ಕಾಯಿಸಿ.
* ಇದೀಗ ಆಲೂಗಡ್ಡೆ ರವಾ ಫ್ರೈ ತಯಾರಾಗಿದ್ದು, ಊಟ ಅಥವಾ ಸ್ನ್ಯಾಕ್ಸ್ ಆಗಿ ಸವಿಯಿರಿ. ಇದನ್ನೂ ಓದಿ: ದೇಸಿ ಮಸಾಲಾ ಸ್ವೀಟ್ ಕಾರ್ನ್ ಮನೆಯಲ್ಲೇ ಮಾಡಿ ನೋಡಿ