– ಇಸ್ಲಾಂಗೂ ಭಯೋತ್ಪಾದನೆಗೂ ಸಂಬಂಧವಿಲ್ಲ
ನವದೆಹಲಿ: ಭಾರತದಲ್ಲಿ (India) ವಾಸಿಸುವ ಮುಸ್ಲಿಮರು (Muslims) ತಮ್ಮ ಸಂವಿಧಾನದ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಸಹ ನಾಗರಿಕರೊಂದಿಗೆ ಸಹೋದರ ಸಂಬಂಧವನ್ನು ಹೊಂದಿದ್ದಾರೆ ಎಂದು ವಿಶ್ವ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ ಇಸ್ಸಾ (Mohammed bin Abdulkarim Al-Issa) ಹೇಳಿದ್ದಾರೆ.
Advertisement
ಅಲ್ ಇಸ್ಸಾ ಅವರು ಭಾರತಕ್ಕೆ ಭೇಟಿ ನೀಡಿದ ಹಾಗೂ ರಾಜಕೀಯ ನಾಯಕರೊಂದಿಗೆ ಸಭೆ ನಡೆಸಿದ ಕುರಿತು ಮಾತನಾಡಿದ್ದಾರೆ. ಕೆಲ ಭಿನ್ನಾಭಿಪ್ರಾಯಗಳು ದೇಶದಲ್ಲಿ ಇರಬಹುದು. ಆ ಸಮಸ್ಯೆಗಳನ್ನು ಸಂವಿಧಾನದೊಳಗೆ ಅವರು ಹಂಚಿಕೊಳ್ಳುವ ಪ್ರೀತಿ ಹಾಗೂ ಸಹೋದರತ್ವದ ಚೌಕಟ್ಟಿನಲ್ಲಿ ಚರ್ಚಿಸಬೇಕು ಎಂದು ತಿಳಿಸಿದರು.
Advertisement
Advertisement
ಸಹಜವಾಗಿ ಭಾರತದ ಭೇಟಿ ನಮ್ಮ ಸ್ನೇಹಿತರ ಭೇಟಿಯಾಗಿದೆ. ಈ ಭೇಟಿಯ ಬಗ್ಗೆ ನನಗೆ ತುಂಬಾ ಸಂತೋಷವಿದೆ. ಈ ಭೇಟಿಯ ಸಂದರ್ಭದಲ್ಲಿ ಬಹಳ ಮುಖ್ಯವಾದ ಸಭೆಗಳನ್ನು ನಡೆಸಿದ್ದೇವೆ. ಅಲ್ಲಿನ ರಾಜಕೀಯ ನಾಯಕರನ್ನು ಹಾಗೂ ಧಾರ್ಮಿಕ ನಾಯಕರನ್ನು ಭೇಟಿಯಾಗಿ ನನಗೆ ತುಂಬಾ ಸಂತೋಷವಾಗಿದೆ. ಸಮಾಜದ ಸಾಮರಸ್ಯ ಹಾಗೂ ಪ್ರಪಂಚದ ಶಾಂತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ನಾವು ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ತಿರುಪತಿ ದೇವರಲ್ಲಿ ಪ್ರಾರ್ಥನೆ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರ ಖಂಡನೆ
Advertisement
ಭಯೋತ್ಪಾದಕ ಸಂಘಟನೆಗಳನ್ನು ಕಟುವಾಗಿ ಟೀಕಿಸಿದ ವಿಶ್ವ ಮುಸ್ಲಿಂ ಲೀಗ್ ಮುಖ್ಯಸ್ಥ, ಇಸ್ಲಾಂ ಹಾಗೂ ಭಯೋತ್ಪಾದನೆ ಒಂದಕ್ಕೊಂದು ಸಂಬಂಧ ಹೊಂದಿಲ್ಲ. ಭಯೋತ್ಪಾದಕರಿಗೆ ಯಾವುದೇ ಒಂದು ಧರ್ಮ ಅಥವಾ ದೇಶವಿಲ್ಲ. ಈ ಆಲೋಚನೆಗಳನ್ನು ನಾವು ವಿರೋಧಿಸುತ್ತೇವೆ ಹಾಗೂ ಅದನ್ನು ಜಗತ್ತಿಗೆ ಪ್ರತಿಪಾದಿಸುತ್ತೇವೆ. ಧರ್ಮ ಚಿತ್ರಣವನ್ನು ವಿರೂಪಗೊಳಿಸುವ ಈ ವಿಷಯದ ಮೇಲೆ ಕಾರ್ಯನಿರ್ವಹಿಸುತ್ತೇವೆ ಎಂದರು. ಇದನ್ನೂ ಓದಿ: ನಿಮ್ಮ ರೂಮ್ನಲ್ಲಿ ಡ್ರಗ್ಸ್ ಇದೆ – ಪೊಲೀಸರಂತೆ ನುಗ್ಗಿ ಯುವಕರ ರೂಮ್ ದರೋಡೆ!
Web Stories